News

ಕೋಪದಲ್ಲಿ ಲವರ್ ಗುಪ್ತಾಂಗವನ್ನೇ ಕತ್ತರಿಸಿದ ಪ್ರಿಯತಮೆ, ಕಾರಣ ಕೇಳಿದ್ರೇ ಶಾಕ್ ಆಗೋದು ಖಚಿತ…..!

ಸಾಮಾನ್ಯವಾಗಿ ಮಹಿಳೆಯರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೆದಾಗ ತಮ್ಮನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪುರುಷರ ಮೇಲೆ ಹಲ್ಲೆಗಳು ನಡೆಸುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪ್ರೇಯಸಿ ಕೋಪದಲ್ಲಿ ತನ್ನ ಪ್ರಿಯಕರನ ಗುಪ್ತಾಂಗವನ್ನೆ ಕತ್ತರಿಸಿದ್ದಾರೆ. ಆಕೆ ತನ್ನ ಪ್ರಿಯಕರನ ಗುಪ್ತಾಂಗ ಕತ್ತರಿಸಲು ಕಾರಣ ಏನು ಎಂಬುದನ್ನು ತಿಳಿದರೇ ನೀವು ಸಹ ಶಾಕ್ ಆಗ್ತೀರಾ. ಅಷ್ಟಕ್ಕೂ ಆಕೆ ತನ್ನ ಪ್ರಿಯಕರನ ಗುಪ್ತಾಂಗ ಕತ್ತರಿಸಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿವಾಹಿತನಾಗಿದ್ದ ವ್ಯಕ್ತಿಯೊಬ್ಬ ಅದೇ ಗ್ರಾಮದಲ್ಲಿರುವ ಬೇರೆ ಮಹಿಳಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಆಕೆ ಕಳೆದ ಸೋಮವಾರ ರಾತ್ರಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಪ್ರೇಯಸಿ ಮನೆಗೆ ಹೋದ ಆ ವ್ಯಕ್ತಿಗೆ ಶಾಕ್ ಒಂದು ಕಾದಿತ್ತು. ಆ ಮಹಿಳೆ ತನ್ನ ಸ್ನೇಹಿತೆಯನ್ನು ಸಹ ಮನೆಗೆ ಕರೆಸಿಕೊಂಡಿದ್ದಾಳೆ. ಪ್ರಿಯಕರ ಮನೆಗೆ ಬಂದ ಕೂಡಲೇ ಆಕೆ ವಿಚಿತ್ರ ಬೇಡಿಕೆಯೊಂದನ್ನು ಆತನ ಮುಂದೆ ಇಟ್ಟಿದ್ದಾಳೆ. ಪ್ರೇಯಸಿ ತನ್ನ ಪ್ರಿಯಕರನಿಗೆ ಆಕೆಯ ಸ್ನೇಹಿತೆಯ ಜೊತೆಗೂ ಲೈಂಗಿಕ ಸಂಪರ್ಕ ಹೊಂದುವಂತೆ ಬೇಡಿಕೆ ಇಟ್ಟಿದ್ದಾಳೆ. ಅದನ್ನು ಕೇಳಿದ ಆ ವ್ಯಕ್ತಿ ಶಾಕ್ ಆಗಿ ಆಕೆಯ ಬೇಡಿಕೆಯನ್ನು ನಿರಾಕರಿಸಿದ್ದಾನೆ. ಆದರೆ ಪ್ರಿಯತಮೆ ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾಳೆ ಎನ್ನಲಾಗಿದೆ.

ಇನ್ನೂ ಪ್ರೇಯಸಿ ಒತ್ತಾಯವನ್ನು ಒಪ್ಪದೇ ಇದ್ದ ಪ್ರಿಯಕರನ ಮೇಲೆ ಕೋಪಗೊಂಡು ಅವನ ಗುಪ್ತಾಂಗವನ್ನು ಕತ್ತರಿಸಿಬಿಟ್ಟಿದ್ದಾಳೆ. ಆದ ನೋವಿನಿಂದ ಜೋರಾಗಿ ಕೂಗಾಡಿದ್ದಾನೆ. ಆತನ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಇನ್ನೂ ಈ ವೇಳೆ ಮುಜುಗರಕ್ಕೊಳಗಾದ ಆ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ಈ ವಿಚಾರ ಮನೆಯಲ್ಲಿ ತಿಳಿಸಿದ್ದಾನೆ. ಮರ್ಯಾದೆಯ ಕಾರಣದಿಂದ ಯಾರಿಗೂ ತಿಳಿಸದಂತೆ ಮನೆಯವರು ಸುಮ್ಮನಿದ್ದಾರೆ. ಆದರೆ ಸಂತ್ರಸ್ತನ ಪತ್ನಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top