Film News

ಅಂತೂ ಇಂತೂ ಪ್ರಗೆನ್ಸಿ ಅನೌನ್ಸ್ ಮಾಡಿದ ದೀಪಿಕಾ ಪಡುಕೋಣೆ, ವೈರಲ್ ಆದ ಪೋಸ್ಟ್…..!

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಮದುವೆಯಾದರೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಬೋಲ್ಡ್ ದೃಶ್ಯಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಜೋರಾಗಿ ಕೇಳಿಬರುತ್ತಿತ್ತು. ಇದೀಗ ಆಕೆ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ತಮ್ಮ ಮೊದಲ ಮಗುವಿನ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ವಯಸ್ಸಾಗುತ್ತಿದ್ದರೂ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಜೊತೆಗೆ ಕಲ್ಕಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೆ ತೆರೆಕಾಣಲಿದೆ. ಸದ್ಯ ಆಕೆ ಬಾಲಿವುಡ್ ನಲ್ಲಿ ಸಿಂಗಂ ರಿಟರ್ನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮದುವೆಯಾದ ಬಳಿಕವೂ ಸಹ ದೀಪಿಕಾ ಬೋಲ್ಡ್ ಪಾತ್ರಗಳಲ್ಲೂ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ದೀಪಿಕಾ ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಇದೀಗ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿದ್ದಾರೆ. ಮದುವೆಯಾಗಿ ವರ್ಷಗಳು ಕಳೆದರೂ ಸಹ ಮಗುವನ್ನು ಪಡೆದುಕೊಂಡಿರಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಆಕೆಯೆ ಹೊಟ್ಟೆ ದಪ್ಪ ಕಾಣಿಸಿದ ಹಿನ್ನೆಲೆಯಲ್ಲಿ ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ತುಂಬಾನೆ ವೈರಲ್ ಆಗಿತ್ತು. ಇದೀಗ ದೀಪಿಕಾ ಈ ರೂಮರ್‍ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ನಟಿ ದೀಪಿಕಾ ಪಡುಕೋಣೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪುಟಾಣಿ ಬಟ್ಟೆಗಳಿಂದ ಡಿಸೈನ್ ಮಾಡಿದ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ನಲ್ಲಿ ತಮ್ಮ ಮೊದಲ ಮಗುವಿನ ಬಗ್ಗೆ ತಿಳಿಸಿದ್ದಾರೆ. ಸೆಪ್ಟೆಂಬರ್‍ ಮಾಹೆಯಲ್ಲಿ ತಮ್ಮ ಮೊದಲ ಮಗು ಈ ಪ್ರಪಂಚಕ್ಕೆ ಕಾಲಿಡಲಿದೆ ಎಂದು ಹೇಳಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ಅಂತೂ ಇಂತೂ ತಮ್ಮ ಗರ್ಭಿಣಿಯಾಗಿರುವ ರೂಮರ್‍ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೂ ನಟಿ ದೀಪಿಕಾ ಹಾಗೂ ರಣವೀರ್‍ ಸಿಂಗ್ ಪ್ರೀತಿಸಿ ಮದುವೆಯಾದರು. ಕಳೆದ 2018 ರಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿದ್ದು, ಮದುವೆಯಾದ ಆರು ವರ್ಷಗಳ ಬಳಿಕ ಈ ಜೋಡಿ ತಂದೆ ತಾಯಿಯಾಗುತ್ತಿದ್ದಾರೆ.

Most Popular

To Top