Film News

ನಟಿ ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್, ತುಂಬಾ ಸಿಂಪಲ್ ಆಗಿ ನಡೆದಿದೆ ಸ್ಟಾರ್ ನಟಿಯ ಮದುವೆ, ವೈರಲ್ ಆದ ವಿಡಿಯೋ….!

ಸ್ಟಾರ್‍ ನಟಿ ತಾಪ್ಸಿ ಪನ್ನು ಝುಮ್ಮಂದಿ ನಾದಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸುಮಾರು ವರ್ಷಗಳಿಂದ ಸೌತ್ ಸಿನೆಮಾಗಳಲ್ಲಿ ನಟಿಸುತ್ತಿದ್ದ ಈಕೆ ಸದ್ಯ ಬಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ತಾಪ್ಸಿ ಪನ್ನು ತನ್ನ ಪ್ರಿಯಕರ ಮಥಿಯಾಸ್ ಎಂಬ ಬ್ಯಾಡ್ಮಿಂಟನ್ ಪ್ಲೇಯರ್‍ ನನ್ನು ಮದುವೆಯಾದರು ಎಂಬ ಸುದ್ದಿ ಹರಿದಾಡಿತ್ತು. ಇದೀಗ ತಾಪ್ಸಿ ಪನ್ನು ಮದುವೆಯ ವಿಡಿಯೋ ಲೀಕ್ ಆಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸುಮಾರು ದಿನಗಳಿಂದ ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಎಂಬಾತನನ್ನು ಸೀಕ್ರೇಟ್ ಆಗಿ ಲವ್ ಮಾಡುತ್ತಿದ್ದರು . ಈ ಸುದ್ದಿ ಸಹ ಆಗಾಗ ಕೇಳಿಬರುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ನಿಗೂಡವಾಗಿ ಹತ್ತಿರದ ಸಂಬಂಧಿಗಳು ಹಾಗೂ ತುಂಬಾ ಹತ್ತಿರದ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದರು ಎಂದು ಹೇಳಲಾಗಿತ್ತು. ಈ ಸುದ್ದಿ ಸಿನಿವಲಯ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಆದರೆ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ ತಾಪ್ಸಿ ಪನ್ನು. ಆದರೆ ಇದೀಗ ತಾಪ್ಸಿ ಪನ್ನು ಮದುವೆಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತುಂಬಾ ಸಿಂಪುಲ್ ಆಗಿ ತಾಪ್ಸಿ ಪನ್ನು ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ತಾಪ್ಸಿ ಪನ್ನು ಕೆಲವು ದಿನಗಳ ಹಿಂದೆಯಷ್ಟೆ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಜೊತೆಗೆ ಸರಳವಾಗಿ ಮದುವೆಯಾಗಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಈ ಮದುವೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮಕ್ಷಮದಲ್ಲಿ ಮದುವೆ ವೇದಿಕೆಗೆ ತಾಪ್ಸಿ ಎಂಟ್ರಿ ಕೊಡುತ್ತಾರೆ. ಆಕೆ ಕೆಂಪು ಬಣ್ಣದ ಷರ್ವಾನಿ ಸೂಟ್ ನಲ್ಲಿ ಮದುವೆ ಮಂಟಪಕ್ಕೆ ಡ್ಯಾನ್ಸ್ ಮಾಡುತ್ತಾ ಬರುತ್ತಾಳೆ. ಬಳಿಕ ಮಥಿಯಾಸ್ ಅನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾಳೆ. ಇದೀಗ ಈ ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ. ಅವರಿಬ್ಬರ ಮದುವೆ ಮಾರ್ಚ್ ಮಾಹೆಯ ಕೊನೆಯ ವಾರದಲ್ಲಿ ನಡೆದಿದೆ. ಉದಯಪುರದಲ್ಲಿನ ಖ್ಯಾತ ಪ್ಯಾಲೆಸ್ ಒಂದರಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದೆ ಎಂದು ಹೇಳಬಹುದಾಗಿದೆ.

ಸುಮಾರು 10 ವರ್ಷಗಳಿಂದ ತಾಪ್ಸಿ ಹಾಗೂ ಮಥಿಯಾಸ್ ಪ್ರೀತಿಸಿಕೊಳ್ಳುತ್ತಿದ್ದರಂತೆ. ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದರು. ಇದೀಗ ಅಧಿಕೃತವಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ತಾಪ್ಸಿ ಇನ್ನೂ ಅಧಿಕೃತವಾಗಿ ಯಾವುದೇ ವಿಚಾರ ತಿಳಿಸಿಲ್ಲ ಎನ್ನಲಾಗಿದೆ.

Most Popular

To Top