ಕುಡಿದ ಅಮಲಿನಲ್ಲಿ ಮಾಂಸ ಹೊರಬರುವಂತೆ ಪತ್ನಿಯ ಕಣ್ಣು-ಕೆನ್ನೆ ಕಚ್ಚಿದ ಪತಿ….!

Follow Us :

ಕುಡಿತದ ಅಮಲಿನಲ್ಲಿ ಇಲ್ಲದ ರಾದ್ದಾಂತಗಳು, ಗಲಾಟೆಗಳು, ಹಲ್ಲೆಗಳು ನಡೆಯುತ್ತಿರುತ್ತವೆ. ಅದೇ ಮಾದರಿಯಲ್ಲಿ ಇಲ್ಲೊಬ್ಬ ವ್ಯಕ್ತಿ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಮತ್ತಿನಲ್ಲಿ ಆತ ತನ್ನ ಪತ್ನಿಯ ಕಣ್ಣು ಹಾಗೂ ಕೆನ್ನೆಯನ್ನು ಕಚ್ಚಿದ್ದಾನೆ. ಅದರಲ್ಲೂ ಮಾಂಸ ಹೊರಬರುವಂತೆ ಕಚ್ಚಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧನ ಮಾಡಲಾಗಿದೆ.

ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಂಠಪೂರ್ತಿ ಕುಡಿದ ಸುರೇಶ್ ಗೌಡ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಮಿತಿಮೀರಿ ಸುರೇಶ್ ತನ್ನ ಪತ್ನಿಯ ಕಣ್ಣು ಹಾಗೂ ಕೆನ್ನೆಗೆ ಕಚ್ಚಿ ಮಾಂಸ ಹೊರತೆಗೆದಿದ್ದಾನೆ. ನಂತರ ಕೋಲಿನಿಂದ ಪತ್ನಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿಯ ಎಡ ಕಣ್ಣಿಗೆ ಹಾನಿಯಾಗಿದೆ. ಇದೇ ಸಮಯದಲ್ಲಿ ತಾಯಿಯನ್ನು ಕಾಪಾಡಲು ಹೋದಂತಹ ಮಗಳ ತಲೆಗೆ ಹಾಗೂ ಕಣ್ಣಿಗೂ ಸುರೇಶ್ ಹೊಡಿದಿದ್ದಾನೆ.

ಇನ್ನೂ ಕೂಡಲೇ ಮಗಳು ತಂದೆಯಿಂದ ತಪ್ಪಿಸಿಕೊಂಡು ಹೊರಗೆ ಓಡಿ ಒಂದು ಅಕ್ಕಪಕ್ಕದವರಿಗೆ ಮಾಹಿತಿ ತಿಳಿಸಿದ್ದಾಳೆ. ಆರೋಪಿಯ ಪತ್ನಿ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಪ್ರಜ್ಞಾಹೀನ ಸ್ಥೀತಿಗೆ ತಲುಪಿದ್ದಾಳೆ ಎನ್ನಲಾಗಿದೆ. ಸುದ್ದಿ ತಿಳಿದ ನೆರೆಹೊರೆಯವರು ಧಾವಿಸುತ್ತಿದ್ದಂತೆ ಸುರೇಶ್ ಗೌಡ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ಗಾಯಗೊಂಡ ತಾಯಿ-ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.