ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ, ನಾವೇನು ಪಾಕಿಸ್ತಾನಲ್ಲಿದ್ದೇವೆಯೇ ಎಂದು ಆಕ್ರೋಷ ಹೊರ ಹಾಕಿದ ನಟಿ…..!

ಕನ್ನಡದ ನಟಿ ಹರ್ಷಿಕಾ ಪೂಣಚ್ಚ ದಂಪತಿಗಳ ಮೇಲೆ ಪುಂಡರು ಅಟ್ಟಹಾಸ ತೋರಿಸಿರುವ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಫ್ರೇಜರ್ ಟೌನ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ ಕರಾಮಾ ಎಂಬ ರೆಸ್ಟೊರೆಂಟ್‌  ಬಳಿ ಅನವಶ್ಯಕವಾಗಿ ಜಗಳ ತೆಗೆದಿರುವ ಕಿಡಿಗೇಡಿಗಳು ಪುಂಡಾಟ ತೋರಿಸಿದ್ದಾರೆ. ಈ ಕುರಿತು ಆಕೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನಲ್ಲಿ ನಾವೇನು ಪಾಕಿಸ್ತಾನದಲ್ಲಿದ್ದೇವೆಯೇ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.

ಈ ಕುರಿತು ಆಕೆ ಸೋಷಿಯಲ್ ಮಿಡಿಯಾದಲ್ಲಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಆಕೆ ಫ್ರೇಜರ್‍ ಟೌನ್ ಬಳಿಯಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೋರೆಂಟ್ ಗೆ ಕುಟುಂಬದೊಂದಿಗೆ ಸಂಜೆ ಊಟ ಮಾಡಲು ತೆರಳಿದ್ದೆ. ಊಟ ಮುಗಿಸಿದ ಬಳಿಕ ನಾವು ವಾಲೆಟ್ ಪಾರ್ಕಿಂಗ್ ನಿಂದ ನಮ್ಮ ವಾಹನದಲ್ಲಿ ವಾಪಸ್ಸಾಗುವಾಗ ಇಬ್ಬರು ವ್ಯಕ್ತಿಗಳು ಡ್ರೈವರ್‍ ಸೀಟ್ ಕಿಟಕಿಯ ಬಳಿ ಬಂದು ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ. ಇದ್ದಕ್ಕಿದ್ದಂತೆ ಚಲಿಸಿದ್ದಲ್ಲಿ ಅದು ನಮಗೆ ತಾಗಬಹುದು ಎಂದು ವಾದ ಮಾಡಲು ಪ್ರಾರಂಭಿಸಿದರು. ಇನ್ನೂ ವಾಹನ ಮೂವ್ ಮಾಡಿಲ್ಲ ಅಲ್ವೇ ಸೈಡ್ ಬಿಡಿ ಎಂದು ನನ್ನ ಪತಿ ಹೇಳಿದರು. ಅವರ ಮಾತಿನಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು. ಅಷ್ಟರೊಳಗೆ ಈ ಇಬ್ಬರೂ ವ್ಯಕ್ತಿಗಳು ಅವರ ಭಾಷೆಯಲ್ಲಿ ನಿಂದನೆ ಮಾಡಲು ಶುರು ಮಾಡಿದರು. ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ನನ್ನ ಪತಿಗೆ ಹೊಡೆಯಲು ಪ್ರಯತ್ನ ಮಾಡಿದರು.

ಈ ಸಮಯದಲ್ಲಿ ನನ್ನ ಪತಿ ತುಂಬಾ ತಾಳ್ಮೆಯಿಂದ ಇದ್ದರು. ಹೆಚ್ಚು ಮಾತನಾಡಲಿಲ್ಲ. ಎರಡು ಮೂರು ನಿಮಿಷದಲ್ಲೇ ಆ ಗ್ಯಾಂಗ್ ನ 20-30 ಸದಸ್ಯರ ಗುಂಪ ಜಮಾಯಿಸಿ, ಅವರಿಲ್ಲಿಬ್ಬರು ನನ್ನ ಗಂಡನ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದರು. ಇದನ್ನು ಅರಿತ ನನ್ನ ಪತಿ ಅದನ್ನು ಹಿಡಿದು ನನಗೆ ಕೊಟ್ಟರು. ನಂತರ ನನ್ನ ಕಾರನ್ನು ಪುಡಿ ಮಾಡಿದರು. ನಾವಿರುವ ವಾಹನದಲ್ಲಿ ಮಹಿಳೆಯರು ಹಾಗೂ ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೇ ನಾನು ಗಮನಿಸಿದ್ದು, ಏನೆಂದರೇ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬ ಸಮಸ್ಯೆಯಿತ್ತು. ನೀವು ನಮ್ಮ ಪ್ರದೇಶಕ್ಕೆ ಬಂದಿದ್ದೀರಾ, ನಿಮ್ಮ ಭಾಷೆಯಲ್ಲಿ ಮಾತನಾಡುವುದನ್ನು ನಿಲ್ಲಿಸಿ, ಹೇ ಲೋಕಲ್ ಕನ್ನಡ ವಾಲಾ ಹೇ ಎಂದು ಹೇಳುತ್ತಿದ್ದರು. ಅವರಲ್ಲಿ ಹೆಚ್ಚಿನವರು ಹಿಂದಿ, ಉರ್ದು ಅಥವಾ ಇಂಗ್ಲೀಷ್ ಹಾಗೂ ಕೆಲವರು ಅರ್ಧಂಬರ್ಧ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ಇನ್ಸ್ ಪೆಕ್ಟರ್‍ ಗೆ ತುರ್ತು ಕರೆ ಮಾಡಿದ ಬಳಿಕ ಏನೂ ಆಗಿಲ್ಲ ಎಂಬಂತೆ ಅಲ್ಲಿಂದ ಎಲ್ಲರೂ ಚದುರಿ ಹೋದರ ಎಂದು ತಮಗಾದ ಕೆಟ್ಟ ಅನುಭವವನ್ನು ಹೊರಹಾಕಿದ್ದಾರೆ.

ನಮ್ಮ ಸಮೀಪದಲ್ಲಿ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯ ಬಗ್ಗೆ ಪೊಲೀಸ್ ಠಾಣೆಯ ASI ಉಮೇಶ್ ರವರಿಗೆ ತಿಳಿಸಿದೆವು. ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ. ರೆಸ್ಟೋರೆಂಟ್ ಮುಂಭಾಗವಿರುವ ಮೋಸಂಬಿ ಜ್ಯೂಸ್ ಕುಡಿಯುತ್ತಾ ಕಾರ್‍ ನಲ್ಲಿ ಸುಮ್ಮನೆ ಕುಳಿತಿದ್ದರು ಎಂದು ಆರೋಪಿಸಿದರು. ಈ ಘಟನೆಯ ಬಳಿಕ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲೂ ಈಗಲೂ ನನಗೆ ಭಯ ಆಗುತ್ತಿದೆ. ಇಂತಹ ಘಟನೆ ಆಗಿದ್ದು ಇದೇ ಮೊದಲು ಎಂದು ನಾವೇನು ಪಾಕಿಸ್ತಾನದಲ್ಲಿ ಅಥವಾ ಆಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೇಯೇ? ನಮ್ಮ ಊರು ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡವನ್ನು ಬಳಸುವುದು ತಪ್ಪೇ? ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ? ಎಂದು ಆಕ್ರೋಷ ಹೊರಹಾಕಿದ್ದಾರೆ.