ವಿಶ್ವವೇ ಮೆಚ್ಚಿದಂತಹ RRR ಹಾಗೂ ಪುಷ್ಪಾ ಸಿನೆಮಾಗಳ ಬಗ್ಗೆ ಕೀಳಾಗಿ ಮಾತನಾಡಿದ ಸೀನಿಯರ್ ನಟ ನಸಿರುದ್ದೀನ್….!

ಇಡೀ ವಿಶ್ವವೇ ಮೆಚ್ಚಿದಂತಹ RRR ಹಾಗೂ ಪುಷ್ಪಾ ಸಿನೆಮಾದ ಬಗ್ಗೆ ಸೀನಿಯರ್‍ ನಟರೊಬ್ಬರು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಸ್ಕರ್‍ ಪಡೆದುಕೊಂಡ RRR ಸಿನೆಮಾ ಹಾಗೂ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡ ಪುಷ್ಪಾ ಸಿನೆಮಾದಲ್ಲಿ ಥ್ರಿಲ್ ಆಗುವಂತಹ…

ಇಡೀ ವಿಶ್ವವೇ ಮೆಚ್ಚಿದಂತಹ RRR ಹಾಗೂ ಪುಷ್ಪಾ ಸಿನೆಮಾದ ಬಗ್ಗೆ ಸೀನಿಯರ್‍ ನಟರೊಬ್ಬರು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಸ್ಕರ್‍ ಪಡೆದುಕೊಂಡ RRR ಸಿನೆಮಾ ಹಾಗೂ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡ ಪುಷ್ಪಾ ಸಿನೆಮಾದಲ್ಲಿ ಥ್ರಿಲ್ ಆಗುವಂತಹ ಸನ್ನಿವೇಶಗಳು ಬಿಟ್ಟರೇ ಬೇರೆ ಏನಿದೆ, ಆ ಸಿನೆಮಾಗಳನ್ನು ನಾನು ಸಂಪೂರ್ಣವಾಗಿ ನೋಡೋಕೆ ಆಗಿಲ್ಲ ಎಂದು ಬಾಲಿವುಡ್ ಸೀನಿಯರ್‍ ನಟ ನಸಿರುದ್ದೀನ್ ಶಾ ಕಾಮೆಂಟ್ ಮಾಡಿದ್ದು, ಆತನ ಕಾಮೆಂಟ್ ಗಳು ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದೆ.

ಬಾಲಿವುಡ್ ಸೀನಿಯರ್‍ ನಟ ಇತ್ತೀಚಿಗೆ RRR ಹಾಗೂ ಪುಷ್ಪಾ ಸಿನೆಮಾಗಳ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಈ ಎರಡೂ ಸಿನೆಮಾಗಳನ್ನು ನಾನು ಸಂಪೂರ್ಣವಾಗಿ ನೋಡಲು ಆಗಲಿಲ್ಲ. ನನಗೆ ಇಷ್ಟವಾಗಲಿಲ್ಲ. ಥ್ರಿಲ್ ಮಾಡುವಂತಹ ಅಂಶಗಳನ್ನು ಹೊರತುಪಡಿಸಿ ಈ ಸಿನೆಮಾಗಳಲ್ಲಿ ಬೇರೆ ಏನಿದೆ. ಈ ಎರಡೂ ಸಿನೆಮಾಗಳಲ್ಲಿ ಪುರುಷರ ಮಾಂಸ ಕಂಡಗಳನ್ನು, ಅಧಿಪತ್ಯವನ್ನು ಮಾತ್ರ ತೋರಿಸಿದ್ದಾರೆ. RRR ಸಿನೆಮಾ ಮಹಿಳಾ ಪ್ರೇಕ್ಷಕರು ಇಷ್ಟಪಡುತ್ತಾರೆ ಅಂತ ನನಗೆ ಅನ್ನಿಸಿಲ್ಲ. ಆದರೆ ಮಣಿರತ್ನಂ ರವರ ಪೊನ್ನಿಯನ್ ಸೆಲ್ವನ್ ಸಿನೆಮಾ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಆ ಸಿನೆಮಾವನ್ನು ನಾನು ಸಂಪೂರ್ಣವಾಗಿ ನೋಡಿದ್ದೇನೆ. ಮಣಿರತ್ನಂ ದೊಡ್ಡ ಮೇಕರ್‍ ಆತ ಯಾವುದೇ ಅಜೆಂಡಾ ಇಲ್ಲದೇ ಸಿನೆಮಾಗಳನ್ನು ಮಾಡುತ್ತಾರೆ ಎಂದು ಹೊಗಳಿದ್ದಾರೆ.

ಇನ್ನೂ ಈ ಹಿಂದೆ ಸಹ ದಿ ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿಸ್ ಸಿನೆಮಾಗಳ ಬಗ್ಗೆ ಸಹ ನಸೀರುದ್ದೀನ್ ತೀವ್ರವಾಗಿ ವಿಮರ್ಶೆ ಮಾಡಿದ್ದರು. ಕಮರ್ಷಿಯಲ್ ಸಿನೆಮಾಗಳಾದ RRR ಹಾಗೂ ಪುಷ್ಪಾ ಎರಡನ್ನೂ ನಸೀರುದ್ದೀನ್ ಶಾ ವಿರೋಧಿಸುತ್ತಿರುವ ಕಾರಣ ಆದರೂ  ಏನು ಎಂಬುದು ಅರ್ಥವಾಗುತ್ತಿಲ್ಲ ಎನ್ನಲಾಗಿದೆ. ಪುಷ್ಪಾ ಸಿನೆಮಾ ದೇಶದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿದ್ದರೇ, RRR ಆಸ್ಕರ್‍ ಜೊತೆಗೆ ಮತಷ್ಟು ಅಂತರಾಷ್ಟ್ರೀಯ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಅಂತಹ ಖ್ಯಾತಿ ಪಡೆದುಕೊಂಡ ಸಿನೆಮಾಗಳ ಬಗ್ಗೆ ನಸೀರುದ್ದೀನ್ ಕೀಳಾಗಿ ಮಾತನಾಡಿದ್ದಾರೆ. ಇನ್ನೂ ಸೀನಿಯರ್‍ ನಟನ ಈ ಹೇಳಿಕೆಗಳಿಗೆ ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಿದ್ದಾರೆ.