ಹೃದಯಾಘಾತದ ಬಳಿಕ ವಿಡಿಯೋ ಮೂಲಕ ಪ್ರತ್ಯಕ್ಷರಾದ ನಟಿ ಸುಸ್ಮಿತಾ ಸೇನ್, 95% ರಷ್ಟು ಹೃದಯ ಬ್ಲಾಕ್ ಆಗಿತ್ತು ಎಂದ ನಟಿ..!

ಮಾಜಿ ವಿಶ್ವ ಸುಂದರಿ ಸುಸ್ಮಿತಾ ಸೇನ್ ಇತ್ತೀಚಿಗೆ ತಾನು ಹೃದಯಾಘಾತಕ್ಕೆ ಗುರಿಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ಸುದ್ದಿ ಹಂಚಿಕೊಂಡಿದ್ದರು. ಈ ವಿಚಾರವನ್ನು ಸುಸ್ಮಿತಾ ಸೇನ್ ತಡವಾಗಿ ತಿಳಿಸಿದ್ದರು. ಇನ್ನೂ ಈ ಸುದ್ದಿಯನ್ನು ಹೊರಹಾಕುತ್ತಿದ್ದಂತೆ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ ಆಕೆ ವಿಡಿಯೋ ಮೂಲಕ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಾಸಿವ್ ಹಾರ್ಟ್ ಅಟ್ಯಾಕ್ ಆಗಿದ್ದು, 95% ಬ್ಲಾಕೇಜ್ ಆಗಿತ್ತು ಎಂದು ಆಕೆ ವಿಡಿಯೋ ಮೂಲಕ ಹೇಳಿದ್ದಾರೆ.

ನಟಿ ಸುಸ್ಮಿತಾ ಸೇನ್ ಸದಾ ವರ್ಕೌಟ್, ಯೋಗ ಮಾಡುತ್ತಿದ್ದರು. ಆದರೆ ಆಕೆಗೆ ಹಾರ್ಟ್ ಅಟ್ಯಾಕ್ ಆಗಿದ್ದ ವಿಚಾರ ಅನೇಕರಿಗೆ ಶಾಕ್ ಆಗಿತ್ತು. ಇನ್ನೂ ಆಕೆ ತಡವಾಗಿ ಹೃದಯಾಘಾತಕ್ಕೆ ಗುರಿಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಸುಸ್ಮಿತಾ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇನ್ಸ್ಟಾ ಲೈವ್ ನಲ್ಲಿ ಮಾತನಾಡಿದ ಸುಸ್ಮಿತಾ ಪ್ರತಿದಿನ ವ್ಯಾಯಾಮ ಮಾಡಿದರೂ ಸಹ ಆರೋಗ್ಯ ಕೆಡುತ್ತದೆ. ವ್ಯಾಯಾಮದಿಂದ ಏನು ಪ್ರಯೋಜನವಿಲ್ಲ. ವರ್ಕೌಟ್ ಮಾಡಿದರೂ ಸಹ ಸುಸ್ಮಿತಾಗೆ ಹಾಗೆ ಆಗಿದೆ ಎಂದರೇ ಏಕೆ ವರ್ಕೌಟ್, ಯೋಗ ಮಾಡಬೇಕು ಎಂದು ಯೋಚಿಸಬೇಡಿ. ನಮ್ಮ ಆರೋಗ್ಯಕ್ಕೆ ವ್ಯಾಯಾಮ ತುಂಬಾ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಸದ್ಯ ಸುಸ್ಮಿತಾ ಗುಣಮುಖರಾಗುತ್ತಿದ್ದಾರೆ. ಹೃದಯಾಘಾತದ ಬಳಿಕ ಆಕೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಸುಸ್ಮಿತಾ ಇನ್ಸ್ಟಾ ಲೈವ್ ನಲ್ಲಿ ಬಂದು ಅಭಿಮಾನಿಗಳಿಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಇನ್ನೂ ಆಕೆಯ ವಿಡಿಯೋ ನೋಡಿದ ಅನೇಕರು ಶೀಘ್ರ ಗುಣಮುಖರಾಗಿ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎಂದು ಸಲಹೆ ಗಳನ್ನು ನೀಡುತ್ತಿದ್ದಾರೆ. ಜೊತೆಗೆ ಸುಸ್ಮಿತಾ ಸಹ ಅಭಿಮಾನಿಗಳ ಕಾಮೆಂಟ್ ಗಳಿಗೆ ರಿಯಾಕ್ಟ್ ಆಗಿದ್ದಾರೆ. ನಾನು ನಿಮ್ಮೊಂದಿಗೆ ಈ ರೀತಿ ಮಾತನಾಡುತ್ತಿದ್ದೇನೆ. ಎಲ್ಲಾ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ನಾನು ತಂಬಾ ಅದೃಷ್ಟವಂತೆ ಎಂದು ಸುಸ್ಮಿತಾ ರಿಯಾಕ್ಟ್ ಆಗಿದ್ದಾರೆ.

ಇನ್ನೂ ನಟಿ ಸುಸ್ಮಿತಾ ಸೇನ್ ಸುಮಾರು ವರ್ಷಗಳಿಂದ ಸಿನೆಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೆ ವೆಬ್ ಸಿರೀಸ್ ಗಳಲ್ಲಿ ನಟಿಸಿ ಫೇಂ ಸಂಪಾದಿಸಿಕೊಂಡಿದ್ದಾರೆ. ಆಕೆ ಅಭಿನಯದ ಆರ್ಯ ವೆಬ್ ಸಿರೀಸ್ ತುಂಬಾನೆ ಫೇಂ ಪಡೆದುಕೊಂಡಿದೆ. ಈ ಹಿಂದೆ ಸುಸ್ಮಿತಾ ಸೇನ್ ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಸುದ್ದಿಗಳು ಕೇಳಿಬಂದಿದ್ದವು.