ಟ್ರೆಂಡಿವೇರ್ ನಲ್ಲಿ ಹಾಟ್ ಪೋಸ್ ಕೊಟ್ಟ ಕಾಜಲ್, ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್ ಸಹ ಏರುತ್ತಿದೆ ಎಂದ ಫ್ಯಾನ್ಸ್…..!

ಸೌತ್ ಸಿನಿರಂಗದಲ್ಲಿ ಹೆಚ್ಚು ಸಕ್ಸಸ್ ಗ್ರಾಫ್ ಹೊಂದಿರುವ ನಟಿಯರಲ್ಲಿ ಕಾಜಲ್ ಅಗರ್ವಾಲ್ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೊಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಗ್ಲಾಮರಸ್ ಬ್ಯೂಟಿ ಕಾಜಲ್ ಅಗರ್ವಾಲ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಮದುವೆಯ ಬಳಿಕ ಸಿನೆಮಾಗಳ ವಿಚಾರದಲ್ಲಿ ವಿಭಿನ್ನವಾಗಿ ಯೋಚನೆ ಮಾಡುತ್ತಿರುತ್ತಾರೆ. ಕಮರ್ಷಿಯಲ್ ಸಿನೆಮಾಗಳ ಜೊತೆಗೆ ಆಕೆ ಒಳ್ಳೆಯ ಕಂಟೆಂಟ್ ಇರುವಂತಹ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್ ಸಿನೆಮಾಗಳಲ್ಲಿ ನಟಿಸಿದರೂ ನಟಿಸದೇ ಇದ್ದರೂ ಆಕೆಯ ಫ್ಯಾನ್ ಫಾಲೋಯಿಂಗ್ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್‌ಗಳನ್ನು ರಂಜಿಸುತ್ತಲೇ ಇರುತ್ತಾರೆ. ಜೊತೆಗೆ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳೂ ಸಹ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿರುತ್ತದೆ.

ಇನ್ನೂ ಕಾಜಲ್ ಅಗರ್ವಾಲ್ ಕಡಿಮೆ ಸಮಯದಲ್ಲೇ ಸ್ಟಾರ್‍ ಆದ ನಟಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ಟ್ರೆಂಡಿಂಗ್ ಆಗುತ್ತ್‌ಎ. ಕೊಂಚ ಗ್ಲಾಮರ್‍ ಶೋ ಮಾಡಿದರೂ ಸಾಕು ಆಕೆಯ ಅಭಿಮಾನಿಗಳು ಆಕೆ ಸೌಂದರ್ಯವನ್ನು ಹೊಗಳುತ್ತಾ ಕಾಮೆಂಟ್ ಬಾಕ್ಸ್ ಪುಲ್ ಮಾಡುತ್ತಾರೆ. ಇದೀಗ ಆಕೆ ವೈಟ್ ಕ್ರೀಮ್ ಕಲರ್‍ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ಟಾಪ್ ಗ್ಲಾಮರ್‍ ಶೋ ಮಾಡುವುದರ ಜೊತೆಗೆ ಮಾದಕ ನೋಟ ಬೀರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ಪೊಟೋಗಳನ್ನು ನೋಡಿದ ಅನೇಕರು ಕಾಜಲ್ ಅಗರ್ವಾಲ್ ವಯಸ್ಸು ಹೆಚ್ಚಾಗುತ್ತಿದ್ದಂತೆ ಆಕೆಯ ಗ್ಲಾಮರ್‍ ಸಹ ಏರುತ್ತಿದೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಜೊತೆಗೆ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಗೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ರೇಜಿ ಆಫರ್‍ ಗಳು ದೊರೆಯುತ್ತಿದೆ. ಸದ್ಯ ಆಕೆ ತೆಲುಗಿನಲ್ಲಿ ಸತ್ಯಭಾಮ ಎಂಬ ಸಿನೆಮಾದಲ್ಲಿ ಹಾಗೂ ತಮಿಳಿನಲ್ಲಿ ಇಂಡಿಯನ್ 2 ಎಂಭ ಸಿನೆಮಾದಲ್ಲಿ ನಟಿಸಿದ್ದು, ಈ ಎರಡೂ ಸಿನೆಮಾಗಳು ಶೀಘ್ರದಲ್ಲೆ ತೆರೆಕಾಣಲಿದೆ. ಇದರ ಜೊತೆ ಮತ್ತೆರಡು ಸಿನೆಮಾಗಳೂ ಶೂಟಿಂಗ್ ಹಂತದಲ್ಲಿದೆ.