News

ಪ್ರತಿಷ್ಠಿತ ಶೋ ನಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಡಿವೋರ್ಸ್ ಸುದ್ದಿ ಹೊರಬರುತ್ತಾ?

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಿನೆಮಾ ಸೆಲೆಬ್ರೆಟಿಗಳಂತೆ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ರನ್ನು ಮದುವೆಯಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಸಾನಿಯಾ ಮಿರ್ಜಾ ರವರಿಂದ ವಿಚ್ಚೇದನ ಪಡೆದ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಎಂಬಾಕೆಯೊಂದಿಗೆ ಮದುವೆಯಾಗಿದ್ದರು. ಇನ್ನೂ ಸಾನಿಯಾ ಮಿರ್ಜಾ ಖ್ಯಾತ ಕಿರುತೆರೆ ಕಾಮಿಡಿ ಶೋ  ದಿ ಕಪಿಲ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಂಬಂಧ ಪೊಟೋ ಒಂದನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಶೋ ನಲ್ಲಿ ಆಕೆ ಡಿವೋರ್ಸ್ ಬಗ್ಗೆ ಮಾತನಾಡುತ್ತಾರ ಎಂಬ ಕುತೂಹಲ ಮೂಡಿದೆ.

ಕಳೆದ 2010 ರಲ್ಲಿ ಸಾನಿಯಾ ಹಾಗೂ ಶೋಯೆಬ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಸಹ ಭಾರಿ ವಿವಾದಕ್ಕೆ ಸಹ ಕಾರಣವಾಗಿತ್ತು. ಬಳಿಕ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಅವರಿಬ್ಬರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಸಹ ಜೋರಾಗಿತ್ತು. ಇದೀಗ ಶೋಯೆಬ್ ಪಾಕ್ ನಟಿ ಸನಾ ಜಾವೇದ್ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೇದ್ ಕಳೆದ 2020 ರಲ್ಲಿ ಉಮೈರ್‍ ಜಸ್ವಾಲ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಈ ದಂಪತಿ ವಿಚ್ಚೇದನ ಪಡೆದುಕೊಂಡರು. ಪಾಕ್ ಕ್ರಿಕೆಟಿಗ್ ಶೋಯೆಬ್ ಸಹ ಸಾನಿಯಾ ಮಿರ್ಜಾ ರವರನ್ನು ಬಿಟ್ಟು ಸನಾ ಜಾವೇದ್ ರನ್ನು ಮೂರನೇ ಮದುವೆಯಾಗಿದ್ದಾರೆ.

ಸದ್ಯ ಸಾನಿಯಾ ಮಿರ್ಜಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಸಾನಿಯಾ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಖ್ಯಾತ ಕಾಮಿಡಿ ಶೋ ದಿ ಕಪಿಲ್ ಶೋ ನಲ್ಲಿ ಆಕೆ ಭಾಗಿಯಾಗಲಿದ್ದಾರೆ. ಈ ಸಂಬಂಧ ಆಕೆ ಪೊಟೋ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋ ವೈರಲ್ ಆಗುತ್ತಿದ್ದಂತೆ. ಈ ಶೋನಲ್ಲಿ ಸಾನಿಯಾ ಮಿರ್ಜಾ ತಮ್ಮ ವಿಚ್ಚೇದನದ ಬಗ್ಗೆ ಮಾತನಾಡುತ್ತಾರಾ ಎಂಬ ಕುತೂಹಲ ಅನೇಕರಿಗೆ ಮೂಡಿದೆ. ಶೀಘ್ರದಲ್ಲೇ ಈ ಶೋ ಪ್ರಸಾರವಾಗಲಿದ್ದು, ಯಾವ ರೀತಿಯಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top