ಸ್ನೇಹಿತೆಯ ಮಕ್ಕಳೊಂದಿಗೆ ಖುಷಿಯಾಗಿ ಕಾಣಿಸಿಕೊಂಡ ಸಮಂತಾ, ವೈರಲ್ ಆದ ವಿಡಿಯೋ…..!

ಸ್ಟಾರ್‍ ನಟಿ ಸಮಂತಾ ಸದ್ಯ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ದೂರವಾಗಿ ವೈಯುಕ್ತಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ವೆಕೇಷನ್ ನಲ್ಲಿ ಆಕೆ ಸಖತ್ ಎಂಜಾಯ್ ಮಾಡಿದ್ದರು. ಜೊತೆಗೆ…

ಸ್ಟಾರ್‍ ನಟಿ ಸಮಂತಾ ಸದ್ಯ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ದೂರವಾಗಿ ವೈಯುಕ್ತಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ವೆಕೇಷನ್ ನಲ್ಲಿ ಆಕೆ ಸಖತ್ ಎಂಜಾಯ್ ಮಾಡಿದ್ದರು. ಜೊತೆಗೆ ಕೆಲವೊಂದು ಆಧ್ಯಾತ್ಮಿಕ ಪ್ರದೇಶಗಳಿಗೂ ಸಹ ಭೇಟಿ ನೀಡಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಹೆಚ್ಚಾಗಿ ಪ್ರಾಕೃತಿಕ ಪ್ರದೇಶಗಳಲ್ಲಿ ವಿಹರಿಸುತ್ತಾ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುತ್ತಿದ್ದಾರೆ. ಇದೀಗ ಆಕೆ ತನ್ನ ಸ್ನೇಹಿತೆ ಗಾಯಕಿ ಚಿನ್ಮಯಿ ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಳೆದೆರಡು ವರ್ಷಗಳಿಂದ ಸಮಂತಾ ತುಂಬಾನೆ ಸುದ್ದಿಯಲ್ಲಿದ್ದಾರೆ. ಆಕೆ ಸಿನೆಮಾಗಳಿಂದ ಮಾತ್ರವಲ್ಲದೇ ಹೆಚ್ಚಾಗಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ, ಬಳಿಕ ಸಿನೆಮಾಗಳು, ಬಳಿಕ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾದರು. ಈ ಎಲ್ಲಾ ಕಾರಣಗಳಿಂದ ಆಕೆ ಭಾರಿ ಸುದ್ದಿಯಾದರು. ಆಕೆಗೆ ಸಂಬಂಧಿಸಿದ ವಿಚಾರಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದವು. ಇದೀಗ ಸಮಂತಾ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಇಂಡೋನೇಷಿಯಾದಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದರು. ಅಲ್ಲಿನ ಪೊಟೋಗಳು ವಿಡಿಯೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಆಕೆ ವಾಪಸ್ಸಾಗಿದ್ದು, ತನ್ನ ಸ್ನೇಹಿತೆ ಚಿನ್ಮಯಿ ಮಕ್ಕಳೊಂದಿಗೆ ಖುಷಿಯಾಗಿ ಆಟವಾಡುತ್ತಾ ಕಾಣಿಸಿಕೊಂಡಿದ್ದಾರೆ.

ಹಿನ್ನೆಲೆ ಗಾಯಕಿ ಚಿನ್ಮಯಿ ಹಾಗೂ ರಾಹುಲ್ ರವಿಂದ್ರನ್ ದಂಪತಿಯ ಮಕ್ಕಳಾದ ಶೆರಾವಸ್ ಹಾಗೂ ದರಿಪ್ತಾ ರೊಂದಿಗೆ ಸಮಂತಾ ಖುಷಿಯಿಂದ ಆಟವಾಡಿದ್ದಾರೆ. ಅವರೊಂದಿಗೆ RRR ಸಿನೆಮಾದ ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಾ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಆಟವಾಡುತ್ತಾ ಆಕೆ ತುಂಬಾ ಸಂತೋಷವಾಗಿ ಸಮಯ ಕಳೆದಿದ್ದಾರೆ. ಇನ್ನೂ ಆಕೆಯನ್ನು ನೋಡಿದ ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ. ಆಕೆಯ ತುಂಟಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಸಮಂತಾ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸಮಂತಾ ಕೆರಿಯರ್‍ ವಿಚಾರಕ್ಕೆ ಬಂದರೇ ಸಮಂತಾ ವಿಜಯದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ಹಾಗೂ ವರುಣ್ ಧಾವನ್ ಜೊತೆಗೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಎರಡೂ ಪ್ರಾಜೆಕ್ಟ್ ಗಳ ಶೂಟಿಂಗ್ ಮುಗಿಸಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆಕೆ ಕೊನೆಯದಾಗಿ ಶಾಕುಂತಲಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿ ಉಳಿದಿದೆ.