ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದು, ದುಬೈಗೆ ಹಾರಿದ ರಾಕಿಭಾಯ್ ಯಶ್..!

Follow Us :

ಕೆಜಿಎಫ್ ಸಿನೆಮಾದ ಮೂಲಕ ಇಡೀ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡ ರಾಕಿಂಗ್ ಸ್ಟಾರ್‍ ಯಶ್ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದು ದುಬೈಗೆ ಹಾರಿದ್ದಾರೆ. ಜನವರಿ 8 ರಂದು ರಾಕಿಂಗ್ ಸ್ಟಾರ್‍ ಯಶ್ ರವರ ಹುಟ್ಟುಹಬ್ಬವಾಗಿದೆ. ಈ ಹಿಂದೆ ಕೋವಿಡ್, ಪುನೀತ್ ರಾಜ್ ಕುಮಾರ್‍ ನಿಧನದ ಕಾರಣದಿಂದ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ಯಶ್ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ಎಂದು ಕೊಂಡಿದ್ದರು. ಆದರೆ ಯಶ್ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದು ದುಬೈಗೆ ಹಾರಿದ್ದಾರೆ. ಈ ಕಾರಣದಿಂದ ಯಶ್ ಅಭಿಮಾನಿಗಳು ನಿರಾಸೆಯಾಗಿದ್ದಾರೆ.

ನಟ ಯಶ್, ಆತನ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳೊಂದಿಗೆ ದುಬೈಗೆ ಹಾರಿದ್ದಾರೆ. ಅಲ್ಲೇ ನಾಲ್ಕು ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಇನ್ನೂ ಯಶ್ ತಮ್ಮ ಹುಟ್ಟುಹಬ್ಬವನ್ನು ದುಬೈನ ಪ್ರತಿಷ್ಟಿತ ಹೋಟೆಲ್ ನಲ್ಲೇ ಆಚರಿಸಕೊಳ್ಳಲಾಗಿದೆ. ಜ.8 ರಂದು ಬೆಂಗಳೂರಿನಿಂದಲೂ ಯಶ್ ಆಪ್ತರು ಹಾಗೂ ಸ್ನೇಹಿತರು ಸಹ ಈ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಈ ಬಾರಿಯ ಹುಟ್ಟುಹಬ್ಬಕ್ಕೆ ಯಶ್ ಹೊಸ ಸಿನೆಮಾದ ಬಗ್ಗೆ ಘೋಷಣೆಯಾಗಬಹುದು ಎಂದು ಅಭಿಮಾನಿಗಳು ಖುಷಿಯಲ್ಲಿದ್ದರು. ಆದರೆ ಈ ವಿಚಾರದಲ್ಲೂ ಸಹ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ದುಬೈ ಪ್ರವಾಸದಿಂದ ಬಂದ ಮೇಲೆ ಯಶ್ ತಮ್ಮ ಮುಂದಿನ ಸಿನೆಮಾದ ಬಗ್ಗೆ ಸುದ್ದಿ ಹೊರಬರಬಹುದು ಎನ್ನಲಾಗಿದೆ.

ಇನ್ನೂ ಯಶ್ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಅಭಮಾನಿಗಳನ್ನು ಉದ್ದೇಶಿಸಿ ಬಹಿರಂಗ ಪತ್ರವನ್ನು ಹಂಚಿಕೊಂಡಿದ್ದಾರೆ. ಯಶ್ ಹಂಚಿಕೊಂಡ ಪತ್ರದಲ್ಲಿರುವಂತೆ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರಗಳನ್ನು ತಿಳಿಸುತ್ತಾ ಪತ್ರವನ್ನು ಶುರು ಮಾಡಿದ್ದಾರೆ. ನಿಮ್ಮ ನಿಶ್ಕಲ್ಮಶವಾದ ಪ್ರೀತಿ, ಸಾಟಿಯಿಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೂ ಗೊತ್ತಿದೆ ನೀವು ಕಾಯುತ್ತಿದ್ದೀರಾ ಅಂತಾ, ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೂ ಅನ್ನಿಸಿದೆ. ಇತ್ತೀಚಿಗೆ ನೀವು ನನ್ನ ಹುಟ್ಟುಹಬ್ಬವನ್ನು ನಿಮ್ಮ ಹುಟ್ಟುಹಬ್ಬದಂತೆ ಆಚರಿಸಕೊಂಡು ಬಂದಿದ್ದೀರಿ. ಈ ಕಾರಣದಿಂದಲೇ ಈ ಬಾರಿ ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದೆ. ಆದರೆ ನಿಮ್ಮ ಮುಂದೆ ನಿಲ್ಲಲ್ಲು ನನಗೆ ಇನ್ನೂ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರುವುದನ್ನು ನಿಮ್ಮ ಮುಂದೆ ತರಲು ತುಂಬಾ ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ದೊಡ್ಡ ಬಹುಮಾನ. ಕ್ಷಮಿಸಿ ಈ ವರ್ಷದ ಹುಟ್ಟುಹಬ್ಬಕ್ಕೆ ನಾನು ನಿಮ್ಮೊಂದಿಗೆ ಇರಲು ಆಗುತ್ತಿಲ್ಲ. ಆದಷ್ಟು ಬೇಗ ನಿಮಗೆ ಸಿಗುತ್ತೇನೆ, ಇಂತಿ ನಿಮ್ಮ ಪ್ರೀತಿಯ ಯಶ್  ಎಂದು ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಇನ್ನೂ ಯಶ್ ಕೆಜಿಎಫ್ ಸಿನೆಮಾದ ಬಳಿಕ ಅವರ ಮುಂದಿನ ಸಿನೆಮಾಗಾಗಿ ಅವರ ಡೈ ಹಾರ್ಡ್ ಫ್ಯಾನ್ ತುಂಬಾನೆ ಕಾಯುತ್ತಿದ್ದಾರೆ. ಇನೂ ಯಶ್ ಬರೆದುಕೊಂಡಿರುವ ಪತ್ರದಲ್ಲಿ ಕೆಲವೇ ದಿನಗಳಲ್ಲಿ ವಿಭಿನ್ನವಾಗಿ ಬರಲಿದ್ದೇನೆ ಎಂದು ಹೇಳಿದ್ದು, ಅಭಿಮಾನಿಗಳಲ್ಲಿ ಮತಷ್ಟು ಕುತೂಹಲ ಮೂಡಿಸಿದೆ.