Film News

ರಾತ್ರಿ ಕರೆ ಮಾಡಿ ಮನೆಗೆ ಬಾ ಎಂದ್ರು, ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಬಿಗ್ ಬಾಸ್ ರನ್ನರಪ್ ಶಿವ ಠಾಕ್ರೆ…..!

ಮಿಟೂ ಅಭಿಯಾನ ಶುರುವಾದ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಅನೇಕ ನಟಿಯರು ಈ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅನೇಕ ನಟಿಯರು ನೇರವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದರು. ತಮಗಾದ ಕೆಟ್ಟ ಅನುಭವಗಳಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನೂ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ನಟ, ನಿರ್ಮಾಪಕ, ನಿರ್ದೇಶಕರ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಆದರೆ ಕಾಸ್ಟಿಂಗ್ ಕೌಚ್ ಗೆ ಪುರುಷ ಕಲಾವಿದರೂ ಸಹ ಗುರಿಯಾಗಿದ್ದಾರೆ. ಬಿಗ್ ಬಾಸ್ ರನ್ನರಪ್ ಶಿವ ಠಾಕ್ರೆ ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ನಾವು ಸದಾ ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಕೇಳಿರುತ್ತೇವೆ. ಆದರೆ ಇತ್ತಿಚಿಗೆ ಪುರುಷರು ಸಹ ಮಹಿಳೆಯರ ಮೇಲೆ ಕಾಸ್ಟಿಂಗ್ ಕೌಚ್ ಆರೋಪಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಬಿಗ್ ಬಾಸ್ 16 ಹಿಂದಿಯ ರನ್ನರಪ್ ಶಿವ ಠಾಕ್ರೆ ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಆತ ನೀಡಿದ ಹೇಳಿಕೆಗಳು ಇದೀಗ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಇನ್ನೂ ಬಾಲಿವುಡ್ ಸಿನಿರಂಗಕ್ಕೆ ಸೇರಿದ ಒರ್ವ ಮಹಿಳೆ ಆತನನ್ನು ಲೈಂಗಿಕವಾಗಿ ಕಿರುಕುಳ ನೀಡಿದ್ದರಂತೆ. ಆದರೆ ಆಕೆಯ ಹೆಸರನ್ನು ಮಾತ್ರ ಹೇಳಲಿಲ್ಲ. ಒಂದು ದಿನ ರಾತ್ರಿ 11 ಗಂಟೆಗೆ ಪೋನ್ ಮಾಡಿ ಆಡಿಷನ್ ಇದೆ, ನೀನು ಒಂಟಿಯಾಗಿ ನನ್ನ ಬಂಗೆಲೆಗೆ ಬಾ, ನನಗೆ ನಾಲ್ಕು ಬಂಗಲೆ ಇದೆ. ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಪ್ರಭಾವ ಇದೆ. ನಾನು ಹೇಳಿದಂತೆ ಮಾಡಿದವರು ಇಂದು ಸಿನಿರಂಗದಲ್ಲಿ ಸ್ಟಾರ್‍ ಗಳಾಗಿದ್ದಾರೆ ಎಂದು ಹೇಳಿದರು.

ಕೂಡಲೇ ನೀನು ನನ್ನ ಬಂಗಲೆಗೆ ಬರಬೇಕು ಎಂದು ಹೇಳಿದರು. ಆದರೆ ಆಕೆಗೆ ಇರುವಂತಹ ಉದ್ದೇಶ ಏನು ಎಂಬುದು ಸಹ ನನಗೆ ಅರ್ಥವಾಯಿತು. ಲೈಂಗಿಕ ಕೋರಿಕೆಗಳನ್ನು ತೀರಿಸಿಕೊಳ್ಳಲು ಕರೆಯುತ್ತಿದ್ದಾರೆ ಎಂದು ನನಗೆ ತಿಳಿಯಿತು. ಬಳಿಕ ನಾನು ಆಕೆಗೆ ಈ ಸಮಯದಲ್ಲಿ ಆಡಿಷನ್ ಏನು ಎಂದು ಕೇಳಿದೆ. ಆಕೆ ಕೂಡಲೇ ನನಗೆ ಬೆದರಿಕೆಗಳನ್ನು ಹಾಕಿದಳು. ನಾನು ಹೇಳಿದಂತೆ ಮಾಡದೇ ಇದ್ದರೇ ನಿನಗೆ ಇಂಡಸ್ಟ್ರಿಯಲ್ಲಿ ಅವಕಾಶಗಳು ಇರುವುದಿಲ್ಲ. ನೀನು ಇಂಡಸ್ಟ್ರಿಯಲ್ಲಿ ಇರುವುದಿಲ್ಲ ಎಂದು ಬೆದರಿಕೆ ಹಾಕಲು ಯತ್ನಿಸಿದರು. ಆದರೆ ನಾನು ಆಕೆಯ ಮಾತುಗಳಿಗೆ ನಾನು ಹೆದರಲಿಲ್ಲ ಎಂದು ಶಿವ ಠಾಕ್ರೆ ಹೇಳಿದ್ದಾರೆ. ಸದ್ಯ ಶಿವಾ ಠಾಕ್ರೆ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಶಿವಾ ಠಾಕ್ರೆ ಮತ್ತೊಬ್ಬರ ಮೇಲೂ ಸಹ ಆರೋಪ ಮಾಡಿದ್ದಾರೆ. ನಿರ್ದೆಶಕರೊಬ್ಬರು ಆಡಿಷನ್ ಗೆ ಎಂದು ಕರೆದು ಬಾತ್ ರೂಂ ಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದರು. ಅವಕಾಶಗಳಿಗಾಗಿ ನಾನು ಎಷ್ಟೆ ಕಷ್ಟ ಬೇಕಾದರು ಪಡುತ್ತೇನೆ ವಿನಃ ಅಂತಹ ಕೆಲಸಗಳನ್ನು ಮಾಡೋಲ್ಲ ಎಂದು ಹೇಳಿದ್ದಾರೆ.

Most Popular

To Top