ತನ್ನ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ಪ್ರಗ್ಯಾ, ಪ್ರತಿನಿತ್ಯ ಆ ಕೆಲಸ ತಪ್ಪದೇ ಮಾಡುತ್ತಾರಂತೆ ಪ್ರಗ್ಯಾ ಜೈಸ್ವಾಲ್…!

ಸೌತ್ ಸಿನಿರಂಗದಲ್ಲಿ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಮುನ್ನುಗ್ಗುತ್ತಿರುವ ದಕ್ಷಿಣ ಭಾರತದ ನಟಿ ಪ್ರಗ್ಯಾ ಜೈಸ್ವಾಲ್ ಕಾಲಿವುಡ್ ನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು…

ಸೌತ್ ಸಿನಿರಂಗದಲ್ಲಿ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಮುನ್ನುಗ್ಗುತ್ತಿರುವ ದಕ್ಷಿಣ ಭಾರತದ ನಟಿ ಪ್ರಗ್ಯಾ ಜೈಸ್ವಾಲ್ ಕಾಲಿವುಡ್ ನ ವಿರಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಈಕೆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹಾಟ್  ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.

ನಟಿ ಪ್ರಗ್ಯಾ ವಯಸ್ಸಾಗುತ್ತಿದ್ದಂತೆ ಮತಷ್ಟು ಹಾಟ್ ಆಗುತ್ತಿದ್ದಾರೆ. ಫಿಟ್ ನೆಸ್ ವಿಚಾರದಲ್ಲಿ ಆಕೆ ಯಾವುದೇ ರೀತಿಯಲ್ಲೂ ಕಾಂಪ್ರಮೈಸ್ ಆಗುವುದಿಲ್ಲವಂತೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪ್ರಗ್ಯಾ ತನ್ನ ಫಿಟ್ ನೆಸ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಗ್ಯಾ ಚಿಕ್ಕಂದಿನಿಂದಲೇ ಫಿಟ್ ಆಗಿರಲು ಬಯಸಿದ್ದರಂತೆ. ತನ್ನ ತಂದೆ ಸಹ ಯೋಗಾಸನಗಳನ್ನು ಮಾಡುತ್ತಿದ್ದರಂತೆ. ಆಕೆಯೊಂದಿಗೂ ಸಹ ಸಣ್ಣ ಪುಟ್ಟ ಯೋಗಾಸನಗಳನ್ನು ಮಾಡಿಸುತ್ತಿದ್ದರಂತೆ. ವಾರಕ್ಕೆ ಐದು ದಿನಗಳ ಕಾಲ ದಿನಕ್ಕೆ ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡುತ್ತೇನೆ. ಜೊತೆಗೆ ಡ್ಯಾನ್ಸ್ ಮೂಲಕ ಸಹ ಫಿಟ್ ನೆಸ್ ಕಾಪಾಡಿಕೊಳ್ಳುತ್ತೇನೆ ಎಂದು ಪ್ರಗ್ಯಾ ಹೇಳಿದ್ದಾರೆ.

ನನ್ನ ದೃಷ್ಟಿಯಲ್ಲಿ ಡ್ಯಾನ್ಸ್ ಗೆ ಮೀರಿದ ಯಾವುದೇ ವರ್ಕೌಟ್ ಇಲ್ಲ. ಆದ್ದರಿಂದಲೇ ದಿನ ಬಿಟ್ಟು ದಿನ ನಾನು ಡ್ಯಾನ್ಸ್ ಮಾಡುತ್ತೇನೆ. ಅದರಲ್ಲೂ ನಾನು ಯಾವುದೇ ಡ್ಯಾನ್ಸ್ ಸ್ಕೂಲ್ ನಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡಲಿಲ್ಲ. ಆದರೆ ನನಗೆ ನೃತ್ಯವೆಂದರೇ ತುಂಬಾನೆ ಇಷ್ಟ. ಒಂದು ಡ್ಯಾನ್ಸ್ ತಂಡದ ಮೂಲಕವೇ ನಾನು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟೆ. ಆದ್ದರಿಂದಲೇ ನಾನು ನೃತ್ಯಕ್ಕೆ ತುಂಬಾ ಋಣಿಯಾಗಿರುತ್ತೇನೆ ಎಂದರು. ಜೊತೆಗೆ ಹೊರಗಿನ ಪುಡ್ ತಿನ್ನಲು ಇಷ್ಟಪಡುವುದಿಲ್ಲ. ನನಗೆ ಮನೆಯ ಊಟ ಆದರೇ ಮಾತ್ರ ಇಷ್ಟ. ಜಂಕ್ ಪುಡ್ ಸಹ ಇಷ್ಟವಾಗುವುದಿಲ್ಲ. ಕಠಿಣವಾದ ಆಹಾರ ಪದ್ದತಿಗಳನ್ನು ಪಾಲಿಸುವುದಿಲ್ಲ. ಇಷ್ಟವಾದ ಆಹಾರವನ್ನು ಇಷ್ಟವಾಗಿಯೇ ತಿನ್ನುತ್ತೇನೆ ಎಂದಿದ್ದಾರೆ.

ಇನ್ನೂ ಚರ್ಮ ಸೌಂದರ್ಯದ ಬಗ್ಗೆ ಸಹ ಆಕೆ ತುಂಬಾನೆ ಕೇರ್‍ ತೆಗೆದುಕೊಳ್ಳುತ್ತಿರುತ್ತಾರಂತೆ. ಯಾವುದಾದರೂ ಸ್ಕಿನ್ ಕ್ಲೀನಿಂಗ್ ಲಿಕ್ವಿಡ್ ನೊಂದಿಗೆ ಕ್ಲೀನ್ ಮಾಡುತ್ತಾರಂತೆ. ಹೊರಗೆ ಹೋದಾಗ ಸನ್ ಸ್ಕ್ರೀನ್ ತಪ್ಪದೇ ಬಳಸುತ್ತಾರಂತೆ. ಸೌಂದರ್ಯ ವೃದ್ದಿಗಾಗಿ ತುಂಬಾನೆ ನೀರು ಕುಡಿಯುತ್ತಾರಂತೆ ಪ್ರಗ್ಯಾ. ಸದ್ಯ ಅಖಂಡ್ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.