ಬಾಲಿವುಡ್ ಸಿನಿರಂಗದ ಕುರಿತು ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟ ಕಾಜಲ್ ಅಗರ್ವಾಲ್, ಫೈರ್ ಆದ ಬಾಲಿವುಡ್ ಮಂದಿ…..!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಕಾಜಲ್ ಬಾಲಿವುಡ್ ಸಿನಿರಂಗದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳ ಕಾರಣದಿಂದ ಬಾಲಿವುಡ್ ಮಂದಿ ಫೈರ್‍ ಆಗಿದ್ದಾರೆ. ಜೊತೆಗೆ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ಸಿನಿರಂಗದ ಮೇಲೆ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಾಲಿವುಡ್ ನಲ್ಲಿ ನೈತಿಕತೆ ಇಲ್ಲ. ಸೌತ್ ಸಿನಿರಂಗದಲ್ಲಿರುವಂತಹ ವ್ಯಾಲ್ಯೂಸ್ ಬಾಲಿವುಡ್ ನಲ್ಲಿ ಇಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ಕಾಜಲ್ ಅಗರ್ವಾಲ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಸೌತ್ ವರ್ಸಸ್ ಬಾಲಿವುಡ್ ಸಿನೆಮಾಗಳು ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಟ್ಯಾಲೆಂಟ್ ಇದ್ದರೇ ಪ್ರೇಕ್ಷಕರು ತಪ್ಪದೇ ಆದರಿಸುತ್ತಾರೆ. ಸಿನಿ ಪ್ರೇಕ್ಷಕರಿಗೆ ಅವರು ನಮ್ಮವರ ಅಲ್ಲ ಎಂಬುದು ಇಲ್ಲ. ಸಿನೆಮಾ ಚೆನ್ನಾಗಿದ್ದರೇ ಪ್ರೇಕ್ಷಕರು ತಲೆ ಮೇಲೆ ಇಟ್ಟುಕೊಳ್ಳುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ನಾನೂ ಮುಂಬೈ ಮೂಲದ ಹುಡುಗಿ, ಹುಟ್ಟಿ ಬೆಳೆದಿದ್ದು ಮುಂಬೈನಲ್ಲೇ. ಆದರೆ ನನ್ನ ಕೆರಿಯರ್‍ ಆರಂಭವಾಗಿದ್ದು ಮಾತ್ರ ಹೈದರಾಬಾದ್ ನಲ್ಲೇ. ನಾನು ತೆಲುಗು, ತಮಿಳು ಸಿನೆಮಾಗಳನ್ನೇ ಹೆಚ್ಚು ಮಾಡಿದ್ದೇನೆ. ಬಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ನಾನು ಹೈದರಾಬಾದ್ ಹಾಗೂ ಚೆನೈ ನಲ್ಲೇ ಇದ್ದೀನಿ ಅವೆರಡೂ ನನ್ನ ಹೋಮ್ ಟೌನ್ಸ್ ಎಂಬ ಅನುಭೂತಿ ಇದೆ ಎಂದಿದ್ದಾರೆ.

ಇನ್ನೂ ಸೌತ್ ನಲ್ಲಿ ನನಗೆ ತುಂಬಾ ಕಂಫರ್ಟ್ ಆಗಿದೆ. ಇದು ನನ್ನ ಅಭಿಪ್ರಾಯ ಎಂದಿಗೂ ಬದಲಾಗೊಲ್ಲ. ಸೌತ್ ಸಿನೆಮಾಗಳಲ್ಲಿ ಮುಖ್ಯವಾಗಿ ಟಾಲಿವುಡ್ ಸಿನೆಮಾಗಳಿಲ್ಲಿರುವಂತೆ ಸ್ನೇಹಪೂರ್ವಕವಾದ ವಾತವಾರಣ ಇರುವುದಿಲ್ಲ ಎಂದು ಕಾಜಲ್ ಹೇಳಿದ್ದಾರೆ. ಹಿರೋಯಿನ್ ಗೆ ಟ್ಯಾಲೆಂಟ್ ಇದ್ದರೇ ಯಾರೆ ಆಗಲಿ ಪ್ರೇಕ್ಷಕರು ಆದರಿಸುತ್ತಾರೆ. ನಮ್ಮವರ ಅಲ್ಲವೇ, ಸಿನೆಮಾ ಚಿಕ್ಕದ ದೊಡ್ಡದಾ ಎಂಬುದನ್ನೂ ನೋಡದೇ ಮೆಚ್ಚುತ್ತಾರೆ. ಸೌತ್ ನಲ್ಲಿ ಒಳ್ಳೆಯ ಕಂಟೆಂಟ್ ಸಿನೆಮಾಗಳು ಬರುತ್ತಿರುತ್ತವೆ. ಹಿಂದಿ ನಮ್ಮ ಮಾತೃ ಭಾಷೆ. ನಾನು ಬಾಲಿವುಡ್ ಸಿನೆಮಾಗಳನ್ನು ನೋಡುತ್ತಾ ಬೆಳೆದೆವು. ಬಾಲಿವುಡ್ ನಲ್ಲಿ ಕೆಲವೊಂದು ಒಳ್ಳೆಯ ಸಿನೆಮಾಗಳಲ್ಲಿ ನಾನು ಸಹ ನಟಿಸಿದ್ದೆ. ಆದರೆ ಸೌತ್ ನಲ್ಲಿರುವ ನೈತಿಕತೆ, ಶಿಸ್ತು ಬಾಲಿವುಡ್ ನಲ್ಲಿ ಇಲ್ಲ ಎಂಬುದು ನನ್ನ ಭಾವನೆ ಯಾಗಿದೆ ಎಂದು ಕಾಜಲ್ ಹೇಳಿದ್ದಾರೆ.

ಇನ್ನೂ ಬಾಲಿವುಡ್ ಬಗ್ಗೆ ಕಾಜಲ್ ನೀಡಿದ ಹೇಳಿಕೆಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕಾಜಲ್ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸೌತ್ ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಆಳಿದಂತಹ ಕಾಜಲ್ ಕಳೆದ 2020ರಲ್ಲಿ ಮದುವೆಯಾದರು. ಮದುವೆ, ಮಗು ಕಾರಣದಿಂದ ಆಕೆ ಸಿನೆಮಾಗಳಿಂದ ದೂರ ಉಳಿದಿದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಕಾಜಲ್ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ.