ಜೀವನದಲ್ಲಿ ದೊಡ್ಡ ಪ್ರಮಾದದಿಂದ ಹೊರಬಂದೆ, ಜೀವಿಸಿ ಇರುತ್ತೇನೆ ಎಂದು ಕೊಂಡಿರಲಿಲ್ಲವಂತೆ ನಭಾ ನಟೇಶ್….!

Follow Us :

ತೆಲುಗಿನಲ್ಲಿ ಸೂಪರ್‍ ಹಿಟ್ ಹೊಡೆದ ರಾಮ್ ಪೋತುನೇನಿ ಅಭಿನಯದ ಇಸ್ಮಾರ್ಟ್ ಶಂಕರ್‍ ಸಿನೆಮಾದಲ್ಲಿ ನಾಯಕಿಯಾಗಿ ದೊಡ್ಡ ಫೇಮ್ ದಕ್ಕಿಸಿಕೊಂಡ ಕನ್ನಡ ಮೂಲದ ನಟಿ ನಭಾ ನಟೇಶ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆದರೆ ಆಕೆ ಕಳೆದ 2022 ರ ವರ್ಷದಲ್ಲಿ ಯಾವುದೇ ಸಿನೆಮಾ ಬರಲಿಲ್ಲ. ಅದಕ್ಕೆ ಕಾರಣ ಈ ಹಿಂದೆ ಆಕೆ ಅಪಘಾತಕ್ಕೆ ಗುರಿಯಾಗಿದ್ದ ಎಂದು ಸುದ್ದಿಗಳು ಕೇಳಿಬಂದಿತ್ತು. ಈ ಬಗ್ಗೆ ನಭಾ ನಟೇಶ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಕಡಿಮೆ ಸಿನೆಮಾಗಳಲ್ಲಿ ನಟಿಸಲು ಕಾರಣವನ್ನು ತಿಳಿಸಿದ್ದಾರೆ ಸದ್ಯ ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ನಭಾ ನಟೇಶ್ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಮೂಲಕ ಆಕೆ ಬಿಗ್ ಬ್ರೇಕ್ ಪಡೆದುಕೊಂಡರು. ಆದರೆ ಬಳಿಕ ಆಕೆಯ ಕೆರಿಯರ್‍ ಅಷ್ಟೊಂದು ಸಕ್ಸಸ್ ಪುಲ್ ಆಗಿ ಸಾಗಲಿಲ್ಲ. ಇನ್ನೂ ಈ ಹಿಂದೆ ನಭಾ ನಟೇಶ್ ಕೆಲವೊಂದು ಕಾರಣಗಳಿಂದ ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಕೆಲವೊಂದು ಸಿನೆಮಾಗಳು ಬಿಡುಗಡೆಯಾಗಲಿದೆ. ಇನ್ನು ಹೊಸ ಪ್ರಾಜೆಕ್ಟ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ನಭಾ ತುಂಬಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುವಂತಹ ಸಿನೆಮಾಗಳಿಗೆ ಆಕೆ ಒತ್ತು ನೀಡುತ್ತಿರುತ್ತಾರೆ. ಈ ಕಾರಣದಿಂದಲೇ ಆಕೆ ಕಡಿಮೆ ಸಿನೆಮಾಗಳಲ್ಲಿ ನಟಿಸಿದ್ದಾಗಿ ತಿಳಿಸಿದ್ದರು.

ಇನ್ನೂ ನಟಿ ನಭಾ ನಟೇಶ್ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದರು. ಅದರಿಂದಾಗಿ ಗುಣಮುಖರಾಗಲು ಆಕೆಗೆ ಒಂದು ವರ್ಷ ಸಮಯ ಬೇಕಾಯಿತಂತೆ. ಸದ್ಯ ಎಲ್ಲವೂ ಸರಿಯಿದೆ. ನಾನು ಗುಣಮುಖರಾಗಲು ತುಂಬಾ ಸಮಯ ಬೇಕಾಯಿತ. ಆದರೆ ಅಪಘಾತ ನಡೆದಾಗ ನಾನು ಸತ್ತುಹೋಗುತ್ತೇನೆ ಎಂದು ಭಯ ಪಟ್ಟಿದೆ. ನನ್ನ ಭುಜದ ಮೂಳೆ ಮುರಿದಿತ್ತು. ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದರಿಂದ ನಾನು ತುಂಬಾನೆ ಸಮಸ್ಯೆ ಎದುರಿಸಿದ್ದೆ. ಆದರೆ ಜೀವನದಲ್ಲಿ ಅಂತಹ ಘಟನೆಗಳು ನಡೆದಾಗಲೇ ನಮ್ಮನ್ನು ಎಷ್ಟು ಜನ ಇಷ್ಟಪಡುತ್ತಾರೆ ಎಂಬುದು ತಿಳಿಯುತ್ತದೆ. ಸದ್ಯ ನಾನು ಶಾರೀರಕವಾಗಿ ಹಾಗೂ ಮಾನಸಿಕವಾಗಿಯೂ ಬಲವಾಗಿ ಇದ್ದೇನೆ. ಅಪಘಾತದ ಕಾರಣದಿಂದ ಅನೇಕ ಸಿನೆಮಾ ಆಫರ್‍ ಗಳನ್ನು ಮಿಸ್ ಮಾಡಿಕೊಂಡೆ. ಆದರೆ ಆಫರ್‍ ಗಳು ಮಿಸ್ ಆಗಿದ್ದಕ್ಕೆ ನಾನು ಎಂದೂ ದುಃಖ ಪಡಲಿಲ್ಲ. ಏಕೆಂದರೇ ಒಬ್ಬ ವ್ಯಕ್ತಿ ಆರೋಗ್ಯವಾಗಿರುವುದೇ ಅತೀ ಮುಖ್ಯ ಎಂದು ನಭಾ ಹೇಳಿದ್ದಾರೆ.

ಇನ್ನೂ ನಭಾ ನಟೇಶ್ ನನ್ನು ದೋಚುಕುಂದವಟಿ ಎಂಬ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆಗೆ ಇಸ್ಮಾರ್ಟ್ ಶಂಕರ್‍ ಸಿನೆಮಾ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಬಳಿಕ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಯಾವುದೇ ಸಿನೆಮಾಗಳು ನೀಡಲಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆಕೆ ಯಾವ ಸಿನೆಮಾಗಳಲ್ಲಿ ನಟಿಸಲಿದ್ದಾರೆ. ಯಾವ ರೀತಿ ಪ್ರದರ್ಶನ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.