Film News

ಶೋಭಿತಾ-ನಾಗಚೈತನ್ಯ ಶೀಘ್ರದಲ್ಲೇ ಸರ್ಪ್ರೈಸ್ ನೀಡುತ್ತಾರಾ? ಅವರ ಅಫೈರ್ ಕುಟುಂಬಸ್ಥರವರೆಗೂ ತಲುಪಿದೆಯೇ?

ತೆಲುಗು ಸಿನಿರಂಗದ ಕ್ಯೂಟ್ ಅಂಡ್ ಬೆಸ್ಟ್ ಜೋಡಿಯಾಗಿ ಸಮಂತಾ ಹಾಗೂ ನಾಗಚೈತನ್ಯರನ್ನು ಕರೆಯಲಾಗುತ್ತಿದ್ದು, ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದುಕೊಂಡರು. ಅಂದಿನಿಂದ ಪ್ರತಿನಿತ್ಯ ಒಂದಲ್ಲ ಒಂದು ಕಾರಣದಿಂದ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಸುದ್ದಿಯಲ್ಲೇ ಇದ್ದಾರೆ. ಸದ್ಯ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ನಡುವೆ ಪ್ರೇಮಾಂಕುರ ಏರ್ಪಟ್ಟಿದ್ದು, ಇಬ್ಬರೂ ಜೋಡಿಯಾಗಿ ತಿರುಗಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ. ಇದೀಗ ಅವರ ಮ್ಯಾಟರ್‍ ಅವರ ಪೋಷಕರವರೆಗೂ ತಲುಪಿದ್ದು, ಶೀಘ್ರ ಸರ್ಪ್ರೈಸ್ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸುಮಾರು ದಿನಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಪ್ರೇಮಪಯಣ ಸಾಗಿಸುತ್ತಿದ್ದಾರೆ. ಅನೇಕ ಬಾರಿ ಅವರಿಬ್ಬರೂ ಜೋಡಿಯಾಗಿ ಕೆಲವು ಕಡೆ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿತ್ತು. ಬಳಿಕ ಒಂದು ಪೊಟೋ ಸಹ ಲೀಕ್ ಆಗಿತ್ತು. ಆದರೆ ಈ ಪೊಟೋ ಎಡಿಟ್ ಮಾಡಲಾಗಿದೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಇನ್ನೂ ಶೋಭಿತಾ ಸೋಷಿಯಲ್ ಮಿಡಿಯಾ ಪೋಸ್ಟ್ ಗೆ ನಾಗಚೈತನ್ಯ ಲೈಕ್ ಮಾಡಿದ್ದು, ಸೇರಿದಂತೆ ಕೆಲವೊಂದು ಸಂಘಟನೆಗಳು ಅವರ ನಡುವಣ ಅಫೈರ್‍ ಬಗ್ಗೆ ಮತಷ್ಟು ಬಲ ತಂದುಕೊಟ್ಟಿತ್ತು. ಆದರೆ ಈ ರೂಮರ್‍ ಗಳ ಬಗ್ಗೆ ನಾಗಚೈತನ್ಯ ಹಾಗೂ ಶೋಭಿತಾ ಎಲ್ಲವೂ ಸುಳ್ಳುಸುದ್ದಿಗಳು ಎಂದು ಅನೇಕ ಬಾರಿ ತಿಳಿಸಿದ್ದರು. ಆದರೂ ಸಹ ಅವರ ಬಗೆಗಿನ ರೂಮರ್‍ ಗಳು ಮಾತ್ರ ನಿಂತಿಲ್ಲ.

ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಶೋಭಿತಾ ಹಾಗೂ ನಾಗಚೈತನ್ಯ ತಮ್ಮ ಪ್ರೇಮ ವಿಚಾರವನ್ನು ತಮ್ಮ ಫ್ಯಾಮಿಲಿಗೆ ತಿಳಿಸಿದ್ದಾರಂತೆ. ಈ ವಿಚಾರಕ್ಕೆ ಕುಟುಂಬಸ್ಥರು ಸಹ ಪಾಸಿಟೀವ್ ರೆಸ್ಪಾನ್ಸ್ ಕೊಟ್ಟಿದ್ದಾರಂತೆ. ಶೀಘ್ರದಲ್ಲೇ ಈ ಬಗ್ಗೆ ಅಭಿಮಾನಿಗಳಿಗೆ ಸಪ್ರೈಸ್ ಸಹ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ನಾಗಚೈತನ್ಯ ನಿರ್ಣಯವನ್ನು ಸಹ ಆತನ ಕುಟುಂಬ ಗೌರವಿಸಿದೆ ಎನ್ನಲಾಗುತ್ತಿದೆ. ಶೋಭಿತಾ ಜೊತೆಗೆ ಮದುವೆಗೆ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಶೀಘ್ರದಲ್ಲೇ ನಾಗಚೈತನ್ಯ ಹಾಗೂ ಶೋಭಿತಾ ರವರ ಬಗ್ಗೆ ಸಪ್ರೈಸಿಂಗ್ ಸುದ್ದಿಯೊಂದು ಸಹ ಹೊರಬರಲಿದೆ ಎಂಬ ಮಾತುಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸದ್ಯ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜವೋ ತಿಳಿಯದು ಆದರೆ ಸುದ್ದಿ ಮಾತ್ರ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಸದ್ಯ ನಾಗಚೈತನ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಶೋಭಿತಾ ಸಹ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಶೋಭಿತಾ ನೆವರ್‍ ಬಿಪೋರ್‍ ಅನ್ನೋ ತರಹ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಶೋಭಿತಾ ಹಾಗೂ ನಾಗಚೈತನ್ಯ ಶೀಘ್ರದಲ್ಲೇ ಮದುವೆ ವಿಚಾರವನ್ನು ಹೊರಹಾಕಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ.

Most Popular

To Top