ಈಗಾಗಲೇ ನಾಲ್ಕು ಬಾರಿ ಮದುವೆಯಾಗಿದೆ, ಇದು ಐದನೇ ಬಾರಿ ಎಂದ ನಟಿ ಅಂಜಲಿ, ಮದುವೆ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ….!

Follow Us :

ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಅಂಜಲಿ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಈಗಾಗಲೇ  ಅನೇಕ ಸಿನೆಮಾಗಳಲ್ಲಿ ನಟಿಯಾಗಿ, ಸಹನಟಿಯಾಗಿ ನಟಿಸಿದ್ದಾರೆ. ಕೆಲವೊಂದು ಸಿನೆಮಾಗಳಲ್ಲಿ ನೆಗೆಟೀವ್ ಪಾತ್ರಗಳಲ್ಲೂ ಸಹ ನಟಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಆಕೆ ತನ್ನ ಸಿನಿ ಕೆರಿಯರ್‍ ನಲ್ಲಿ ತುಂಬಾನೆ ಏರು ಪೇರುಗಳು, ವಿವಾದಗಳು, ಕಷ್ಟ ನೋವುಗಳನ್ನು ಎದುರಿಸಿದ್ದಾರೆ. ಅದರಲ್ಲೂ ಆಕೆಯ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡಿತ್ತು. ಇದೀಗ ಮದುವೆಯ ಬಗ್ಗೆ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ವೈರಲ್ ಆಗುತ್ತಿವೆ.

ತೆಲುಗು ನಟಿ ಅಂಜಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅಂಜಲಿ ತೆಲುಗು, ತಮಿಳು ಸಿನೆಮಾಗಳಲ್ಲಿ ಸ್ಟಾರ್‍ ನಟರೊಂದಿಗೆ ನಟಿಸಿದ್ದಾರೆ. ತನ್ನದೇ ಆದ ನಟನೆಯೊಂದಿಗೆ ಎಲ್ಲರನ್ನು ರಂಜಿಸುತ್ತಿದ್ದಾರೆ. ಆಗಾಗ ಸ್ಪೇಷಲ್ ಸಾಂಗ್ ಗಳ ಮೂಲಕವೂ ಸಹ ಸದ್ದು ಮಾಡುತ್ತಿದ್ದಾರೆ. ಸದ್ಯ ಆಕೆ ಗೀತಾಂಜಲಿ-2 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದೇ ತಿಂಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಟ್ರೈಲರ್‍ ಲಾಂಚ್ ಈವೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಆಕೆ ಮದುವೆಯ ರೂಮರ್‍ ಗಳ ಬಗ್ಗೆ ಸಹ ಮಾತನಾಡಿದ್ದಾರೆ. ಓರ್ವ ರಿಪೋರ್ಟರ್‍ ಇದೇ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆಕೆ ಶಾಕಿಂಗ್ ರಿಪ್ಲೇ ಕೊಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ನಟಿ ಅಂಜಲಿಗೆ ಎದುರಾದ ಪ್ರಶ್ನೆಗೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಮದುವೆಗೆ ಬರಬೇಕಾಗಿರೋದು ನಾನು, ನನಗೆ ಗೊತ್ತಿಲ್ಲ. ಈಗಾಗಲೇ ನನಗೆ ನಾಲ್ಕು ಬಾರಿ ಮದುವೆಯಾಗಿದೆ. ಇದೀಗ ಐದನೇ ಬಾರಿ ಮದುವೆ ಮಾಡೋಕೆ ನೋಡ್ತಾ ಇದ್ದಾರೆ. ನಾನು ಇತ್ತೀಚಿಗೆ ಈ ಸುದ್ದಿಯನ್ನು ಕೇಳಿದ್ದೇನೆ. ನಾನು ಮದುವೆಯಾಗುತ್ತೇನೆ, ಆದರೆ ಈಗಲ್ಲ, ಸದ್ಯ ಹರಿದಾಡುತ್ತಿರುವ ಸುದ್ದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಜೊತೆಗೆ ಮತ್ತೊಂದು ಸುದ್ದಿಯನ್ನು ಸಹ ಕೇಳಿದ್ದೇನೆ. ನಾನು ವ್ಯಕ್ತಿಯೊಬ್ಬರ ಜೊತೆಗೆ ಸಹಜೀವನ ನಡೆಸುತ್ತಿದ್ದೇನೆ ಎಂದು, ನಾನೇ ನಮ್ಮ ಮನೆಯಲ್ಲಿ ಇರುತ್ತಿಲ್ಲ. ಔಟ್ ಡೋರ್‍ ನಲ್ಲಿದ್ದೇನೆ. ಇರುವವರು ಯಾರೋ ಗೊತ್ತಿಲ್ಲ. ನನಗೆ ರೆಂಟ್ ಕೊಟ್ಟು ಹೋದರೇ ಚೆನ್ನಾಗಿರುತ್ತದೆ.  ಇಎಂಐ ಕಟ್ಟಿಕೊಳ್ಳೋಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಸಿನೆಮಾ ಆಫರ್‍ ಗಳ ಬಗ್ಗೆ ಸಹ ಮಾತನಾಡಿದ್ದಾರೆ. ನನಗೆ ತುಂಬಾನೆ ಸಿನೆಮಾ ಆಫರ್‍ ಗಳು ಬರ್ತಾ ಇದೆ. ಆದರೆ ನಾನು ಎಲ್ಲಾ ಮಾಡುತ್ತಿಲ್ಲ. ಒಳ್ಳೆಯ ಆಫರ್‍ ಗಳನ್ನು ಮಾತ್ರ ಒಪ್ಪುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಅಂಜಲಿ ಗ್ಯಾಂಗ್ಸ್ ಆಫ್ ಗೋದಾವರಿ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಮಾಡಿದ್ದಾರೆ ಜೊತೆಗೆ ರಾಮ್ ಚರಣ್ ರವರ ಗೇಮ್ ಚೇಂಜರ್‍ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.