ರಮ್ಯಾ ಔಟ್, ಐಶ್ವರ್ಯ ರಾಜೇಶ್ ಇನ್, ಉತ್ತರಕಾಂಡ ಸಿನೆಮಾದಲ್ಲಿ ಧನಂಜಯ್ ಗೆ ಜೋಡಿಯಾದ ತಮಿಳು ನಟಿ…..!

Follow Us :

ಕಾಲಿವುಡ್ ಸಿನಿರಂಗದ ಬಹುಬೇಡಿಕೆ ನಟಿ ಐಶ್ವರ್ಯ ರಾಜೇಶ್ ಸಾಲು ಸಾಲು ತಮಿಳು ಸಿನೆಮಾಗಳ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ವಿಭಿನ್ನವಾದ ಸಿನೆಮಾಗಳ ಮೂಲಕ ತಮ್ಮದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ತಮಿಳಿನಲ್ಲಿ 8 ಸಿನೆಮಾಗಳಲ್ಲಿ ನಟಿಸುತ್ತಿರುವ ಈಕೆ ಇದೀಗ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸ್ಟಾರ್‍ ನಟ ಡಾಲಿ ಧನಂಜಯ್ ನಟಿಸುತ್ತಿರುವ ಉತ್ತರಕಾಂಡ ಸಿನೆಮಾದಲ್ಲಿ ಮೋಹಕತಾರೆ ರಮ್ಯಾ ಬದಲಿಗೆ ನಟಿ ಐಶ್ವರ್ಯ ರಾಜೇಶ್ ಎಂಟ್ರಿ ಕೊಡಲಿದ್ದಾರೆ.

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನೆಮಾಗಳಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ರವರ ಉತ್ತರಕಾಂಡ ಸಿನೆಮಾ ಸಹ ಒಂದಾಗಿದೆ. ಈಗಾಗಲೇ ಈ ಸಿನೆಮಾ ಭಾರಿ ನಿರೀಕ್ಷೆ ಮೂಡಿಸಿದೆ. ಈ ಮೊದಲು ಈ ಸಿನೆಮಾದಲ್ಲಿ ನಾಯಕಿಯಾಗಿ ರಮ್ಯಾ ಸಹಿ ಮಾಡಿದ್ದರು. ಕೆಲವೊಂದು ಕಾರಣಗಳಿಂದ ಈ ಸಿನೆಮಾದಿಂದ ಹೊರಬರುವುದಾಗಿ ರಮ್ಯಾ ಹೇಳಿದ್ದರು. ರಮ್ಯಾ ಹೊರಬಂದ ಕಾರಣದಿಂದ ಆಕೆಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಾನ ತುಂಬೋದು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ಈ ಸಿನೆಮಾದಲ್ಲಿ ರಮ್ಯಾ ಸ್ಥಾನ ಕಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ಐಶ್ವರ್ಯ ರಾಜೇಶ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ.

ಉತ್ತರಕಾಂಡ ಸಿನೆಮಾದಲ್ಲಿ ಡಾಲಿ ಧನಂಜಯ್ ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರು ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟ ಶಿವರಾಜ್ ಕುಮಾರ್‍ ರವರಿಗೆ ಜೋಡಿಯಾಗಿ ಭಾವನ ಮೆನನ್ ನಟಿಸಲಿದ್ದಾರೆ. ಧನಂಜಯ್ ಗೆ ಐಶ್ವರ್ಯ ರಾಜೇಶ್ ಜೋಡಿಯಾಗಲಿದ್ದಾರೆ. ಈ ಸಂಬಂಧ ಚಿತ್ರತಂಡ ಪೋಸ್ಟರ್‍ ಒಂದನ್ನು ಸಹ ಚಿತ್ರತಂಡ ರಿಲೀಸ್ ಮಾಡಿದ್ದಾರೆ. ಈ ಸಿನೆಮಾದಲ್ಲಿ ಐಶ್ವರ್ಯ ದುರ್ಗಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಡಾಲಿ ಜೊತೆಗೆ ಸೆಲ್ಫಿ ಒಂದನ್ನು ಸಹ ಐಶ್ವರ್ಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಡಾಲಿ ಹಾಗೂ ಐಶ್ವರ್ಯ ಜೋಡಿ ತುಂಬಾ ಚೆನ್ನಾಗಿದೆ ಎಂಬ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಉತ್ತರಕಾಂಡ ಸಿನೆಮಾದ ಶೂಟಿಂಗ್ ವಿಜಯಪುರದಲ್ಲಿ ನಡೆಯುತ್ತಿದೆ. ಈ ಸಿನೆಮಾ ಆಕ್ಷನ್ ಡ್ರಾಮಾ ಸಿನೆಮಾ ಆಗಿದ್ದು, ನಿರ್ದೇಶಕ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ರವರು ಕೆ.ಆರ್‍.ಜಿ ಸ್ಟುಡಿಯೋಸ್ ಬ್ಯಾನರ್‍ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ಹೇಳಲಾಗುತ್ತಿದೆ.