ಸ್ಟಾರ್ ನಟಿಯರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಶ್ರೀರೆಡ್ಡಿ, ಸಮಂತಾ ಏನು ಇಲ್ಲ, ತಮನ್ನಾಗೆ ಅದು ಚೆನ್ನಾಗಿರುತ್ತೆ ಎಂದ ನಟಿ…..!

ಟಾಲಿವುಡ್ ನ ವಿವಾದಾತ್ಮಕ ನಟಿ ಎಂದಲೇ ಕರೆಯುವ ಶ್ರೀರೆಡ್ಡಿ ಸದಾ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಅನೇಕ ಸೆಲೆಬ್ರೆಟಿಗಳ ಕುರಿತು ಮಾತನಾಡುತ್ತಿರುತ್ತಾರೆ. ಜೊತೆಗೆ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಂಡು ಆಕೆಯ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಿರುತ್ತಾರೆ. ಇದೀಗ ಸಮಂತಾ, ತಮನ್ನಾ ಸೇರಿದಂತೆ ಹಲವು ಸ್ಟಾರ್‍ ನಟಿಯರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ಸ್ ಚರ್ಚೆಗೆ ಕಾರಣವಾಗಿದೆ.

ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಮೂಲಕ ಸುದ್ದಿಯಾದ ನಟಿ ಶ್ರೀರೆಡ್ಡಿ. ಈಕೆ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಿನೆಮಾಗಳಲ್ಲಿ ನಟಿಸಿ ಸುದ್ದಿಯಾಗುವುದಕ್ಕಿಂತ ವಿವಾದಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸದಾ ತನಗೆ ಸಂಬಂಧವಿಲ್ಲದ ವಿಚಾರಗಳಲ್ಲೂ ತಲೆದೂರಿಸಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ನಟಿ ಶ್ರೀರೆಡ್ಡಿ ಎಂದರೇ ತಪ್ಪಾಗಲಾರದು. ಸಿನೆಮಾಗಳ ಜೊತೆಗೆ ಆಂಧ್ರದ ರಾಜಕೀಯದ ಬಗ್ಗೆ ಸಹ ಮಾತನಾಡುತ್ತಾ ಸದಾ ಒಂದಲ್ಲ ಒಂದು ವಿವಾದಕ್ಕೆ ಕಾರಣರಾಗುತ್ತಿರುತ್ತಾರೆ. ಸಾಮಾನ್ಯವಾಗಿ ಆಕೆಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಹಾಟ್ ಕಾಮೆಂಟ್ ಗಳನ್ನು ಮಾಡುತ್ತಾ ಆಕೆ ಸುದ್ದಿಯಾಗುತ್ತಿರುತ್ತಾರೆ.

ಇನ್ನೂ ಶ್ರೀರೆಡ್ಡಿ ಹೆಚ್ಚಾಗಿ ಮೆಗಾ ಕುಟುಂಬವನ್ನೇ ಟಾರ್ಗೆಟ್ ಮಾಡುತ್ತಾ ಇಷ್ಟಬಂದತೆ ಮಾತನಾಡುತ್ತಿರುತ್ತಾರೆ. ಅಸಭ್ಯಕರವಾದ ಮಾತುಗಳಿಂದ ಬೈಯುತ್ತಿರುತ್ತಾರೆ. ಆದರೆ ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಸ್ಟಾರ್‍ ನಟಿಯರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಿತ್ಯಾಮೆನನ್ ಇಷ್ಟೆ ಇರುತ್ತಾರೆ ಅಂದರೇ ಕುಳ್ಳಿ ಎಂಬ ಅರ್ಥದಲ್ಲಿ, ಸಮಂತಾ ದೇಹದ ಭಾಗಗಳು ವಾವ್ ಎಂದು ಟೆಂಪ್ಟ್ ಮಾಡುವಂತಿರೊಲ್ಲ, ತಮನ್ನಾ ಗೆ ಹೊಟ್ಟೆ ಒಂದು ಚೆನ್ನಾಗಿದೆ, ಆಕೆಯ ಮುಖ ನೋಡೋಕೆ ಆಗೊಲ್ಲ. ಅನುಷ್ಕಾ ಸಿನೆಮಾಗಳನ್ನು ಬಿಟ್ಟಿದ್ದಾರೆ. ಇನ್ನೂ ನಿಜಕ್ಕೂ ರಕುಲ್ ಪ್ರೀತ್ ಸಿಂಗ್ ಮುಖ ನೋಡುತ್ತಿದ್ದರೇ ಹುಡುಗಿ ಮುಖ ನೋಡುತ್ತಿದ್ದೇವಾ ಎಂಬ ಅನುಮಾನ ಬರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋಗೆ ಸಮಂತಾ, ತಮನ್ನಾ, ರಕುಲ್  ಅಭಿಮಾನಿಗಳಂತೂ ಶ್ರೀರೆಡ್ಡಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನನ್ನು ನೋಡ್ತಾ ಇದ್ದರೇ ಮನುಷ್ಯಳಂತೆ ಕಾಣುತ್ತಿಲ್ಲ, ನಿನ್ನ ಮುಖ ಒಮ್ಮೆ ನೋಡಿಕೋ ಎಂದೆಲ್ಲಾ ಕಾಮೆಂಟ್ ಗಳ ಮೂಲಕ ಅದರಲ್ಲೂ ಕೆಲವರಂತೂ ಅಸಭ್ಯಕರವಾದ ಮಾತುಗಳಿಂದಲೂ ಸಹ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.