Film News

ಕರಿಮಣಿ ತಾಳಿ ಧರಿಸಿ ಪೋಸ್ ಕೊಟ್ಟ ಸುರೇಖಾವಾಣಿ, ಸಂಪ್ರದಾಯ ಮರೆತಿದ್ದೀಯಾ ಎಂದ ನೆಟ್ಟಿಗರು…!

ಸಿನಿರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕಲಾವಿದರೂ ಸಹ ದೊಡ್ಡದಾಗಿಯೇ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೀನಿಯರ್‍ ನಟಿ ಸುರೇಖಾವಾಣಿ ಸಹ ಹಾಟ್ ಆಗಿ ಪೋಸ್ ಗಳನ್ನು ಕೊಡುತ್ತಾ ಯಂಗ್ ಬ್ಯೂಟಿಯರನ್ನೂ ಸಹ ನಾಚುಂತೆ ಮಾಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಸ್ಟ್ ಗಳಿಂದ ಎಷ್ಟು ಖ್ಯಾತಿ ಪಡೆದುಕೊಳ್ಳುತ್ತಾರೋ ಅದೇ ರೀತಿ ಟ್ರೋಲ್ ಸಹ ಆಗುತ್ತಿರುತ್ತಾರೆ.

ಸೀನಿಯರ್‍ ನಟಿ ಸುರೇಖಾವಾಣಿ ಅನೇಕ ಸಿನೆಮಾಗಳಲ್ಲಿ ಅಕ್ಕ, ತಂಗಿ, ಅತ್ತಿಗೆ, ತಾಯಿ ಪಾತ್ರಗಳಲ್ಲಿ ನಟಿಸುತ್ತಾ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಆದರೆ ಸುರೇಖಾವಾಣಿ ಪತಿ ಮರಣದ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕೊಂಚ ಕಡಿಮೆಯಾಗಿತ್ತು. ಸಿನೆಮಾಗಳಿಂದ ದೂರವಾದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಆಕೆ ಹಾಟ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಆಕೆ ಮಾತ್ರವಲ್ಲದೇ ಆಕೆಯ ಪುತ್ರಿ ಸುಪ್ರಿತಾ ಜೊತೆಗೆ ಅನೇಕ ರೀಲ್ಸ್ ಮಾಡುತ್ತಾ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಕಾರಣದಿಂದ ಆಕೆಯನ್ನು ಟ್ರೋಲ್ ಮಾಡುವುದರ ಜೊತೆಗೆ ಕ್ಲಾಸ್ ಸಹ ತೆಗೆದುಕೊಂಡಿದ್ದಾರೆ.

ಸೊಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸುರೇಖಾವಾಣಿ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ಪೊಟೋದಲ್ಲಿ ಆಕೆ ಲೈಟ್ ರೆಡ್ ಕಲರ್‍ ಸೀರೆಯಲ್ಲಿ ಹಣೆಗೆ ಬೊಟ್ಟು ಇಟ್ಟುಕೊಂಡು ಕತ್ತಿನಲ್ಲಿ ತಾಳಿ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ಕ್ಷಣದಲ್ಲೇ ವೈರಲ್ ಆಗಿದೆ. ಇನ್ನೂ ಆಕೆ ತಾಳಿ ಧರಿಸಿ ಕಾಣಿಸಿಕೊಂಡ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಗಳನ್ನು ಮನೆಯಲ್ಲಿಟ್ಟುಕೊಂಡು ಈ ರೀತಿಯಲ್ಲಿ ತಾಳಿ ಧರಿಸಿ ಪೋಸ್ ಕೊಡುವುದು ಸರಿಯೇ, ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವರಂತೂ ಸುರೇಖಾವಾಣಿ ಸಂಪ್ರದಾಯವನ್ನು ಮರೆತು ಬಿಟ್ಟಿದ್ದಾರೆ ಎಂದೂ ಸಹ ಫೈರ್‍ ಆಗಿದ್ದಾರೆ. ಮತ್ತೆ ಕೆಲವರು ಸಿನೆಮಾದಲ್ಲಿ ಕ್ಯಾರೆಕ್ಟರ್‍ ಗಾಗಿ ಆಕೆ ಈ ಪೊಟೋ ಹಂಚಿಕೊಂಡಿದ್ದಾರೆ ಎಂದು ಆಕೆಯ ಬಗ್ಗೆ ಪಾಸಿಟೀವ್ ಆಗಿ ಮಾತನಾಡುತ್ತಿದ್ದಾರೆ.

ಇನ್ನೂ ಸುರೇಖಾವಾಣಿ ಹಂಚಿಕೊಂಡ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ. ತನ್ನ ಮಗಳೊಂದಿಗೆ ಶಾರ್ಟ್ ಡ್ರೆಸ್ ಧರಿಸಿ ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಸದಾ ಸುದ್ದಿಯಲ್ಲೆ ಇರುತ್ತಾರೆ. ಇನ್ನೂ ಆಕೆ ಟ್ರೋಲ್ ಗಳಿಗೆ ಗುರಿಯಾಗುತ್ತಿದ್ದರೂ ಸಹ ಟ್ರೋಲ್ ಗಳಿಗೆ ಕಿವಿಕೊಡದೇ ತನ್ನ ಕೆಲಸ ತಾನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Most Popular

To Top