Film News

ನೀವು ಟಬು ಜೊತೆಗೇ ಯಾಕೆ ಹೆಚ್ಚು ಸಿನೆಮಾ ಮಾಡುತ್ತೀರಾ? ನೆಟ್ಟಿಗನ ಪ್ರಶ್ನೆಗೆ ಅಜಯ್ ದೇವಗನ್ ಉತ್ತರ ಏನು ಗೊತ್ತಾ?

ಬಾಲಿವುಡ್ ಸ್ಟಾರ್‍ ನಟರಲ್ಲಿ ಅಜಯ್ ದೇವಗನ್ ಸಹ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಅಜಯ್ ದೇವಗನ್ ಸೋಲು ಗೆಲುವಿಗೆ ಸಂಬಂಧವಿಲ್ಲ ಎಂಬಂತೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ RRR ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಇನ್ನೂ ಅಜಯ್ ದೇವಗನ್ ಭೋಳಾ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಮಾ.30 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ ಸಾಗುತ್ತಿವೆ.

ಬಾಲಿವುಡ್ ನಟ ಅಜಯ್ ದೇವಗನ್ ಭೋಳಾ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ತಮಿಳಿನ  ಖೈದಿ ಸಿನೆಮಾದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಈ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಈ ಸಿನೆಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಮೋಷನ್ ಕೆಲಸಗಳನ್ನು ಸಹ ಭರದಿಂದ ನಡೆಸುತ್ತಿದ್ದಾರೆ. ಅನೇಕ ಈವೆಂಟ್ ಗಳ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ. ಅದರ ಜೊತೆಗೆ ಅಜಯ್ ದೇವಗನ್ ಸೋಷಿಯಲ್ ಮಿಡಿಯಾದಲ್ಲೂ ಸಹ ಪ್ರಚಾರ ಶುರು ಮಾಡಿದ್ದಾರೆ. ಈ ಹಾದಿಯಲ್ಲೇ ಟ್ವಿಟರ್‍ ಖಾತೆಯಲ್ಲಿ ಅಜಯ್ ದೇವಗನ್ ಆಸ್ಕ್ ಭೋಳಾ ಎಂದು ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಅಜಯ್ ದೇವಗನ್ ಸಹ ಉತ್ತರಗಳನ್ನು ನೀಡಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅಜಯ್ ದೇವಗನ್ ರವರಿಗೆ ಅಭಿಮಾನಿಯೊಬ್ಬ ಇಂಟ್ರಸ್ಟಿಂಗ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅಭಿಮಾನಿ ಅಜಯ್ ದೇವಗನ್ ರವರಿಗೆ ಪ್ರಶ್ನೆ ಮಾಡುತ್ತಾ ನೀವು ಎಲ್ಲಾ ಸಿನೆಮಾಗಳನ್ನು ಟಬು ರವರೊಂದಿಗೆ ಮಾಡುತ್ತೀದ್ದೀರಾ, ಅದಕ್ಕೆ ಏನಾದರೂ ಕಾರಣ ಇದೆಯೇ ಎಂದು ಕೇಳಿದ್ದಾರೆ. ಇನ್ನೂ ಈ ಪ್ರಶ್ನೆಗೆ ಅಜಯ್ ಸಹ ಉತ್ತರ ನೀಡುತ್ತಾ. ನಾನು ಟಬು ಜೊತೆಗೆ ಸಿನೆಮಾ ಮಾಡಲು ಆಕೆಯ ಡೇಟ್ಸ್ ಖಾಲಿಯಾಗಿದೆ ಆದ್ದರಿಂದ ಆಕೆಯೊಂದಿಗೆ ಸಿನೆಮಾ ಮಾಡುತ್ತಿದ್ದೇನೆ ಎಂದು ಫನ್ನಿಯಾಗಿ ಟ್ವೀಟ್ ಮೂಲಕ ಉತ್ತರಿಸಿದ್ದಾರೆ. ಇನ್ನೂ ಈ ಟ್ವೀಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗುತ್ತಿವೆ.

ಇನ್ನೂ ಅಜಯ್ ದೇವಗನ್ ಹಾಗೂ ಟಬು ಕಾಂಬಿನೇಷನ್ ನಲ್ಲಿ ದೃಶ್ಯಂ, ದೃಶ್ಯಂ-2, ವಿಜಯ್ ಪಥ್, ತಕ್ಷಕ್, ಗೋಲ್ ಮಾಲ್ ಅಗೈನ್, ದೇದೆ ಪ್ಯಾರ್‍ ದೇ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಈ ಕಾರಣದಿಂದಲೇ ಅಭಿಮಾನಿಯೊಬ್ಬರು ಈ ರೀತಿಯ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೂ ಈ ಹಾದಿಯಲ್ಲೇ ಅನೇಕ ಪ್ರಶ್ನೆಗಳಿಗೆ ಅಜಯ್ ದೇವಗನ್ ಉತ್ತರ ನೀಡಿದ್ದಾರೆ.

Most Popular

To Top