Film News

ಚಿರು ಪುತ್ರಿ ಶ್ರೀಜಾ ಹಾಗೂ ಅಳಿಯ ಕಲ್ಯಾಣ್ ದೇವ್ ನಡುವೆ ಪೋಸ್ಟ್ ವಾರ್ ಶುರು, ವೈರಲ್ ಆದ ಪೋಸ್ಟ್ ಗಳು….!

ಟಾಲಿವುಡ್ ನಲ್ಲಿ ದೊಡ್ಡ ಫೇಮ್ ನೇಮ್ ಹೊಂದಿರುವಂತಹ ಮೆಗಸ್ಟಾರ್‍ ಚಿರಂಜೀವಿ ಕಿರಿಯ ಮಗಳು ಶ್ರೀಜಾ ಈ ಹಿಂದೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸುಮಾರು ದಿನಗಳಿಂದ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಇಬ್ಬರೂ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸಹ ಈ ಬಗ್ಗೆ ಅಧಿಕೃತವಾದ ಮಾಹಿತಿ ಮಾತ್ರ ಇನ್ನೂ ಹೊರಬಂದಿಲ್ಲ.  ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೆಲವು ತಿಂಗಳುಗಳಿಂದ ಬೇರೆಯಾಗಿದ್ದಾರೆ. ಇದೀಗ ಅವರ ನಡುವೆ ಶೀಥಿಲ ಸಮರ ಶುರುವಾಗಿದೆ. ಸೋಷಿಯಲ್ ಮಿಡಿಯಾ ಮೂಲಕ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಚಿರು ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಸದ್ಯ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದಾರೆ. ಅವರಿಬ್ಬರ ನಡುವೆ ವಿಬೇಧಗಳು ಏರ್ಪಟ್ಟ ಕಾರಣದಿಂದ ವಿಚ್ಚೇಧನ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಶ್ರೀಜಾರನ್ನು ಮದುವೆಯಾದ ಬಳಿಕ ನಟ ಕಲ್ಯಾಣ್ ದೇವ್ ಚಿರು ಮನೆಯಲ್ಲೇ ಇರುತ್ತಿದ್ದರು. ಬಳಿಕ ಇಬ್ಬರ ನಡುವೆ ವಿಬೇದಗಳ ಏರ್ಪಟ್ಟ ಬಳಿಕ ಆತ ಬೇರೆಯಾಗಿದ್ದಾರೆ. ಇನ್ನೂ ಅವರು ಏತಕ್ಕಾಗಿ  ಬೇರೆಯಾದರು ಎಂಬ ನಿಖರ ಮಾಹಿತಿ ಮಾತ್ರ ಲಭ್ಯವಿಲ್ಲ. ಇದೀಗ ಅವರು ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪ್ರೇಮಿಗಳ ದಿನದಂದು ಅವರು ಮಾಡಿಕೊಂಡಿರುವ ಸೋಷಿಯಲ್ ಮಿಡಿಯಾ ಪೋಸ್ಟ್ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಇನ್ನೂ ಕಲ್ಯಾಣ್ ದೇವ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಒಬ್ಬರನ್ನು ಎಷ್ಟು ಇಷ್ಟಪಡುತ್ತೇವೆ ಎಂಬುದು ಅಲ್ಲ, ಹೇಗೆ ಅವರನ್ನು ಟ್ರೀಟ್ ಮಾಡಿದ್ದೀವಿ ಎಂಬುದು ಮುಖ್ಯ ಎಂದು ಸ್ಟೇಟಸ್ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಕೌಂಟರ್‍ ನೀಡಿದ ಶ್ರೀಜಾ ಒಬ್ಬರನ್ನು ಪ್ರೀತಿಸುವುದು ಎಂದರೇ  ಅರ್ಥ ನಿಮ್ಮನ್ನು ತುಂಬಾ ಪ್ರೀತಿಸುವಂತೆ ಮಾಡಿಕೊಳ್ಳುವುದು ಅಲ್ಲ ತಮ್ಮನ್ನು ತಾವು ಹೆಚ್ಚಾಗಿ ಪ್ರೀತಿಸುವಂತೆ ಮಾಡಿಕೊಳ್ಳಬೇಕು, ಪ್ರೀತಿಯನ್ನು ಗುರ್ತಿಸಬೇಕು. ಸದಾ ಅದಕ್ಕಾಗಿ ಹುಡುಕಬಾರದು ಎಂದು ಶ್ರೀಜಾ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿದ್ದಾರೆ. ಇನ್ನೂ ಈ ಪೋಸ್ಟ್ ಹೊರಬರುತ್ತಿದ್ದಂತೆ ಅವರಿಬ್ಬರ ನಡುವೆ ಪೋಸ್ಟ್ ವಾರ್‍ ಶುರುವಾದಂತಿದೆ ಎನ್ನಲಾಗುತ್ತಿದೆ. ಅವರಿಬ್ಬರ ನಡುವೆ ಎಷ್ಟರ ಮಟ್ಟಿಗೆ ವಿಬೇದಗಳು ಉದ್ಬವಿಸಿದೆ ಎಂಬುದು ಈ ಪೋಸ್ಟ್ ಗಳ ಮೂಲಕ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸುಮಾರು ದಿನಗಳಿಂದ ಶ್ರೀಜಾ ಕಲ್ಯಾಣ್ ದೇವ್ ರಿಂದ ಬೇರೆಯಾಗಿದ್ದು, ಶೀಘ್ರದಲ್ಲೇ ಮೂರನೇ ಮದುವೆಯಾಗಲಿದ್ದಾರೆ ಎಂಬ ಪ್ರಚಾರ ಸಹ ಆಗಿತ್ತು. ಜೊತೆಗೆ ಕಲ್ಯಾಣ್ ದೇವ್ ಸಹ ಬೇರೆ ಮದುವೆಯಾಗಲಿದ್ದಾರೆ ಎಂದೂ ಸಹ ಹೇಳಲಾಗಿತ್ತು. ಇನ್ನೂ ಶ್ರೀಜಾ ತನ್ನ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿದ್ದು, ಜೀವನ ಸಾಗಿಸುತ್ತಿದ್ದಾರೆ.

Most Popular

To Top