Film News

ಮಂಚು ಮನೋಜ್ ಮದುವೆ ಬಗ್ಗೆ ಅನೌನ್ಸ್ ಮಾಡುತ್ತಾರೆ ಅಂದುಕೊಂಡ್ರೆ, ಆತ ಹೇಳಿದ್ದು ಮಾತ್ರ ಬೇರೆನೇ?

ಸುಮಾರು ದಿನಗಳಿಂದ ಮಂಚು ಮನೋಜ್ ಹಾಗೂ ಭೂಮಾ ಮೌನಿಕಾರೆಡ್ಡಿ ಮದುವೆಯಾಗಲಿದ್ದಾರೆ, ಇಬ್ಬರೂ ಈಗಾಗಲೇ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿತ್ತು. ಕಳೆದೆರಡು ದಿನಗಳ ಹಿಂದೆ ಮಂಚು ಮನೋಜ್ ಜ.20 ರಂದು ಸ್ಪೇಷಲ್ ಸುದ್ದಿಯೊಂದನ್ನು ನೀಡುವುದಾಗಿ ಟ್ವೀಟ್ ಮಾಡಿದ್ದರು. ಇದನ್ನು ಕಂಡ ಅನೇಕರು ಮನೋಜ್ ಹಾಗೂ ಮೌನಿಕಾ ಮದುವೆಯಾಗುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮನೋಜ್ ಹಂಚಿಕೊಂಡಿದ್ದೇ ಬೇರೆ ವಿಚಾರ.

ಕಳೆದೆರಡು ದಿನಗಳಿಂದ ಮಂಚು ಮನೋಜ್ ತಮ್ಮ ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಆತನ ಟ್ವೀಟ್ ಕಂಡ ಅನೇಕರು ಭಾವಿಸಿದ್ದರು. ಹೊಸ ಜೀವನ, ಹೊಸ ಅಧ್ಯಾಯ ಸ್ಪೇಷಲ್ ಸುದ್ದಿ ಎಂಬೆಲ್ಲಾ ಮಾತುಗಳ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದರು. ಜೊತೆಗೆ ಕೆಲವು ತಿಂಗಳುಗಳ ಹಿಂದೆಯೇ ಮನೋಜ್ ಮದುವೆಯಾಗಿದ್ದಾರೆ ಎಂಬ ಪ್ರಚಾರಗಳೂ ಸಹ ಶುರುವಾಗಿದೆ. ಭೂಮಾ ಮೌನಿಕಾ ರೆಡ್ಡಿ ಜೊತೆಗೆ ಮದುವೆಯಾಗಿದೆ.  ಎಂಬೆಲ್ಲಾ ಪ್ರಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.20 ರಂದು ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಬಹುದು ಎಂದೂ ಸಹ ಹೇಳಲಾಗಿತ್ತು. ಆದರೆ ಕೊನೆಗೆ ಮಂಚು ಮನೋಜ್ ಎಲ್ಲರ ಕುತೂಹಲಕ್ಕೆ ವಿಭಿನ್ನವಾದ ವಿಚಾರವನ್ನೇ ಹಂಚಿಕೊಂಡಿದ್ದಾರೆ.

ನಟ ಮಂಚು ಮನೋಜ್ ಜ.20 ರಂದು ನನ್ನ ಜೀವನಕ್ಕೆ ಸಂಬಂಧಿಸಿದ ಸ್ಪೇಷಲ್ ನ್ಯೂಸ್ ಒಂದನ್ನು ಹಂಚಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದರು. ಎಲ್ಲರೂ ಈ ಬಗ್ಗೆ ಅಂದುಕೊಂಡಿದ್ದು ಬೇರೆ, ಆತ ನೀಡಿದ ಸ್ಪೇಷಲ್ ನ್ಯೂಸ್ ಬೇರೆ. ವಾಟ್ ದಿ ಫಿಷ್ ಎಂಬ ಟೈಟಲ್ ಪೋಸ್ಟರ್‍ ಬಿಡುಗಡೆ ಮಾಡಿದ್ದಾರೆ. ಡೆಬ್ಯೂ ಡೈರೆಕ್ಟರ್‍ ವರುಣ್ ಕೊರುಕೊಂಡ ವಾಟ್ ದಿ ಫಿಷ್ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿಕ್ಸ್ ಸಿನೆಮಾಸ್, ಎ ಫಿಲ್ಮ್ ಬೈ ಬ್ಯಾನರ್ಸ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ ಥ್ರಿಲ್ಲರ್‍ ಅಂಡ್ ಫ್ಯಾಮಿಲಿ ಎಂಟರ್‍ ಟೈನರ್‍ ಸಿನೆಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಎಲ್ಲರೂ ತನ್ನ ಮೇಲಿನ ಮದುವೆ ರೂಮರ್‍ ಗಳ ಬಗ್ಗೆ ಹೇಳುತ್ತಾರೆ ಎಂದುಕೊಂಡಿದ್ದರೇ ಮಂಚು ಮನೋಜ್ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ತನ್ನ ಹೊಸ ಸಿನೆಮಾದ ಘೋಷಣೆ ಮಾಡಿದರು.

ಇನ್ನೂ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿಯವರಿಗೆ ಈ ಹಿಂದೆ ಬೇರೆ ಬೇರೆ ಮದುವೆಯಾಗಿತ್ತು. ಆದರೆ ಮೌನಿಕಾ ಸಹ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ. ಅದೇ ರೀತಿ ಮನೋಜ್ ಸಹ ವಿಚ್ಚೇಧನ ಪಡೆದುಕೊಂಡಿದ್ದಾರೆ. ಇನ್ನೂ ಮಂಚು ಮನೋಜ್ ಈ ಹಿಂದೆ ಅಹಂ ಬ್ರಹ್ಮಾಸ್ಮಿ ಎಂಬ ಟೈಟಲ್ ನ ಪ್ಯಾನ್ ಇಂಡಿಯಾ ಸಿನೆಮಾವನ್ನು ಪ್ರಕಟಿಸಿದ್ದರು. ಇದೀಗ ಮತ್ತೊಂದು ಸಿನೆಮಾ ಘೋಷಣೆ ಮಾಡಿದ್ದು ಅಹಂ ಬ್ರಹ್ಮಾಸ್ಮಿ ಸಿನೆಮಾ ಮೂಲೆಗೆ ಸೇರಿದೆ ಎನ್ನಲಾಗುತ್ತಿದೆ. ಈ ಸಿನೆಮಾ ಆದರೂ ಮಂಚು ಮನೋಜ್ ಗೆ ಸಕ್ಸಸ್ ತಂದುಕೊಡುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top