ಮದುವೆಯಾಗಲಿದ್ದಾರಾ ವಿಜಯ್ ದೇವರಕೊಂಡ? ಹಾಟ್ ಟಾಪಿಕ್ ಆದ ಅವರ ಲೇಟೆಸ್ಟ್ ಪೋಸ್ಟ್……!

Follow Us :

ತೆಲುಗು ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಕರೆಯಲಾಗುವ ವಿಜಯ್ ದೇವರಕೊಂಡ ಲೈಗರ್‍ ಸಿನೆಮಾದ ಬಳಿಕ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಬರದಿಂದ ಸಾಗುತ್ತಿದೆ. ಈ ಸಿನೆಮಾದಲ್ಲಿ ವಿಜಯ್ ಜೊತೆಗೆ ಸಮಂತಾ ನಟಿಸಿದ್ದಾರೆ. ಇದೀಗ ವಿಜಯ್ ದೇವರಕೊಂಡ ಮದುವೆ ವಿಚಾರದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ ಹಂಚಿಕೊಂಡ ಲೇಟೆಸ್ಟ್ ಪೊಟೋ ಎನ್ನಲಾಗಿದೆ.

ನಟ ವಿಜಯ್ ದೇವರಕೊಂಡ ಸದ್ಯ ಸಿಂಗಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಸುಮಾರು ದಿನಗಳಿಂದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂಬ ರೂಮರ್‍ ಗಳು ಹರಿದಾಡುತ್ತಲೇ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ ಕೆಲವೊಂದು ಘಟನೆಗಳೂ ಸಹ ನಡೆದಿದೆ. ಇಬ್ಬರೂ ವೆಕೇಷನ್ ಗೆ ಹಾರಿದ್ದು, ರಶ್ಮಿಕಾ ವಿಜಯ್ ಬಗ್ಗೆ ಕೆಲವೊಂದು ಮೆಚ್ಚುಗೆ ಮಾತುಗಳನ್ನಾಡಿದ್ದು, ಬೇಬಿ ಸಿನೆಮಾದ ವೇಳೆ ರಶ್ಮಿಕಾ ವಿಜಯ್ ತಮ್ಮ ಆನಂದ್ ದೇವರಕೊಂಡ ಬಗ್ಗೆ ಮಾತನಾಡಿದ್ದು, ಬಳಿಕ ಡಿನ್ನರ್‍ ಗೆ ಹೋಗಿದ್ದು, ಹೀಗೆ ಕೆಲವೊಂದು ಸನ್ನಿವೇಶಗಳು ರಶ್ಮಿಕಾ ಹಾಗೂ ವಿಜಯ್ ನಡುವೆ ಸಮ್ ಥಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದೀಗ ವಿಜಯ್ ದೇವರಕೊಂಡ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಭಾರಿ ಚರ್ಚೆಗೆ ಕಾರಣವಾಗಿದೆ.

ನಿನ್ನೆಯಷ್ಟೆ ವಿಜಯ್ ದೇವರಕೊಂಡ ತನ್ನ ಇನ್ಸ್ಟಾಖಾತೆಯಲ್ಲಿ ಪೋಸ್ಟ್ ಒಂದನ್ನುಹಂಚಿಕೊಂಡಿದ್ದರು. ತನ್ನ ಇನ್ಸ್ಟಾ ಸ್ಟೋರಿಯಲ್ಲಿ ತುಂಬಾ ನಡೆಯುತ್ತಿರುತ್ತವೆ ಆದರೆ ಒಂದು ಮಾತ್ರ ತುಂಬಾನೆ ಸ್ಪೇಷಲ್ ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು. ಈ ಪೋಟೊದಲ್ಲಿ ವಿಜಯ್ ದೇವರಕೊಂಡ ಕೈಯಲ್ಲಿ ಒಬ್ಬ ಹುಡುಗಿಯ ಕೈಯಿರುತ್ತದೆ. ಇದರಿಂದ ವಿಜಯ್ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ. ಈ ಪೋಸ್ಟ್ ಗೆ ಅದೇ ಕಾರಣ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಇನ್ನೂ ಇದೇ ಸಮಯದಲ್ಲಿ ಇದೊಂದು ಸಿನೆಮಾದ ಪ್ರಚಾರದ ಗಿಮಿಕ್ ಅಷ್ಟೇ, ಸೆ.1 ರಂದು ಬಿಡುಗಡೆಯಾಗಲಿರುವ ಖುಷಿ ಸಿನೆಮಾದ ಪ್ರಮೋಷನ್ ನಿಮಿತ್ತ ವಿಜಯ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಇನ್ನೂ ಶಿವಾ ನಿರ್ವಾಣ ಸಾರಥ್ಯದಲ್ಲಿ ಖುಷಿ ಸಿನೆಮಾ ಲವ್ ಎಂಟರ್‍ ಟ್ರೈನರ್‍ ಆಗಿ ತೆರೆಕಾಣಲಿದೆ. ಈಗಾಗಲೇ ಈ ಸಿನೆಮಾದ ಕೆಲ ಹಾಡುಗಳು ಬಿಡುಗಡೆಯಾಗಿದ್ದು ಒಳ್ಳೆಯ ಸಕ್ಸಸ್ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಈವೆಂಟ್ ಒಂದರಲ್ಲಿ ಸಮಂತಾ ಹಾಗೂ ವಿಜಯ್ ಬೋಲ್ಡ್ ಆಗಿ ವೇದಿಕೆಯ ಮೇಲೆ ನೃತ್ಯ ಮಾಡಿದ್ದು ಹಲವು ವಿಮರ್ಶೆಗಳಿಗೆ ಸಹ ಕಾರಣವಾಯ್ತು. ಈ ಸಿನೆಮಾ ತೆಲುಗು ಜೊತೆಗೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲಿ ತೆರೆಕಾಣಲಿದೆ.