ಶ್ರುತಿ ಹಾಸನ್ ಕೇಳಿದ ಪ್ರಶ್ನೆಗೆ ಶಾಕ್ ಆದ ಪ್ರಭಾಸ್, ಕೂಲ್ ಆಗಿಯೇ ಉತ್ತರ ಕೊಟ್ಟ ರೆಬೆಲ್ ಸ್ಟಾರ್…….!

Follow Us :

ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ಇತ್ತೀಚಿಗಷ್ಟೆ ಸಲಾರ್‍ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಪ್ರಭಾಸ್ ಅಭಿನಯದ ಸಿನೆಮಾ ಹಿಟ್ ಆದರೂ ಪ್ಲಾಪ್ ಆದರೂ ಸಹ ಆತನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಬಹುದಾಗಿದೆ. ಪ್ರಭಾಸ್ ಹೆಚ್ಚಾಗಿ ಡಾರ್ಲಿಂಗ್ ಎಂಬ ಪದವನ್ನು ಹೆಚ್ಚು ಬಳಸುತ್ತಾರೆ. ಅವರನ್ನ ಸಹ ಅಭಿಮಾನಿಗಳು ಸೇರಿದಂತೆ ಅನೇಕರು ಡಾಲಿಂಗ್ ಪ್ರಭಾಸ್ ಎಂದೇ ಕರೆಯುತ್ತಾರೆ. ಇದೀಗ ನಟಿ ಶ್ರುತಿ ಹಾಸನ್ ಪ್ರಬಾಸ್ ರವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ಶಾಕ್ ಆದ ಪ್ರಭಾಸ್ ಬಳಿಕ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ.

ಟಾಲಿವುಡ್ ರೆಬೆಲ್ ಸ್ಟಾರ್‍ ಪ್ರಭಾಸ್ ರವರ ಮೂರು ಸಿನೆಮಾಗಳು ಬ್ಯಾಕ್ ಟು ಬ್ಯಾಕ್ ಪ್ಲಾಪ್ ಆಯ್ತು. ಈ ಕಾರಣದಿಂದ ಅವರ ಅಭಿಮಾನಿಗಳೂ ಸಹ ನಿರಾಸೆಯಾಗಿದ್ದರು. ನಿರಾಸೆಯಾಗಿದ್ದ ಅಭಿಮಾನಿಗಳಿಗೆ ಸಲಾರ್‍ ಸಿನೆಮಾ ಮತ್ತೆ ಕ್ರೇಜ್ ತಂದುಕೊಟ್ಟಿತ್ತು. ಸ್ಯಾಂಡಲ್ ವುಡ್ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ರವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಲಾರ್‍ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದೆ. ಸುಮಾರು 700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಸಲಾರ್‍ ತಂಡ ಇತ್ತೀಚಿಗಷ್ಟೆ ಸಕ್ಸಸ್ ಸೆಲೆಬ್ರೇಷನ್ ಆಚರಿಸಿಕೊಂಡರು. ಈ ಸೆಲೆಬ್ರೇಷನ್ ನಲ್ಲಿ ಪ್ರಭಾಸ್ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಆತನ ಲುಕ್ಸ್ ನೋಡಿ ಫಿದಾ ಆಗಿದ್ದರು.

ಇನ್ನೂ ಸಲಾರ್‍ ಸಿನೆಮಾ ಸಕ್ಸಸ್ ಪಾರ್ಟಿಯ ನಿಮಿತ್ತ ಸಂದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಭಾಸ್ ಗೆ ನಟಿ ಶ್ರುತಿ ಹಾಸನ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮನ್ನು ರೆಬೆಲ್ ಸ್ಟಾರ್‍ ಎಂದು ಏಕೆ ಕರೆಯುತ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಶ್ರುತಿ ಹಾಸನ್ ಪ್ರಶ್ನೆಗೆ ಆತ ಶಾಕ್ ಆಗಿದ್ದಾರೆ. ಬಳಿಕ ಕೂಲ್ ಆಗಿ ಉತ್ತರ ನೀಡಿದ್ದು, ನಮ್ಮ ದೊಡ್ಡಪ್ಪ ರೆಬೆಲ್ ಸ್ಟಾರ್‍ ಆದ್ದರಿಂದ ನನ್ನನ್ನೂ ಸಹ ರೆಬೆಲ್ ಸ್ಟಾರ್‍ ಎಂದೇ ಕರೆಯುತ್ತಾರೆ ಎಂದಿದ್ದಾರೆ. ಬಳಿಕ ನಾನು ಪ್ರಭಾಸ್ ರವರನ್ನು ಭೇಟಿಯಾದ ವಾರದಲ್ಲೇ ಆತನನ್ನು ಡಾರ್ಲಿಂಗ್ ಎಂದು ಏಕೆ ಕರೆಯುತ್ತಾರೆ ಎಂಬುದು ತಿಳಿದುಬಂತು ಎಂದು ಹೇಳಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರಿಬ್ಬರ ಕಾಂಬಿನೇಷನ್ ನಲ್ಲಿ ಮತಷ್ಟು ಸಿನೆಮಾಗಳು ಬಂದರೇ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಸಲಾರ್‍-1 ಸಿನೆಮಾದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಕಾಂಬಿನೇಷನ್ ಚೆನ್ನಾಗಿಯೇ ವರ್ಕೌಟ್ ಆಗಿದೆ ಎನ್ನಬಹುದು. ಇದೀಗ ಸಲಾರ್‍-2 ರಲ್ಲೂ ಅವರಿಬ್ಬರ ಅಭಿನಯ ಮತಷ್ಟು ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಊಹೆ ಮಾಡಿಕೊಳ್ಳುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನಲಾಗಿದ್ದು, ಮುಂದಿನ ವರ್ಷ ಈ ಸಿನೆಮಾ ತೆರೆಕಾಣಲಿದೆ. ಇನ್ನೂ ಪ್ರಭಾಸ್ ಶೀಘ್ರದಲ್ಲೇ ಕಲ್ಕಿ ಎಂಬ ಪ್ಯಾನ್ ವರ್ಲ್ಡ್ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಜೊತೆಗೆ  ರಾಜಾ ಸಾಬ್, ಸ್ಪಿರಿಟ್ ಎಂಬ ಸಿನೆಮಾಗಳ ಶೂಟಿಂಗ್ ಸಹ ಆರಂಭವಾಗಲಿದೆ.