Film News

ಮಲೈಕಾ ಹಾಗೂ ಅರ್ಜುನ್ ಕಪೂರ್ ರೊಮ್ಯಾಂಟಿಕ್ ಪಿಕ್ ಸಖತ್ ವೈರಲ್, ವಯಸ್ಸು ಕೇವಲ ನಂಬರ್ ಮಾತ್ರ ಎಂದ ಅಭಿಮಾನಿಗಳು…!

ಬಾಲಿವುಡ್ ನಲ್ಲಿ ತಮಗಿಂತ ಚಿಕ್ಕವರನ್ನು ಪ್ರೀತಿಸುವುದು ಮದುವೆಯಾಗುವುದು ಟ್ರೆಂಡ್ ಆಗಿದೆ. ಈಗಾಗಲೇ ಅನೇಕ ನಟಿಯರು ತಮಗಿಂತ ಚಿಕ್ಕವಯಸ್ಸಿನವರನ್ನು ಮದುವೆಯಾಗಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಬಾಲಿವುಡ್ ಸೀನಿಯರ್‍ ನಟಿ ಮಲೈಕಾ ಹಾಗೂ ಯಂಗ್ ನಟ ಅರ್ಜುನ್ ಕಪೂರ್‍ ಡೇಟಿಂಗ್ ನಲ್ಲಿದ್ದಾರೆ. ಬಹಿರಂಗವಾಗಿಯೇ ಅವರಿಬ್ಬರೂ ಪ್ರೇಮ ವಿಹಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಅನೇಕ ವಿಮರ್ಶೆಗಳು ಎದುರಾದರೂ ಯಾವುದನ್ನೂ ಕ್ಯಾರೆ ಎನ್ನದೇ ಮುಂದೆ ಸಾಗುತ್ತಿದ್ದಾರೆ. ಇದೀಗ ಅವರ ರೊಮ್ಯಾಂಟಿಕ್ ಪಿಕ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬಾಲಿವುಡ್ ಸ್ಟಾರ್‍ ನಟಿ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್‍ ನಡುವಣ ವಯಸ್ಸಿನ ಅಂತರ 12 ವರ್ಷ. ಸುಮಾರು ನಾಲ್ಕು ವರ್ಷಗಳಿಂದ ಈ ಜೋಡಿ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಅನೇಕ ಪಾರ್ಟಿಗಳು, ಫಂಕ್ಷನ್ ಗಳು ಸೇರಿದಂತೆ ವೆಕೇಷನ್ ಗಳಿಗೂ ಸಹ ಹಾರುತ್ತಿರುತ್ತಾರೆ. ಅಲ್ಲಿನ ಅವರ ಪೊಟೋಗಳು ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ಪ್ರೇಮಿಗಳ ದಿನಾಚರಣೆ ಅಂಗವಾಗಿ ಈ ಜೋಡಿ ರೊಮ್ಯಾಂಟಿಕ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಭಿನ್ನ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ವ್ಯಾಲೆಂಟೈನ್ಸ್ ಡೇ ಅಂಗವಾಗಿ ಮಲೈಕಾ ಹಾಗೂ ಅರ್ಜುನ್ ಕಪೂರ್‍ ರೊಮ್ಯಾಂಟಿಕ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಮುದ್ದಾದ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಮುದ್ದಾದ ಜೋಡಿಯ ಪ್ರೀತಿಯನ್ನು ನೋಡಿ ಅನೇಕ ಬಾಲಿವುಡ್ ಸ್ಟಾರ್‍ ಗಳೂ ಸಹ ಕಾಮೆಂಟ್ ಮಾಡುತ್ತಿರುವುದು ವಿಶೇಷ ಎನ್ನಬಹುದು. ಇನ್ನೂ ಈ ಪೊಟೋಗೆ ಸ್ಟಾರ್‍ ಸೆಲೆಬ್ರೆಟಿಗಳಾದ ಆತಿಯಾ ಶೆಟ್ಟಿ, ಶ್ರುತಿ ಹಾಸನ್, ಈಷಾ ಗುಪ್ತಾ, ತಾಹಿರ್‍ ಕಶ್ಯಪ್ ಸೇರಿದಂತೆ ಅನೇಕ ಸ್ಟಾರ್‍ ಗಳೂ ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಪೊಟೋದಲ್ಲಿ ಮಲೈಕಾ ಬ್ಲೂ ಕ್ರಾಪ್ ಟಾಪ್ ಹಾಗೂ ಮ್ಯಾಚಿಂಗ್ ಸ್ಕರ್ಟ್ ಧರಿಸಿದ್ದಾರೆ. ಕೈಯಲ್ಲಿ ಡ್ರಿಂಕ್ ಇಟ್ಟುಕೊಂಡು ಅರ್ಜುನ್ ಕಪೂರ್‍ ರವರನ್ನು ತಬ್ಬಿಕೊಂಡು ಪೋಸ್ ಕೊಟ್ಟಿದ್ದಾರೆ. ಇನ್ನೂ ಮಲೈಕಾ ತನ್ನ ಪ್ರಿಯಕರನಿಗೆ ಮುತ್ತಿಡುತ್ತಿರುವ ಪೊಟೋ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಮಲೈಕಾ ಹಾಗೂ ಅರ್ಜುನ್ ಕಪೂರ್‍ ಪೊಟೋಗಳಿಗೆ ಅವರ ಅಭಿಮಾನಿಗಳೂ ಸಹ ಕಾಮೆಂಟ್ ಗಳನ್ನು ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಯಸ್ಸು ಎಂಬುದು ಕೇವಲ ನಂಬರ್‍ ಮಾತ್ರ. ಪ್ರೀತಿಗೆ ವಯಸ್ಸು ಎಂದೂ ಅಡ್ಡಿಯಾಗಲ್ಲ. ನೀವು ಸದಾ ಹೀಗೆ ಸಂತೋಷವಾಗಿ ಆರೋಗ್ಯವಾಗಿ ಇರಬೇಕೆಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಜೋಡಿಯ ಬಗ್ಗೆ ಅನೇಕ ವಿಮರ್ಶೆಗಳು ಬಂದರೂ ಸಹ ಅದಕ್ಕೆ ಕಿವಿಗೊಡದೆ ತಮ್ಮ ಕೆಲಸ ತಾವು ಮಾಡಿಕೊಂಡು ಸಾಗುತ್ತಿದ್ದಾರೆ.

Most Popular

To Top