Film News

ಬಾಲಯ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್, NBK108 ಸಿನೆಮಾ ರಿಲೀಸ್ ಡೇಟ್ ಫಿಕ್ಸ್……!

ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಬಾಲಕೃಷ್ಣ ಬಳಿಕ ವರ್ಷದ ಆರಂಭದಲ್ಲಿ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು ಅವರ ಮುಂದಿನ ಸಿನೆಮಾಗಳ ಬಗ್ಗೆ ಭಾರಿ ನಿರೀಕ್ಷೆಯನ್ನು ಸಹ ಹುಟ್ಟಿಸಿದೆ. ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ NBK108 ಸಿನೆಮಾ ಸಹ ಭಾರಿ ನಿರೀಕ್ಷೆ ಮೂಡಿಸಿದೆ. ಇದೀಗ ಈ ಸಿನೆಮಾ ರಿಲೀಸ್ ಡೇಟ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ತೆಲುಗು ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ರವರು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಜೋರಿನಲ್ಲಿದ್ದಾರೆ. ಅಖಂಡ, ವೀರಸಿಂಹಾರೆಡಡಿ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಬಾಲಯ್ಯ ಇದೀಗ NBK108 ಟೈಟಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಅನೀಲ್ ರಾವಿಪೂಡಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾ ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯ ಈ ಸಿನೆಮಾ NBK108 ವರ್ಕಿಂಗ್ ಟೈಟಲ್ ನಡಿ ಸೆಟ್ಟೇರಿದೆ. ಇದೀಗ ಚಿತ್ರತಂಡ ಈ ಸಿನೆಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ. ಶ್ರೀರಾಮನವಿ ಹಬ್ಬದ ಅಂಗವಾಗಿ ಬಾಲಯ್ಯ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ಈ ಸುದ್ದಿ ಕೇಳಿದ ಬಾಲಯ್ಯ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.

ಇನ್ನೂ ಬಾಲಕೃಷ್ಣ ರವರ NBK108 ಸಿನೆಮಾವನ್ನು ದಸರಾ ಹಬ್ಬದ ಅಂಗವಾಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ವಿಜಯದಶಮಿಗೆ ಆಯುಧಪೂಜೆ ಎಂದು ಪೋಸ್ಟರ್‍ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‍ ನಲ್ಲಿ ಬಾಲಯ್ಯ ತುಂಬಾ ಪವರ್‍ ಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕಳೆದ ಯುಗಾದಿ ಹಬ್ಬಕ್ಕೆ ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್‍ ಸಹ ಭಾರಿ ಸದ್ದು ಮಾಡಿತ್ತು. ಬ್ರೌನ್ ಕಲರ್‍ ಡ್ರೆಸ್ ನಲ್ಲಿ ಬಾಲಕೃಷ್ಣ ಸಖತ್ ರಗಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಿನೆಮಾ ಬಿಡುಗಡೆಯ ಪೋಸ್ಟರ್‍ ಸಹ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಇನ್ನೂ ಈ ಸಿನೆಮಾ ತೆಲಂಗಾಣ ಬ್ಯಾಕ್ ಡ್ರಾಪ್ ನಲ್ಲಿ ತೆರೆಕಾಣಲಿದೆ. ಮೂಲಗಳ ಪ್ರಕಾರ ಬಾಲಕೃಷ್ಣ ಈ ಸಿನೆಮಾದಲ್ಲಿ ತೆಲಂಗಾಣ ಭಾಷೆಯಲ್ಲೇ ಮಾತನಾಡುತ್ತಾರೆ ಎನ್ನಲಾಗಿದೆ.

ಇನ್ನೂ ಸಿನೆಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಬಾಲಕೃಷ್ಣರವರ ಮಗಳಾಗಿ ಸ್ಟಾರ್‍ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಸಿನೆಮಾಗೆ ಎಸ್.ಎಸ್.ಥಮನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಈ ಹಿಂದೆ ಅಂದುಕೊಂಡಂತೆ NBK108 ಸಿನೆಮಾ ದಸರಾ ಹಬ್ಬದ ಉಡುಗೊರೆಯಾಗಿ ತೆರೆಕಾಣಲಿದೆ.

Most Popular

To Top