Film News

ರೆಡ್ ಕಲರ್ ಡ್ರೆಸ್ ನಲ್ಲಿ ಯುವಕರ ಹೃದಯ ಕದ್ದ ಬ್ಯೂಟಿ ಹನಿ ರೋಜ್, ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಬ್ಯೂಟಿ….!

ಮಲಯಾಳಂ ಮೂಲದ ಯಂಗ್ ಬ್ಯೂಟಿ ಹನಿ ರೋಜ್ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಹನಿ ರೋಜ್ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ವೀರಸಿಂಹಾರೆಡ್ಡಿ ಈವೆಂಟ್ ಒಂದರ ಪೊಟೋಗಳನ್ನು ಹಂಚಿಕೊಂಡಿರುವ ಹನಿ ರೋಜ್ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಎಂಬ ಸುನಾಮಿಯನ್ನು ಎಬ್ಬಿಸಿದ್ದಾರೆ ಎನ್ನಲಾಗುತ್ತಿದೆ. ರೆಡ್ ಕಲರ್‍ ಡ್ರೆಸ್ ನಲ್ಲಿ ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ.

ನಟಿ ಹನಿರೋಜ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಅಟ್ರಾಕ್ಟೀವ್ ಆಗಿದ್ದಾರೆ. ಹಾಟ್ ಲುಕ್ಸ್ ನೊಂಧಿಗೆ ಎಲ್ಲರನ್ನು ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆ ಸೌಂದರ್ಯಕ್ಕೆ ಫಿದಾ ಆದ ಅನೇಕರು ಆಕೆಯ ಸೌಂದರ್ಯವನ್ನು ಹೊಗಳುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನೂ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಶ್ರುತಿ ಹಾಸನ್ ಗಿಂತ ಹನಿ ರೋಜ್ ಪಾತ್ರ ಕೊಂಚ ಹೈಲೈಟ್ ಎಂದೇ ಹೇಳಬಹುದಾಗಿದೆ. ಇನ್ನೂಹನಿ ರೋಜ್ ಈ ಹಿಂದೆ ಆಲಯಂ ಎಂಬ ಸಿನೆಮಾದಲ್ಲೇ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು. ಬಳಿಕ ಆಕೆ 2014 ರಲ್ಲಿ ಈ ವರ್ಷಂ ಸಾಕ್ಷಿಗಾ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಡಿಜಾಸ್ಟರ್‍ ಆದ ಹಿನ್ನೆಲೆಯಲ್ಲಿ ಆಕೆ ಅಷ್ಟೊಂದು ಫೇಂ ಸಾಧಿಸಲಿಲ್ಲ ಎನ್ನಬಹುದಾಗಿದೆ.

ಸುಮಾರು ವರ್ಷಗಳ ಬಳಿಕ ಹನಿರೋಜ್ ತೆಲುಗಿಗೆ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಆಕೆ ಬಾಲಕೃಷ್ಣ ರವರ ಪ್ರೇಯಸಿಯಾಗಿ ಅದ್ಬುತವಾಗಿ ನಟಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ಆಕೆ ತುಂಬಾನೆ ಹಾಟ್ ಆಗಿ ಹಾಗೂ ಸೆಕ್ಸಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಬೆಡ್ ಮೇಲೆ ಕಾಣಿಸಿಕೊಂಡ ಈಕೆ ಲುಕ್ಸ್ ಗೆ ಎಲ್ಲರಿಗೂ ಬೆವರು ತರಿಸುವಂತಿದೆ ಎನ್ನಲಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅದೇ ದೃಶ್ಯಗಳು ಹೈಲೈಟ್ ಆಗಿದೆ. ಇನ್ನೂ ಈ ಸಿನೆಮಾ ಹನಿ ರೋಜ್ ಬಿಗ್ ಬ್ರೇಕ್ ನೀಡಿದೆ ಎನ್ನಬಹುದಾಗಿದೆ. ಇನ್ನೂ ಹನಿ ರೋಜ್ ಗೆ ಮತಷ್ಟು ತೆಲುಗು ಸಿನೆಮಾಗಳಲ್ಲಿ ಅವಕಾಶಗಳು ಹರಿದು ಬರಬಹುದು ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಗ್ಲಾಮರಸ್ ಪಾತ್ರಗಳಲ್ಲೂ ಸಹ ನಟಿಸಲು ಆಕೆ ಸಿದ್ದವಾಗಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ನಟಿ ಹನಿ ರೋಜ್ 2005 ರಲ್ಲೇ ಭಾಯ್ ಪ್ರೆಂಡ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಬಳಿಕ ಮುದಲ್ ಕನವೆ ಎಂಬ ತಮಿಳು ಸಿನೆಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಆಕೆ ಕನ್ನಡ, ಮಲಯಾಳಂ, ತಮಿಳು ಸಿನೆಮಾಗಳಲ್ಲೂ ಸಹ ನಟಿಸಿದರು. ಆಕೆಗೆ ತಿರುವಂಡ್ರಮ್ ಲಾಡ್ಜ್ ಎಂಬ ಸಿನೆಮಾ ಬಿಗ್ ಬ್ರೇಕ್ ನೀಡಿದ್ದು ಈ ಸಿನೆಮಾದ ಬಳಿಕ ಆಕೆಗೆ ದೊಡ್ಡ ದೊಡ್ಡ ಪಾತ್ರಗಳಲ್ಲಿ ನಟಿಸಲು ಅವಕಾಶಗಳು ಬಂದವು ಎನ್ನಲಾಗಿದೆ.

Most Popular

To Top