ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ವರಲಕ್ಷ್ಮೀ ಶರತ್ ಕುಮಾರ್, ಮದುವೆಯಾಗಿ ಒಬ್ಬನ ಮುಖ ನೋಡಿಕೊಂಡು ಇರಬೇಕೇ ಎಂದ ನಟಿ…..!

ಸಿನೆಮಾ ಸೆಲಬ್ರೆಟಿಗಳ ವೈಯುಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ ತುಂಬಾನೆ ಆಸಕ್ತಿಯಿರುತ್ತದೆ. ಅದರಲ್ಲೂ ನಟಿಯರ ಮದುವೆಯ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಅಂತಹುದೇ ಪ್ರಶ್ನೆಯೊಂದು ಕಾಲಿವುಡ್ ನಟಿ ವರಲಕ್ಷ್ಮೀ ಶರತ್ ಕುಮಾರ್‍ ರವರಿಗೂ ಸಹ ಎದುರಾಗಿದೆ. ನಟಿಯಾಗಿ ಫೇಂ ಪಡೆದುಕೊಳ್ಳಲು ಬಂದ ವರಲಕ್ಷ್ಮೀ ಇದೀಗ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಲೇಡಿ ವಿಲನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಮದುವೆಯ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದು ಆ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ತಮ್ಮದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಹಿರಿಯ ನಟ ಶರತ್ ಕುಮಾರ್‍ ರವರ ಪುತ್ರಿ ವರಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಆಕೆ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಅನೇಕ ನೆಗೆಟೀವ್ ಪಾತ್ರಗಳಲ್ಲೂ ಸಹ ಆಕೆ ಕಾಣಿಸಿಕೊಂಡಿದ್ದಾರೆ. ಆಕೆ ಕಾಣಿಸಿಕೊಂಡ ಬಹುತೇಕ ಎಲ್ಲಾ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಆಕೆ ಹೆಚ್ಚಾಗಿ ನೆಗೆಟೀವ್ ರೋಲ್, ಸೀರಿಯಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಆಕೆಯ ಮದುವೆಯ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಆಕೆ ಶಾಕಿಂಗ್ ಉತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ವರಲಕ್ಷ್ಮೀ ರವರಿಗೆ ಮದುವೆಯ ಬಗ್ಗೆ ಆಂಕರ್‍ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಆಕೆ ವಿಭಿನ್ನವಾದ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಮದುವೆಯಾಕೆ ಮಾಡಿಕೊಳ್ಳಬೇಕು. ಮದುವೆಯಾಗಿ ಪ್ರತಿನಿತ್ಯ ಒಂದೇ ಮುಖ ನೋಡಿಕೊಂಡು ಇರಬೇಕೆ.  ರಾಜಕೀಯಕ್ಕೆ ಹೋಗಬೇಕೆಂಬುದು ನನ್ನ ಗುರಿಯಾಗಿದೆ. ಪ್ರೀತಿ, ಮದುವೆ ಎಂಬುದರಲ್ಲಿ ಯಾವುದೇ ಅರ್ಥ ಇಲ್ಲ. ಪ್ರೀತಿಸದೇ ಮದುವೆ ಸಹ ಮಾಡಿಕೊಳ್ಳಲಾಗುವುದಿಲ್ಲ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಳಿಕ ಎದುರಾದ ಪ್ರಶ್ನೆಗೆ ರಿಯಾಕ್ಟ್ ಆದ ವರಲಕ್ಷ್ಮೀ ಯಾರೋ ಒಬ್ಬರ ಒತ್ತಾಯದ ಮೇಲೆ ಒಬ್ಬ ವ್ಯಕ್ತಿಯೊಂದಿಗೆ ಜೀವನ ಪರ್ಯಂತ ಇರಲು ಆಗುವುದಿಲ್ಲ. ಜೀವನ ಪರ್ಯಂತ ಅದೇ ವ್ಯಕ್ತಿಯೊಂದಿಗೆ ಜೀವಿಸಲು ನಿರ್ಣಯ ತೆಗೆದುಕೊಂಡಾಗ ಮಾತ್ರ ಮದುವೆಯಾಗಬೇಕು. ಸಲ್ಮಾನ್ ಖಾನ್ ರವರನ್ನು ಮದುವೆ ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಕೇಳೋಕೆ ಆಗುತ್ತಾ. ಹೆಂಗಸರಿಗೆ ಮಾತ್ರ ಈ ಪ್ರಶ್ನೆಗಳು, ಅವರೂ ಸಹ ಸ್ವಾಭಿಮಾನಿಯಾಗಿ ಜೀವನ ಸಾಗಿಸಬಲ್ಲರು. ಅದೇ ರೀತಿ ಅವರಿಗೆ ಏನು ಬೇಕು ಅದನ್ನೂ ಸಹ ಮಾಡಿಕೊಳ್ಳಬಲ್ಲರು ಎಂದು ಅನೇಕ ವಿಚಾರಗಳನ್ನು ಹೇಳಿದ್ದಾರೆ.

ಇನ್ನೂ ಈಗಾಗಲೇ ವರಲಕ್ಷ್ಮೀ ಪ್ರೀತಿಸಿದ್ದು, ಬ್ರೇಕಪ್ ಆಗಿದ್ದು ಎಲ್ಲವೂ ನಡೆದುಹೋಗಿದೆ.  ಆ ಕಾರಣದಿಂದಲೇ ಆಕೆ ಈ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಶನದ ಬಳಿಕ ಆಕೆಯ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಎದುರಾಗಬಹುದು ಎಂದೂ ಸಹ ಹೇಳಲಾಗುತ್ತಿದೆ.