Film News

ರಜನಿಕಾಂತ್ ಜೊತೆಗೆ ಸಿನೆಮಾ ಮಾಡಿದ ಬಳಿಕ ನನಗೆ ಆಫರ್ ಗಳು ಬರಲಿಲ್ಲ ಎಂದ ನಟಿ….!

ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ರವರಿಗೆ ಇಡೀ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೇವಲ ಸಿನೆಮಾ ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸಿನೆಮಾ ಸ್ಟಾರ್‍ ಗಳೂ ಸಹ ಅವರಿಗೆ ಅಭಿಮಾನಿಗಳಾಗಿದ್ದಾರೆ. ಇನ್ನೂ ಅವರೊಂದಿಗೆ ನಟಿಸಲು ಅನೇಕ ನಟಿಯರು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಆದರೆ ನಟಿಯೊಬ್ಬರು ರಜನಿಕಾಂತ್ ರವರೊಂದಿಗೆ ಆ ಸಿನೆಮಾ ಮಾಡಿದ ಕಾರಣದಿಂದ ನನಗೆ ಅವಕಾಶಗಳು ಬರಲಿಲ್ಲ ಎಂದು ಹೇಳಿಕೆಗಳನ್ನು ನೀಡಿದ್ದಾರೆ.

ರಜನಿಕಾಂತ್ ರವರ ಕೆರಿಯರ್‍ ನಲ್ಲಿ ತುಂಬಾ ನೆನಪಿನಲ್ಲಿರುವಂತಹ ಸಿನೆಮಾಗಳಲ್ಲಿ ಬಾಬಾ ಸಿನೆಮಾ ಒಂದು ಎನ್ನಬಹುದಾಗಿದೆ. ರಜನಿಕಾಂತ್ ರವರಿಗೂ ಸಹ ಈ ಸಿನೆಮಾ ಅಂದರೇ ತುಂಬಾನೆ ಇಷ್ಟ ಎಂದೂ ಸಹ ಹೇಳಬಹುದಾಗಿದೆ. ಅನೇಕ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಸಹ ಬಾಬಾ ಸಿನೆಮಾ ನನಗೆ ತುಂಬಾ ಪ್ರತ್ಯೇಕ ಎಂದು ಹೇಳಿದ್ದರು. ಇನ್ನೂ ಈ ಸಿನೆಮಾದಲ್ಲಿ ರಜನಿಕಾಂತ್ ರವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ನಟಿಸಿದ್ದರು. ಅದಕ್ಕೂ ಮುಂಚೆ ಆಕೆ ಇಂಡಿಯನ್, ಬಾಂಬೆ, ಆಲವಂದನ್ ಮೊದಲಾದ ಸೌತ್ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳೂ ಆಕೆಗೆ ಒಳ್ಳೆಯ ಹಿಟ್ ಸಹ ನೀಡಿತ್ತು. ಆದರೆ ಬಾಬಾ ಸಿನೆಮಾದ ಬಳಿಕ ಆಕೆಗೆ ಸೌತ್ ನಲ್ಲಿ ಅವಕಾಶಗಳು ಬರಲಿಲ್ಲವಂತೆ. ಈ ವಿಚಾರವನ್ನು ಆಕೆ ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮನಿಷಾ ಕೊಯಿರಾಲಾ ಮಾತನಾಡುತಾ, ಬಾಬಾ ಸಿನೆಮಾದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಸೌತ್ ನಲ್ಲಿ ಬಾಬಾ ನನ್ನ ಕೊನೆಯ ಸಿನೆಮಾ. ಅಂದಿನ ದಿನಗಳಲ್ಲಿ ಬಾಬಾ ಸಿನೆಮಾ ಫ್ಲಾಪ್ ಸಿನೆಮಾ ಆಗಿತ್ತು. ಭಾರಿ ನಿರೀಕ್ಷೆಯಿಂದ ಬಾಬಾ ಸಿನೆಮಾ ತೆರೆಗೆ ಬಂತು. ಆದರೆ ಈ ಸಿನೆಮಾ ಭಾರಿ ಸೋಲನ್ನು ಕಂಡಿತ್ತು. ಅಂದೆ ಸೌತ್ ನಲ್ಲಿ ನನ್ನ ಕೆರಿಯರ್‍ ಮುಗಿಯುತ್ತೆ ಎಂದುಕೊಂಡೆ. ಕೊನೆಗೆ ನಾನು ಊಹಿಸಿದ್ದೆ ನಡೆಯಿತು. ಬಾಬಾ ಸಿನೆಮಾದ ಬಳಿಕ ನನಗೆ ಅವಕಾಶಗಳು ಕಡಿಮೆಯಾದವು. ಸಿನೆಮಾ ಮೊದಲಿಗೆ ಫ್ಲಾಪ್ ಆಯಿತು. ಬಳಿಕ ರೀ ರಿಲೀಸ್ ಮಾಡಿದ ಬಳಿಕ ಸೂಪರ್‍ ಹಿಟ್ ಆಯಿತು ಎಂದು ಹೇಳಿದ್ದಾರೆ.

ಇದೇ ವೇಳೆ ಬಾಂಬೆ ಸಿನೆಮಾದ ಬಗ್ಗೆ ಸಹ ಆಕೆ ಮಾತನಾಡಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿಸಿದರೇ ನನ್ನ ಕೆರಿಯರ್‍ ವೀಕ್ ಆಗುತ್ತದೆ ಎಂದು ಎಲ್ಲರೂ ಎಚ್ಚರಿಕೆ ನೀಡಿದ್ದರು.  ಆದರೆ ಬಾಂಬೆ ಸಿನೆಮಾದ ನಿರ್ದೇಶಕ ಮಣಿರತ್ನಂ ಸೇರಿದಂತೆ ಚಿತ್ರತಂಡದ ಅನೇಕರು ನನ್ನ ಮನವೊಲಿಸಿದರು. ಬಳಿಕ ನಾನು ಸಿನೆಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಈ ಸಿನೆಮಾ ಮಾಡಿದ್ದಕ್ಕಾಗಿ ನನಗೆ ತುಂಬಾ ಸಂತೋಷ ಆಗಿದೆ ಎಂದು ಮನಿಷಾ ಹೇಳಿದ್ದಾರೆ.

Most Popular

To Top