News

ಚಂದ್ರನ ಮೇಲೆ ಪತ್ತೆಯಾದ ಆಮ್ಲಜನಕ, ವಿಶ್ವಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಇಸ್ರೋ……!

ಭಾರತದ ಇಸ್ರೋ ವಿಜ್ಞಾನಿಗಳು ಇಡೀ ವಿಶ್ವವೇ ಮೆಚ್ಚುವಂತಹ ಕೆಲಸ ಮಾಡಿದೆ. ಚಂದ್ರಯಾನ-3 ಮಿಷನ್ ಯಶಸ್ವಿಗೊಳಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್ ನ ವಿಕ್ರಂ ಲ್ಯಾಂಡರ್‍ ಅನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವ ಮೂಲಕ ದೇಶದ ಹೆಗ್ಗಳಿಕೆಯನ್ನು ಇಡೀ ವಿಶ್ವದಾದ್ಯಂತ ಪಸರಿಸುವಂತೆ ಮಾಡಿತ್ತು. ಇದೀಗ ಇಸ್ರೋ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದು ಇಡೀ ವಿಶ್ವಕ್ಕೆ ಗುಡ್ ನ್ಯೂಸ್ ಎಂದು ಹೇಳಬಹುದಾಗಿದೆ.

ಚಂದ್ರಯಾನದ ರೋವರ್‍ ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿ ಕೆಲಸ ಶುರು ಮಾಡಿದೆ. ಚಂದ್ರ ಮೇಲೆ ಸಲ್ಫರ್‍ ಜೊತೆಗೆ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಮ್ಯಾಂಗನೀಸ್, ಸಿಲಿಕಾನ್, ಟೈಟಾನಿಯಂ ಹಾಗೂ ಆಮ್ಲಜನಕವನ್ನು ಪತ್ತೆ ಮಾಡಿದೆ. ಇದೀಗ ಹೈಡ್ರೋಜನ್ ಹುಡುಕಾಟ ಮುಂದುವರೆದಿದೆ ಎಂದು ಇಸ್ರೋ ತನ್ನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇನ್ನೂ ಚಂದ್ರನ ದಕ್ಷಿಣದ ಧ್ರುವದಲ್ಲಿ ಪ್ರತಿನಿತ್ಯ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ.

ಇನ್ನೂ ರೋವರ್‍ ನಲ್ಲಿರುವಂತಹ ಎಲ್.ಐ.ಬಿ.ಎಸ್ ಎಂಬ ಉಪಕರಣದ ಮೂಲಕ ಮೊದಲ ಬಾರಿಗೆ ಇನ್ ಸಿಟು ಮಾಪನಗಳು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈ ನಲ್ಲಿ ಸಲ್ಫರ್‍ ಇರುವುದನ್ನು ಸ್ಪಷ್ಟವಾಗಿ ಧೃಡೀಕರಿಸಿದೆ ಎಂದು ಇಸ್ರೋ ತಿಳಿಸಿದೆ.  ಇದೀಗ ಚಂದ್ರನ ಮೇಲೆ ಆಮ್ಲಜನಕ ಪತ್ತೆಯಾಗಿದ್ದು, ಇದೊಂದು ವಿಶ್ವಕ್ಕೆ ದೊಡ್ಡ ಗುಡ್ ನ್ಯೂಸ್ ಎಂದು ಹೇಳಬಹುದಾಗಿದೆ. ಇಲ್ಲಿಯವರೆಗೂ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಇಸ್ರೋ ಸೂರ್ಯನತ್ತ ಸಹ ನೌಕೆ ಕಳುಹಿಸುವಂತಹ ಕೆಲಸದಲ್ಲಿ ನಿರತರವಾಗಿದೆ.

Most Popular

To Top