Film News

ಉರ್ಫಿ ಜಾವೆದ್ ಫ್ಯಾಷನ್ ಮೆಚ್ಚಿದ ಬಾಲಿವುಡ್ ಸ್ಟಾರ್ ನಟಿ, ಉರ್ಫಿ ತುಂಬಾ ಬ್ರೇವ್ ಗರ್ಲ್ ಎಂದ ನಟಿ…!

ಬಟ್ಟೆ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ನಟಿಯರಲ್ಲಿ ಬಾಲಿವುಡ್ ನ ಉರ್ಫಿ ಜಾವೆದ್ ಮೊದಲಿಗರು ಎನ್ನಬಹುದಾಗಿದೆ. ಆಕೆ ಚಿತ್ರ ವಿಚಿತ್ರವಾದ ಡ್ರೆಸ್ ಗಳ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತಾರೆ. ಆಕೆಯ ಪೊಟೋಗಳನ್ನು ನೋಡಿದ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆ ಟ್ರೋಲ್ ಗಳಿಗೂ ಸಹ ಹಿಂದೆಸರಿಯದ ಉರ್ಫಿ ವಿಚಿತ್ರ ಕಾಸ್ಟ್ಯೂಮ್ ಮೂಲಕವೇ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಆಕೆಯ ಫ್ಯಾಷನ್ ಸೆನ್ಸ್ ಅನ್ನು ಬಾಲಿವುಡ್ ಸ್ಟಾರ್‍ ನಟಿಯೊಬ್ಬರು ಮನಸಾರೆ ಮೆಚ್ಚಿ ಉರ್ಫಿಯನ್ನು ಹೊಗಳಿದ್ದಾರೆ. ಅಷ್ಟಕ್ಕೂ ಉರ್ಫಿಯನ್ನು ಹೊಗಳಿದ ಆ ಸ್ಟಾರ್‍ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ರಂಗದ ಗ್ಲಾಮರಸ್ ಬ್ಯೂಟಿಯರಲ್ಲಿ ಒಬ್ಬರಾದ ಕರೀನಾ ಕಪೂರ್‍ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಮದುವೆಯಾದರೂ ಸಹ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕರೀನಾ ಉರ್ಫಿ ಜಾವೇದ್ ಡ್ರೆಸ್ಸಿಂಗ್ ಶೈಲಿಗೆ ಫಿದಾ ಆಗಿರುವುದಾಗಿ ಹೇಳಿದ್ದಾರೆ.  ಕರೀನಾ ಕಪೂರ್‍ ರವರಿಗೆ ಉರ್ಫಿಯ ಡ್ರೆಸ್ ಗಳ ಬಗ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಕರೀನಾ ಉರ್ಫಿಯನ್ನು ಮೆಚ್ಚಿಕೊಂಡಿದ್ದಾರೆ. ಉರ್ಫಿ ಆತ್ಮವಿಶ್ವಾಸವನ್ನು ನಾನು ಮೆಚ್ಚುತ್ತೇನೆ. ಉರ್ಫಿ ಹೊಗಳಿಕೆ ತುಂಬಾ ಅರ್ಹರಾಗಿದ್ದಾಳೆ. ಆಕೆ ತುಂಬಾ ಕೂಲ್ ಹಾಗೂ ಅನನ್ಯ ಆಗಿದ್ದಾಳೆ. ಆಕೆ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಳೆಯೋ ಅದನ್ನು ಮಾಡುವ ಧೈರ್ಯಶಾಲಿಯೆಂದು ಕರೀನಾ ಹೇಳಿದ್ದಾರೆ.

ಇಂದಿನ ಕಾಲ ಫ್ಯಾಷನ್ ಕಾಲ. ನಾವು ಪ್ರಶಾಂತಾವಾಗಿದ್ದಾಗ ಮಾತ್ರ ನಾವು ಏನು ಎಂಬುದನ್ನು ತೋರಿಸಬಹುದು, ಅದರಲ್ಲೂ ಆತ್ಮ ವಿಶ್ವಾಸ ಎಂಬುದು ತುಂಭಾ ಮುಖ್ಯ. ಆತ್ಮಸ್ಥೈರ್ಯ ತುಂಬಾ ಇಷ್ಟ. ನಾನೂ ಸಹ ಆತ್ಮಸ್ಥೈರ್ಯ ಹೊಂದಿದ್ದೇನೆ. ಈ ಕಾರಣದಿಂದ ಹೆಚ್ಚು ಆತ್ಮ ವಿಶ್ವಾಸ ಹೊಂದಿರುವ ಉರ್ಫಿಯನ್ನು ನಾನು ಪ್ರಶಂಸೆ ಮಾಡುತ್ತೇನೆ. ಆಕೆಗೆ ತುಂಬಾ ಧನ್ಯವಾದಗಳು ಎಂದು ಕರೀನಾ ಉರ್ಫಿಯನ್ನು ಮನಸಾರೆ ಹೊಗಳಿದ್ದಾರೆ. ಇನ್ನೂ ಉರ್ಫಿ ಸಹ ಆಕೆಯ ಕಾಮೆಂಟ್ ಗಳನ್ನು ಕೇಳಿ ಪುಲ್ ಖುಷಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಕರೀನಾ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಉರ್ಫಿ ಜಾವೇದ್ ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡರು. ಸುಮಾರು ಕಾಲದಿಂದ ಉರ್ಫಿ ವಿವಿಧ ಹಾಗೂ ಚಿತ್ರ ವಿಚಿತ್ರವಾದ ಡ್ರೆಸ್ ಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ಆಕೆಯ ಪೊಟೊಗಳು ಹಾಗೂ ವಿಡಿಯೋಗಳಿಗೆ ದೊಡ್ಡ ಮಟ್ಟದಲ್ಲೇ ಟ್ರೋಲ್ ಸಹ ಮಾಡಲಾಗುತ್ತಿರುತ್ತದೆ. ಆದರೆ ಆಕೆ ಮಾತ್ರ ಟ್ರೋಲರ್‍ ಗಳಿಗೆ ಕಿವಿಗೊಡದೆ ತಾನು ತನ್ನ ಕೆಲಸ ಎಂದು ಮತಷ್ಟು ವಿಚಿತ್ರ ಬಟ್ಟೆಗಳ ಮೂಲಕ ಸದ್ದು ಮಾಡುತ್ತಾರೆ. ಆಕೆ ಬಣ್ಣದ ಲೋಕದಿಂದ ಖ್ಯಾತಿ ಪಡೆದುಕೊಂಡದ್ದಕ್ಕಿಂತ ವಿಚಿತ್ರ ಫ್ಯಾಷನ್ ನಿಂದಲೇ ಹೆಚ್ಚು ಫೇಮಸ್ ಆಗಿದ್ದಾರೆ ಎಂದರೇ ತಪ್ಪಾಗಲಾರದು.

Most Popular

To Top