ಇಡೀ ಹೈ ಕಮ್ಯಾಂಡ್ ಬಂದರೂ ಸುಧಾಕರ್ ರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತೋಕೆ ಬಿಡೊಲ್ಲ ಎಂದ ಪ್ರದೀಪ್ ಈಶ್ವರ್…..!

Follow Us :

ಬಿಜೆಪಿ ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್‍ ರವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಮಾತನಾಡಿದ್ದಾರೆ. ಬಿಜೆಪಿ ಹೈಕಮ್ಯಾಂಡ್ ಬಂದರೂ ಸುಧಾಕರ್‍ ರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತೋಕೆ ನಾವು ಬಿಡೊಲ್ಲ ಎಂದು ಕೌಂಟರ್‍ ಕೊಟ್ಟಿದ್ದಾರೆ.

ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್‍, ಬಿಜೆಪಿ ಬಿಡುಗಡೆ ಮಾಡಿದ ಲೀಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಅಂತ್ಯ ಆಗುವುದಕ್ಕೆ ಮುನ್ನುಡಿ ಎಂದು ನನಗೆ ಅನಿಸಿದೆ. ಕೋವಿಡ್ ನಲ್ಲಿ ಎರಡು 2,200 ಕೋಟಿ ಹಗರಣದ ಕುರಿತು ನಮ್ಮ ಕಾಂಗ್ರೇಸ್ ಸರ್ಕಾರ ಆರೋಪ ಮಾಡಿತ್ತು. ಅವರ ಪಕ್ಷದ ನಾಯಕರಾದ ಯತ್ನಾಳ್ ರವರೇ 40 ಸಾವಿರ ಕೋಟಿ ಆರೋಪ ಮಾಡಿದರು. ಆದರೆ ಅಂತಹ ವ್ಯಕ್ತಿಗೆ ಹೇಗೆ ಟಿಕೆಟ್ ಸಿಕ್ತು. ಕೆಲವೇ ಮಂದಿ ಬಿಜೆಪಿ ನಾಯಕರಿಗೆ ಸುಧಾಕರ್‍ ಸಹಾಯ ಮಾಡಿದ್ದಾರೆ. ಯಾವ ತರಹದ ಸಹಾಯ ಅಂದರೇ, ಸೂರ್ಯ ನಮಸ್ಕಾರ, ಕಪಾಲಿ ಬಾತ್ ಶವಾಸನ, ದೀರ್ಘ ದಂಡ ನಮಸ್ಕಾರ ಮಾಡಿಸಿದ್ದಾರೆ. ಅದರಿಂದಲೇ ಬಹುಶಃ ಅವರಿಗೆ ಟಿಕೆಟ್ ಸಿಕ್ಕಿರಬಹುದು ಎಂದು ಲೇವಡಿ ಮಾಡಿದ್ದಾರೆ.

ನನ್ನ ಎಲ್ಲಾ ಆದಾಯದ ದಾಖಲೆಗಳನ್ನು ನಾನು ಬಹಿರಂಗ ಪಡಿಸೋಕೆ ರೆಡಿ, ಅದೇ ಸುಧಾಕರ್‍ ಪ್ರಮಾಣಿಕರಾಗಿದ್ದರೇ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ದರಿದ್ದಾರೆಯೇ? ಪಾರ್ಲಿಮೆಂಟ್ ಪವಿತ್ರವಾದ ಜಾಗ ಆದರೆ ಹುಕ್ ಆರ್‍ ಕ್ರುಕ್ ಸುಧಾಕರ್‍ ರವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ನಾವು ಬಿಡೊಲ್ಲ. ಬೇಕಿದ್ದರೇ ಇಡೀ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ಪ್ರಚಾರ ಮಾಡಲಿ ನಾವಂತೂ ಅವರನ್ನು ಪಾರ್ಲಿಮೆಂಟ್ ಗೆ ಹೋಗಲು ಬಿಡೊಲ್ಲ ಎಂದು ಸವಾಲು ಹಾಕಿದ್ದಾರೆ. ಅಷ್ಟೇಅಲ್ಲದೇ ಸುಧಾಕರ್‍ ಒಂದು ತರಹ ವಿಚಿತ್ರವಾದ ರಾಜಕಾರಣಿ. ಅವರು ನನ್ನನ್ನು ಬಿಡೋದು ಏನು, ನಾನೇ ಅವರನ್ನು ಬಿಡೊಲ್ಲ. ಅವರು ಬಂದರೇ ಕಾನೂನು ಸುವ್ಯಸ್ಥೆ ಹದೆಗೆಡುತ್ತದೆ. ಅವರ ಅಹಂಕಾರ ಅವರ ನಾಯಕರಿಗೆ ಇಷ್ಟವಾಗೊಲ್ಲ. ಕ್ರಷರ್‍ ಮಾಲೀಕರಿಂದ ಕಿಕ್ ಬ್ಯಾಕ್, ಮೆಡಿಕಲ್ ಕಾಲೇಜು ಹೀಗೇ ಅನೇಕ ಆರೋಪಗಳು ಅವರ ಮೇಲಿದೆ.

ಯಾವುದೋ ಸೆಲಬ್ರೆಟಿಯನ್ನು ಕರೆಸಿ ವೋಟು ಕೇಳಿದರೇ ಜನರು ವೋಟು ಹಾಕುತ್ತಾರಾ. ಅಂತಹ ಕಾಲ ಹೋಯ್ತು. ಕೋವಿಡ್ ತನಿಖೆಯಿಂದ ನೀವು ತಪ್ಪಿಸಿಕೊಳ್ಳಲು ಯಾರ ಕಾಲ ಮೇಲೆ ಬಿಳ್ತಾ ಇದ್ದೀರಾ ಗೊತ್ತಿಲ್ವಾ, ಕೋವಿಡ್ ತನಿಖೆ ಯಿಂದ ಕಾಪಾಡಿ ಕಾಪಾಡಿ ಎಂದು ನೀವು ಹೇಗೆ ಕಾಲಿಗೆ ಬಿದ್ದಿದ್ದೀರಾ ಗೊತ್ತಿಲ್ಲ ಅಂದುಕೊಂಡಿದ್ದೀರಾ. ಸುಧಾಕರ್‍ ಕಾಂಗ್ರೇಸ್ ಗೆ ಥ್ರೆಟ್ ಅಲ್ಲ, ಅವರು ಬಿಜೆಪಿ ಟ್ರೆಟ್. ಸುಧಾಕರ್‍ ಪ್ರಮಾಣಿಕರಾದರೇ ಭೋಗ ನಂದೀರ್ಶವರ ದೇವಾಸ್ಥಾನದಲ್ಲಿ ಪ್ರಮಾಣ ಮಾಡಲಿ ನೋಡೋಣ ಎಂದು ವಾಗ್ದಾಳಿ ನಡೆಸಿದರು.