Film News

ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಮಿಲ್ಕಿ ಬ್ಯೂಟಿ, ಆತನೊಂದಿಗೆ ಲಿಪ್ ಲಾಕ್, ಬೆಡ್ ಸೀನ್ ಗಳಲ್ಲೂ ಸಹ ನಟನೆ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ತಮನ್ನಾ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಆಕೆ ಬ್ಯೂಟಿಗೆ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಫಿದಾ ಆಗಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ರೀತಿಯ ಕ್ರೇಜ್ ಬೇರೆ ಯಾವ ನಟಿಯೂ ಸಹ ಪಡೆದುಕೊಂಡಿಲ್ಲ ಎಂದು ಹೇಳಬಹುದಾಗಿದೆ. ಸೌತ್ ಸಿನಿರಂಗದ ಅನೇಕ ಸಿನೆಮಾಗಳ ಮೂಲಕ 15 ವರ್ಷಗಳಿಂದ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಆ ನಟನೊಂದಿಗೆ ಎಂಬುದು ವಿಶೇಷ ಎನ್ನಲಾಗುತ್ತಿದೆ.

ನಟಿ ತಮನ್ನಾ ತೆಲುಗು ಸಿನಿರಂಗದಲ್ಲಿ ಕೆರಿಯರ್‍ ಆರಂಭಿಸಿ 15 ವರ್ಷಗಳಾಗಿದೆ. ಈಗಾಗಲೇ ತಮನ್ನಾ ಯಾವುದೇ ಅಡ್ಡಿಯಿಲ್ಲ ಎಂಬಂತೆ ಗ್ಲಾಮರಸ್ ಆಗಿಯೇ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆಕೆ ಯಾವುದೇ ಸಿನೆಮಾದಲ್ಲಿ ಲಿಪ್ ಕಿಸ್ ದೃಶ್ಯಗಳಲ್ಲಾಗಲೀ ಅಥವಾ ಇಂಟಿಮೇಟ್ ಸೀನ್ ಗಳಲ್ಲಾಗಿ ನಟಿಸಿದ್ದನ್ನು ನಾವು ನೋಡಿಲ್ಲ. ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ತನಗೆ ತಾನೇ ನಿಬಂಧನೆಗಳನ್ನು ಹಾಕಿಕೊಂಡಿದ್ದರಂತೆ ತಮನ್ನಾ. ಆದರೆ ಇದೀಗ ಮೊದಲ ಬಾರಿಗೆ ಅಂತಹ ದೃಶ್ಯಗಳಲ್ಲಿ ನಟಿಸುವ ಮೂಲಕ ಆ ನಿಬಂಧನೆಗಳನ್ನು ಬ್ರೇಕ್ ಮಾಡಿದ್ದಾರೆ. ವೆಬ್ ಸಿರೀಸ್ ಒಂದರಲ್ಲಿ ಆಕೆ ಈ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಡಲ್ಟ್ ಕಂಟೆಂಟ್ ಇರುವಂತಹ ವೆಬ್ ಸಿರೀಸ್ ಒಂದರಲ್ಲಿ ತಮನ್ನಾ ನಟಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕಿಯಾರಾ ಅಡ್ವಾನಿ ನಟಿಸಿದ ಲಸ್ಟ್ ಸ್ಟೋರಿಸ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿ ಭಾರಿ ಸಂಚಲನ ಸೃಷ್ಟಿ ಮಾಡಿದ್ದರು. ಈ ಸಿರೀಸ್ ಅಡಲ್ಟ್ ಕಂಟೆಂಟ್ ಹೊಂದಿದ್ದು, ಕಿಯಾರಾ ತುಂಬಾ ಬೋಲ್ಡ್ ಆಗಿಯೇ ನಟಿಸಿದ್ದರು. ಇದೀಗ ಲಸ್ಟ್ ಸ್ಟೊರೀಸ್ ಸೀಸನ್-2 ಬರಲಿದೆ. ಈ ಸೀರಿಸ್ ಶೀಘ್ರದಲ್ಲೇ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸೀಸನ್ ನಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಜೊತೆಗೆ ತಮನ್ನಾ ಪ್ರಿಯಕರ ಎಂದು ಹೇಳಲಾಗುತ್ತಿರುವ ವಿಜಯ್ ವರ್ಮಾ ಸಹ ಈ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ನೀನಾ ಗುಪ್ತಾ, ಕಾಜೋಲ್ ಸಹ ಈ ಸೀರಿಸ್ ನಲ್ಲಿ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ತನ್ನ ರೂಮರ್‍ ಲವರ್‍ ಜೊತೆಗೆ ಲಿಪ್ ಲಾಕ್ ಹಾಗೂ ಬೆಡ್ ರೂಂ ದೃಶ್ಯಗಳಲ್ಲೂ ಸಹ ನಟಿಸಿದ್ದಾರೆ ಎಂಬ ಸುದ್ದಿಗಳು ಇದೀಗ ಕೇಳಿಬರುತ್ತಿವೆ.

ಇನ್ನೂ ತಮನ್ನಾ ಈ ಹಿಂದೆ ಎಂದೂ ಸಹ ಈ ರೇಂಜ್ ನಲ್ಲಿ ನಟಿಸಿಲ್ಲ. ಇದೀಗ ವಿಜಯ್ ವರ್ಮಾ ಜೊತೆಗೆ ಅಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಕಾರಣದಿಂದ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಜೊತೆಗೆ ಪ್ರಿಯಕರನಿಗಾಗಿ ತನ್ನ ನಿಬಂಧನೆಗಳನ್ನೂ ಸಹ ತ್ಯಾಗ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ರೂಮರ್‍ ಬಗ್ಗೆ ತಮನ್ನಾ ಎಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಆದರೆ ಅವರಿಬ್ಬರೂ ಅನೇಕ ಕಡೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Most Popular

To Top