ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ಮುಖ ಕಚ್ಚಿದ ಸೈಕೋ, ವೈರಲ್ ಆದ ಆಘಾತಕಾರಿ ವಿಡಿಯೋ….!

Follow Us :

ರಸ್ತೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿರುವಾಗ ಸೈಕೋ ವ್ಯಕ್ತಿಯೋರ್ವ ಆಕೆಗೆ ಕಿರುಕುಳ ನೀಡಿ, ಆಕೆಯ ಮುಖವನ್ನು ಕಚ್ಚಿ ಓಡಿ ಹೋಗಿದ್ದಾನೆ. ಈ ಘಟನೆ ಬಾಂಗ್ಲಾದೇಶದ ದಿನಾಜ್ ಪುರ ಎಂಬಲ್ಲಿ ನಡೆದಿದ್ದು, ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಘಟನೆ ಕಳೆದ ಮಾ.17 ರಂದು ಭಾನುವಾರ ಬೆಳಿಗ್ಗೆ 8.41 ರ ಸಮಯದಲ್ಲಿ ನಡೆದಿದೆ ಎಂದು ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ. ಸೈಕೋ ವ್ಯಕ್ತಿಯೊಬ್ಬ ಶಾಲಾ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಈ ಭಯಾನಕ ದೃಶ್ಯ ಅಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಭಾರಿ ಆಕ್ರೋಷಕ್ಕೆ ಗುರಿಯಾಗಿದೆ. ಅನೇಕರು ಆ ಸೈಕೋ ವ್ಯಕ್ತಿಯನ್ನು ಬಂಧಿಸಿ ಕಾನೂನಿನಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ದೊಡ್ಡ ಮಟ್ಟದಲ್ಲಿ ಆಕ್ರೋಷ ಹೊರಹಾಕಲಾಗಿತ್ತು. ಈ ನಡುವೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಓರ್ವ ಶಾಲಾ ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾಳೆ. ಆಕೆಯ ಹಿಂದೆ ಓರ್ವ ಸೈಕೋ ಮೆಲ್ಲಗೆ ಹಿಂಬಾಲಿಸಿಕೊಂಡು ಬಂದಿದ್ದಾನೆ. ಆದರೆ ಆ ಸೈಕೋ ಬರುತ್ತಿದ್ದ ಬಗ್ಗೆ ಆಕೆಗೆ ಅರಿವು ಇರುವುದಿಲ್ಲ. ಬಳಿಕ ಇದ್ದಕ್ಕಿದ್ದಂತೆ ಬಾಲಕಿಯನ್ನು ಅಡ್ಡಗಟ್ಟಿದ ಸೈಕೋ ಆಕೆಯ ಮುಖವನ್ನು ಕಚ್ಚುತ್ತಾನೆ. ಹುಡುಗಿ ಭಯದಿಂದ ಜೋರಾಗಿ ಕಿರುಚಾಡಿದಾಗ ಸೈಕೋ ವ್ಯಕ್ತಿ ಅಲ್ಲಿಂದ ಪರಾರಿಯಾಗುತ್ತಾನೆ. ಬಳಿಕ ಸಾರ್ವಜನಿಕರು ಆತನನ್ನು ಹಿಡಿದು ಚೆನ್ನಾಗಿ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟೆಲೇ ವೀಕ್ಷಣೆ ಪಡೆದಿದೆ.