Film News

ಬೀಚ್ ನಲ್ಲಿ ಎಂಜಾಯ್ ಮಾಡುತ್ತಾ ಹಾಟ್ ಪೋಸ್ ಕೊಟ್ಟ ನಿಹಾರಿಕಾ ಕೊಣಿದೆಲಾ, ಕ್ಲೀವೇಜ್ ಶೋ ಮೂಲಕ ಹಲ್ ಚಲ್ ಸೃಷ್ಟಿಸಿದ ನಟಿ…..!

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬಕ್ಕೆ ಒಳ್ಳೆಯ ಕ್ರೇಜ್ ಹಾಗೂ ಖ್ಯಾತಿ ಇದೆ. ಮೆಗಾ ಕುಟುಂಬದಿಂದ ಅನೇಕರು ಸಿನಿರಂಗದಲ್ಲಿ ಬಂದು ಒಳ್ಳೆಯ ಸಕ್ಸಸ್ ಸಹ ಕಂಡುಕೊಂಡಿದ್ದಾರೆ. ಮೆಗಾ ಕುಟುಂಬದಿಂದ ನಟಿಯಾಗಿ ಕಾಣಿಸಿಕೊಂಡಿದ್ದು ಮಾತ್ರ ನಿಹಾರಿಕಾ ಕೊಣಿದೆಲಾ ಎಂದು ಹೇಳಬಹುದು. ನಾಗಬಾಬು ಪುತ್ರಿ ನಿಹಾರಿಕಾ ಕೊಣಿದೆಲಾ ನಟಿಯಾಗಿ ಕೆಲವು ವರ್ಷಗಳ ಹಿಂದೆಯಷ್ಟೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ನಟಿಯಾಗಿ ಆಕೆ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ. ಬಳಿಕ ಸಿನೆಮಾಗಳಿಂದ ದೂರವುಳಿದು ಮದುವೆಯಾದರು. ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಇನ್ನೂ ಬೀಚ್ ನಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಟೊ ಹಾಗೂ ವಿಡಿಯೋ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ದೊಡ್ಡ ಕುಟುಂಬದಿಂದ ಬಂದಂತಹ ನಟಿಯರ ಸಾಲಿಗೆ ನಿಹಾರಿಕಾ ಸಹ ಸೇರುತ್ತಾರೆ. ಈಗಾಗಲೇ ಆಕೆ ಬಣ್ಣದ ಲೋಕದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಢಿ ಎಂಬ ಡ್ಯಾನ್ಸ್ ಶೋ ಮೂಲಕ ಆಂಕರ್‍ ಆಗಿ ಕಾಣಿಸಿಕೊಂಡರು. ಇದಾದ ಬಳಿಕ ಕೆಲವೊಂದು ಶಾರ್ಟ್ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಬಳಿಕ ಪಿಂಕ್ ಎಲಿಫೆಂಟಾ ಪಿಕ್ಚರ್ಸ್ ಎಂಬ ಬ್ಯಾನರ್‍ ನಡಿ ಮುದ್ದಪಪ್ಪು ಆವಕಾಯ್, ನಾನ್ನ ಕೂಚಿ ಎಂಬ ವೆಬ್ ಸಿರೀಸ್ ಗಳನ್ನು ಸಹ ನಿರ್ಮಾಣ ಮಾಡಿದರು. ಇನ್ನೂ ಕಳೆದ 2016 ರಲ್ಲಿ ಒಕ್ಕ ಮನಸ್ಸು ಎಂಬ ಸಿನೆಮಾದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಬಳಿಕ ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ಸಿನೆಮಾಗಳಲ್ಲಿ ನಟಿಸಿದರು. ಈ ಸಿನೆಮಾಗಳು ಪ್ಲಾಫ್ ಆದವು. ಕೊನೆಯದಾಗಿ ಆಕೆ ಓ ಮಂಚಿ ರೋಜು ಚೂಸಿ ಚೆಪ್ತಾ ಎಂಬ ಸಿನೆಮಾದಲ್ಲಿ ಕಾಲಿವುಡ್ ಸ್ಟಾರ್‍ ನಟ ವಿಜಯ್ ಸೇತುಪತಿ ಜೊತೆ ನಟಿಸಿದ್ದರು. ಚಿರಂಜೀವಿ ಅಭಿನಯದ ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು.

ಇನ್ನೂ ನಿಹಾರಿಕಾ ಕೊಣಿದೆಲಾ ಇಂಡೋನೇಷಿಯಾದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕಡಲ ತೀರದಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆರೆಂಜ್ ಕಲರ್‍ ಸ್ಲೀವ್ ಲೆಸ್ ಡ್ರೆಸ್ ನಲ್ಲಿ ತಿರುಗಾಡುತ್ತಾ ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಈ ವಿಡಿಯೋಗೆ ಆಕೆ ಕ್ಯಾಪ್ಷನ್ ಸಹ ಹಾಕಿದ್ದಾರೆ. ಯಾರನ್ನು ಹಿಡಿಸಿಕೊಳ್ಳದೇ ವಾಕ್ ಮಾಡುತ್ತೀವಿ ಎಂದು ಕ್ಯಾಪ್ಷನ್ ಹಾಕಿದ್ದಾರೆ.ಇದೀಗ ಆಕೆಯ ವಿಡಿಯೋ ಹಾಗೂ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಇತ್ತೀಚಿಗೆ ಕೆಲವು ದಿನಗಳಿಂದ ನಿಹಾರಿಕಾ ಹಾಗೂ ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಏರ್ಪಟ್ಟು ಅವರಿಬ್ಬರು ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಈ ರೂಮರ್‍ ಹುಟ್ಟಿಕೊಂಡಾಗಿನಿಂದ ನಿಹಾರಿಕಾ ಏನೆ ಮಾಡಿದರೂ ಸುದ್ದಿಯಾಗುತ್ತಿದೆ. ಇನ್ನೂ ಆಕೆ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

Most Popular

To Top