ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ, ಇದು ಟ್ರೈಲರ್ ಮಾತ್ರ ಎಂದ ಸಂಸದ ಪ್ರತಾಪ್ ಸಿಂಹ…..!

Follow Us :

ಕಳೆದೆರಡು ದಿನಗಳ ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಈ ಕುರಿತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಡುವೆ ವಾಗ್ದಾಳಿ ಸಹ ನಡೆಯುತ್ತಿದೆ. ಅನೇಕರು ಈ ಕುರಿತು ಆಕ್ರೋಷ ಸಹ ಹೊರಹಾಕುತ್ತಿದ್ದಾರೆ. ಇದೀಗ ಈ ಕುರಿತು ರಿಯಾಕ್ಟ್ ಆಗಿರುವ ಸಂಸದ ಪ್ರತಾಪ್ ಸಿಂಹ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಟ್ರೈಲರ್‍ ಮಾತ್ರ ಮುಂದಿನ ದಿನಗಳಲ್ಲಿ ಮತಷ್ಟು ನಡೆಯಲಿದೆ ಎಂದು ಕಿಡಿಕಾರಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೆ ರಾಜ್ಯಸಭಾ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸೈಯದ್ ನಾಸೀರ್‍ ಹುಸೇನ್ ಬೆಂಬಲಿಗರು ಆತನಿಗೆ ಜಯಘೋಷಗಳನ್ನು ಕೂಗುತ್ತಿದ್ದರು. ಈ ವೇಳೆ ಅವರ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಈ ಕುರಿತು ರಾಜ್ಯದಾಧ್ಯಂತ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ಕುರಿತು ಬಿಜೆಪಿ ನಾಯಕರು ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿ ನಡೆಯುತ್ತಿದ್ದ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಪಾಕಿಸ್ತಾನದ ಪರ ಟ್ರೈಲರ್‍ ಕೂಗಿರೋದು ಕೇವಲ ಟ್ರೈಲರ್‍ ಅಷ್ಟೆ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತೆ ಎಂದಿದ್ದಾರೆ.

ಇನ್ನೂ ಕಾಂಗ್ರೇಸ್ ಗೆ ಮತ ಚಲಾಯಿಸಿದರೇ ತಾಲಿಬಾನ್ ಸರ್ಕಾರ ಬರುತ್ತದೆ ಎಂದು ನಾನು ವಿಧಾನಸಭಾ ಚುನಾವಣಾ ಸಮಯದಲ್ಲೇ ಹೇಳಿದ್ದೆ. ಕನ್ನಡಿಗರ ಸರ್ಕಾರ ಬರೊಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಗಿರುತ್ತೆ ಎಂದು ಹೇಳಿದ್ದೆ. ಇದೀಗ ನನ್ನ ಮಾತು ನಿಜವಾಗಿದೆ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗಲಿದೆ. ಅದರ ಮೇಲೆ ಒಂದು ಲೌಡ್ ಸ್ಪೀಕರ್‍ ಬಂದು ಅಜಾನ್ ಸಹ ಕೇಳುತ್ತದೆ. ಕಾಂಗ್ರೇಸ್ ಸರ್ಕಾರ ಮುಂದುವರೆದರೇ ತಾಲಿಬಾನ್ ಸರ್ಕಾರ ಮಾಡುವಂತಹ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಕುಟುಕಿದ್ದಾರೆ.