ಅನಾಥ ಮಕ್ಕಳನ್ನು ದತ್ತು ಪಡೆದ ಕ್ರೇಜಿ ಬ್ಯೂಟಿ ಶ್ರೀಲೀಲಾ, ಅಭಿಮಾನಿಗಳು, ನೆಟ್ಟಿಗರಿಂದ ಪ್ರಶಂಸೆ……!

Follow Us :

ಕನ್ನಡ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡು ಸದ್ಯ ಸೌತ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸ್ಟಾರ್‍ ನಟಿಯರಿಗೂ ಪೈಪೋಟಿ ನೀಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಕಿಸ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಸದ್ಯ ಟಾಲಿವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿ ಭಾರಿ ಸಂಭಾವನೆ ಸಹ ಪಡೆಯುತ್ತಿದ್ದಾರೆ.

ತೆಲುಗು ಸಿನಿರಂಗಕ್ಕೆ ನಟಿ ಶ್ರೀಲೀಲಾ ಸುನಾಮಿಯಂತೆ ಎಂಟ್ರಿ ಕೊಟ್ಟರು ಎಂದೇ ಹೇಳಬಹುದು. ಎಂಟ್ರಿ ಕೊಟ್ಟ ಮೊದಲ ಸಿನೆಮಾ ಫ್ಲಾಪ್ ಆದರೂ ಸಹ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜಿ ನಟಿಯಾಗಿದರು. ಜೊತೆಗೆ ಅನೇಕರ ನಟಿಯರಿಗೆ ಬಂದಂತಹ ಅವಕಾಶಗಳನ್ನು ಸಹ ಆಕೆ ತನ್ನ ತೆಕ್ಕೆಗೆ ಹಾಕಿಕೊಂಡರು ಎಂದೂ ಸಹ ಹೇಳಲಾಗುತ್ತಿದೆ. ಮೊದಲಿಗೆ ಒಳ್ಳೆಯ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ. ಸಿನೆಮಾಗಳ ಜತೆಗೆ ಆಕೆ ಮೆಡಿಕಲ್ ಸಹ ಓದುತ್ತಿದ್ದು, ಓದಿನ ಕಾರಣದಿಂದ ಆಅಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಮಾಡಿದ ಕೆಲಸದ ಕಾರಣದಿಂದ ಆಕೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ನಟಿ ಶ್ರೀಲೀಲಾ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ದತ್ತು ಪಡೆದುಕೊಂಡ ಇಬ್ಬರೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಆಕೆಯೆ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಶ್ರೀಲೀಲಾ ತೆಗೆದುಕೊಂಡ ಈ ಒಳ್ಳೆಯ ನಿರ್ಧಾರವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ನೀವು ರೀಲ್ ಸಿನೆಮಾದ ನಾಯಕಿಯಲ್ಲ. ರಿಯಲ್ ಸಿನೆಮಾ ನಾಯಕಿ ಎಂದು ಪ್ರಶಂಸೆ ಮಾಡುತ್ತಿದ್ದಾರೆ. ಇನ್ನೂ ನಟಿ ಶ್ರೀಲೀಲಾ ಸಿನೆಮಾಗಳಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ಕೊನೆಯದಾಗಿ ಆಕೆ ಗುಂಟೂರು ಖಾರಂ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ಆಕೆಯ ನೃತ್ಯಕ್ಕೆ ಸ್ಟಾರ್‍ ನಟ ಮಹೇಶ್ ಬಾಬು ರವರೇ ಫಿದಾ ಆಗಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ.

ಇನ್ನೂ ಶ್ರೀಲೀಲಾ ಕ್ರೇಜ್ ಇದೀಗ ಜೋರಾಗಿದೆ ಎನ್ನಬಹುದಾಗಿದೆ. ಸಿನೆಮಾಗೆ ಆಕೆ ಇಲ್ಲಿಯವರೆಗೂ ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಇದೀಗ ಆಕೆ ಮುಂದಿನ ಸಿನೆಮಾಗಳಿಗಾಗಿ ಮೂರು ಕೋಟಿಯವರೆಗೂ ಪಡೆದುಕೊಳ್ಳುತ್ತಿದ್ದಾರಂತೆ. ಜೊತೆಗೆ ಆಕೆ ಯಾವುದಾದರೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೇ ಗಂಟೆಗೆ 10 ರಿಂದ 12 ಲಕ್ಷ ಪಡೆಯುತ್ತಾರಂತೆ. ಸದ್ಯ ಸೌತ್ ನಲ್ಲಿ ಸ್ಟಾರ್‍ ನಟಿಯರಿಗೆ ದೊಡ್ಡ ಪೈಪೋಟಿಯನ್ನೇ ನೀಡುತ್ತಿದ್ದಾರೆ ಎನ್ನಬಹುದಾಗಿದೆ.