ಮದುವೆಯಾದರೂ ತಗ್ಗೇದೇ ಲೇ ಎಂದ ನಯನತಾರಾ, ಹಾಲಿವುಡ್ ಹಿರೋಯಿನ್ ಮಾದರಿಯಲ್ಲಿ ಬೋಲ್ಡ್ ಪೋಸ್ ಕೊಟ್ಟ ನಟಿ…!

Follow Us :

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡ ನಟಿ ನಯನತಾರಾ ಮದುವೆಯಾದರೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ಆಕೆ ಭಾರಿ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ನೆವರ್‍ ಬಿಪೋರ್‍ ಎಂಬಂತೆ, ಮದುವೆಯಾದರೂ ಸಹ ತಗ್ಗೇದೇ ಲೇ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಹಾಲಿವುಡ್ ನಟಿಯಂತೆ ಬೋಲ್ಡ್ ಪೋಸ್ ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ನಯನತಾರಾ ಕಳೆದ 2022 ಜೂನ್ 9 ರಂದು ಕಾಲಿವುಡ್ ನಿರ್ದೇಶಕ ವಿಘ್ನೇಶ್‌ ಶಿವನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷವಷ್ಟೆ ಆಕೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡರು. ಸಾಮಾನ್ಯವಾಗಿ 30 ವರ್ಷ ದಾಟಿದ ನಟಿಯರು ನಿವೃತ್ತಿ ಪಡೆದುಕೊಳ್ಳಬೇಕು ಅಥವಾ ಸಿನೆಮಾಗಳಲ್ಲಿ ಆಫರ್‍ ಗಳು ಕಡಿಮೆಯಾಗುತ್ತದೆ. ಕ್ಯಾರೆಕ್ಟರ್‍ ರೋಲ್ಸ್ ಮಾಡುತ್ತಾ ಕೆರಿಯರ್‍ ಮುಂದುವರೆಸಬೇಕು. ಆದರೆ ಕೆಲ ನಟಿಯರು ಮಾತ್ರ ವಯಸ್ಸಾದರೂ ಸಹ ಅವಕಾಶಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ನಯನತಾರಾ ಸಹ ಸೇರುತ್ತಾರೆ. ರಜನಿಕಾಂತ್, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆ ನಟಿಸಿದ ನಯನತಾರಾ ಮದುವೆಯಾದ ಬಳಿಕವೂ, 40 ವಯಸ್ಸಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೋಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ನಟಿ ನಯನತಾರ ಗೆ 40 ವರ್ಷ ವಯಸ್ಸಾಗಿದೆ. ವಯಸ್ಸಾದರೂ ಸಹ ಯಂಗ್ ನಟಿಯರಂತೆ ಸ್ಲಿಮ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಯಂಗ್ ನಟಿಯರನ್ನೂ ಸಹ ಮೀರಿಸುವಂತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ನಯನತಾರಾ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳನ್ನು ನೋಡಿದರೇ ಆಕೆಗೆ 40 ವರ್ಷ ವಯಸ್ಸಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ. ಬ್ಲಾಕ್ ಕಲರ್‍ ಗ್ಲಾಮರಸ್ ಡ್ರೆಸ್ ನಲ್ಲಿ ಆಕೆ ಹಾಲಿವುಡ್ ಹಿರೋಯಿನ್ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ನೂ ನಯನತಾರಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ. ಆಕೆಯ ಪೊಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದರೇ, ಮತ್ತೆ ಕೆಲವರು ವಿಮರ್ಶೆ ಸಹ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ಆಕೆ ಜವಾನ್ ಎಂಬ ಸಿನೆಮಾದ ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟರು. ಬಾಲಿವುಡ್ ನಲ್ಲಿ ಆಕೆಯ ಮೊದಲನೇ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದ್ದು, ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿದೆ ಎನ್ನಲಾಗಿದೆ.