Film News

ವೈರೆಟಿ ಲುಕ್ಸ್ ಮೂಲಕ ಅಭಿಮಾನಿಗಳ ನಿದ್ದೆ ಕದ್ದ ಧಮಕಾ ಬ್ಯೂಟಿ, ಕ್ರೇಜಿ ಬ್ಯೂಟಿ ಶ್ರೀಲೀಲಾ ಮಾದಕ ನೋಟಕ್ಕೆ ಫಿದಾ ಆದ ಫ್ಯಾನ್ಸ್……!

ಕನ್ನಡ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿ ಶ್ರೀಲೀಲಾ, ಟಾಲಿವುಡ್ ನಲ್ಲಿ ಕ್ರೇಜಿ ಬ್ಯೂಟಿಯಾಗಿ ಸ್ಟಾರ್‍ ನಟಿಯರಿಗೂ ಪೈಪೋಟಿ ಕೊಡುತ್ತಾ ಮುನ್ನುಗ್ಗುತ್ತಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಶ್ರೀಲೀಲಾ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸಕ್ಸಸ್ ಸಾಧಿಸಿದರು. ಅದೇ ರೀತಿಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಂಡರು. ಆದರೂ ಸಹ ಆಕೆಯ ಕ್ರೇಜ್ ಕಡಿಮೆಯಾಗಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆಕೆ ವಿಭಿನ್ನ ನೋಟ ಬೀರುವಮತ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಕ್ರೇಜಿ ಬ್ಯೂಟಿ ಶ್ರೀಲೀಲಾ ಪೆಳ್ಳಿ ಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಆದರೆ ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೂ ಸಹ ಆಕೆಯ ಅಭಿನಯಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಾದರು. ಬಳಿಕ ಆಕೆ ಧಮಾಕ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಮಾಸ್ ಮಹಾರಾಜ ರವಿತೇಜ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡ ಈಕೆ ಈ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆಯ ಡ್ಯಾನ್ಸ್, ಅಭಿನಯ, ಬ್ಯೂಟಿ ಎಲ್ಲವೂ ನೆಕ್ಸ್ಟ್ ಲೆವೆಲ್ ಎಂದೇ ಹೇಳಲಾಗಿತ್ತು. ತೆಲುಗಿನಲ್ಲಿ ಆಕೆ ಬೆಸ್ಟ್ ಫಿಮೇಲ್ ಡ್ಯಾನ್ಸರ್‍ ಗಳಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ರಷ್ಮಿಕಾ, ಪೂಜಾ ಹೆಗ್ಡೆ ರಂತಹ ಅನೇಕ ಸ್ಟಾರ್‍ ಗಳಿಗೆ ಗಟ್ಟಿಯಾದ ಪೈಪೋಟಿಯನ್ನೆ ನೀಡುತ್ತಿದ್ದಾರೆ. ಆದರೆ ಇತ್ತೀಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ.

ಇನ್ನೂ ನಟಿ ಶ್ರೀಲೀಲಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಕೆಲವೊಂದು ಪೊಟೋಗಳನ್ನು ತನ್ನ ಇನ್ಸ್ಟಾಗ್ರಾಂ  ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನವಾಗಿರುವ ಕೆಲವೊಂದು ಪೊಟೋಗಳನ್ನು ಆಕೆ ಶೇರ್‍ ಮಾಡಿದ್ದಾರೆ. ವೈಟ್ ಡ್ರೆಸ್ ನಲ್ಲಿ ಆಕೆ ಕೊಂಚ ಆಂಗ್ರಿ ಲುಕ್ಸ್ ಕೊಟ್ಟಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ನಿಮ್ಮ ಮನಸ್ಸು ಸುಲಭವಾಗಿರುವಾಗ ನೀವು ಹಾರಬಲ್ಲರು ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಧಮಾಕಾ ಸಿನೆಮಾದ ಬಳಿಕ ಆಕೆಗೆ ಅಷ್ಟರ ಮಟ್ಟಿಗೆ ಸಕ್ಸಸ್ ತಂದುಕೊಡುವ ಸಿನೆಮಾ ಬರಲಿಲ್ಲ ಎಂದೇ ಹೇಳಬಹುದು. ಸ್ಕಂದ, ಆದಿಕೇಶವ, ಎಕ್ಸ್ಟಾ ಆರ್ಡಿನರಿ ಮ್ಯಾನ್ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಕೊನೆಯದಾಗಿ ಆಕೆ ಗುಂಟೂರು ಖಾರಂ ಸಿನೆಮಾದಲ್ಲಿ ಶ್ರೀಲೀಲಾ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ಎನರ್ಜಿಟಿಕ್ ಡ್ಯಾನ್ಸ್ ಗೆ ಮಹೇಶ್ ಬಾಬು ರವರೇ ಫಿದಾ ಆಗಿದ್ದರು. ಆದರೆ ಈ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಲಾಗುತ್ತಿದೆ.

Most Popular

To Top