Film News

ನಾಗಚೈತನ್ಯ ಮದುವೆಯಾಗಲಿರುವುದು ಶೋಭಿತಾ ರನ್ನೇ, ಶೀಘ್ರದಲ್ಲೇ ಎಲ್ಲಾ ಹೊರಬರಲಿದೆಯಂತೆ?

ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಇಬ್ಬರೂ ಅವರವರ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ದಿನಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಶೋಭಿತಾ ಅನೇಕ ಬಾರಿ ಎಲ್ಲಾ ಸುಳ್ಳು ಎಂದರೂ ಸಹ ಈ ಸುದ್ದಿ ಮಾತ್ರ ತಣ್ಣಗಾಗುತ್ತಿಲ್ಲ. ಇದೀಗ ಇಬ್ಬರ ಮದುವೆ ಶೀಘ್ರದಲ್ಲೇ ನಡೆಯಲಿದೆ, ಎಲ್ಲವೂ ಅಧಿಕೃತವಾಗಿ ಹೊರಬರಲಿದೆ ಎಂದು ಮತ್ತೊಂದು ರೂಮರ್‍ ಹರಿದಾಡುತ್ತಿದೆ.

ನಟ ಅಕ್ಕಿನೇನಿ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳಿಪಾಲ ಎಂಬ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಅವರಿಬ್ಬರೂ ನಿರಂತರವಾಗಿ ಭೇಟಿ ಆಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಈ ಹಿಂದೆ ಶೋಭಿತಾ ಸಹ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ. ಜೊತೆಗೆ ಅವರಿಬ್ಬರು ವಿದೇಶಗಳಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದ್ದರು. ಆ ಮೂಲಕ ಅವರು ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಮತ್ತಷ್ಟು ಬಲಗೊಂಡವು. ಆದರೆ ಕೆಲವು ದಿನಗಳ ಹಿಂದೆ ಅವರಿಬ್ಬರು ಬೇರೆಯಾದರು ಎಂಬ ರೂಮರ್‍ ಸಹ ಕೇಳಿಬಂತು. ಈ ಕಾರಣದಿಂದ ನಾಗಚೈತನ್ಯ ಬೇರೆ ಮದುವೆಯಾಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ನಟ ನಾಗಚೈತನ್ಯ ಉದ್ಯಮಿಯೊಬ್ಬರ ಮಗಳನ್ನು ಮದುವೆಯಾಗಲಿದ್ದಾರೆ, ಆಕೆಗೂ ಸಿನೆಮಾ ರಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಸುದ್ದಿ ಸಹ ಹರಿದಾಡಿತ್ತು. ಈ ಬಗ್ಗೆ ನಾಗಚೈತನ್ಯ ಟೀಂ ಸಹ ಇದೆಲ್ಲಾ ಸುಳ್ಳು ಎಂದು ಕ್ಲಾರಿಟಿ ನೀಡಿದೆ ಎಂದು ಹೇಳಲಾಗಿದೆ. ಇದೇ ವೇಳೆ ಚೈತನ್ಯ ಹತ್ತಿರದವರು ಮತ್ತೊಂದು ಶಾಕಿಂಗ್ ವಿಚಾರ ಹೊರಹಾಕಿದ್ದಾರಂತೆ. ಶೋಭಿತಾ ಹಾಗೂ ಚೈತನ್ಯ ರಿಲೇಷನ್ ಶಿಪ್ ತುಂಬಾ ಸ್ಟ್ರಾಂಗ್ ಆಗಿಯೇ ಇದೆ. ಶೀಘ್ರದಲ್ಲೇ ಈ ಜೋಡಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಬಹಿರಂಗಪಡಿಸಲಿದ್ದಾರಂತೆ. ಜೊತೆಗೆ ಮದುವೆಯ ಬಗ್ಗೆ ಸಹ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಸುದ್ದಿ ಸಹ ರೂಮರ್‍ ಆಗಿ ಉಳಿಯುತ್ತಾ ಅಥವಾ ನಿಜವಾಗುತ್ತಾ ಎಂಬುದನ್ನು ತಿಳಿಯಲು ಕಾದು ನೋಡಬೇಕಿದೆ.

Most Popular

To Top