Film News

ಕರಿನಾ ಕಪೂರ್ ಮಗನನ್ನೂ ಫಿದಾ ಮಾಡಿದ ನಾಟು ನಾಟು ಹಾಡು, ಆ ಹಾಡು ಕೇಳದಿದ್ದರೇ ಅವನು ಊಟ ಸಹ ಮಾಡಲ್ಲವಂತೆ…!

ಕೆಲವು ದಿನಗಳ ಹಿಂದೆಯಷ್ಟೆ RRR ಸಿನೆಮಾದ ನಾಟು ನಾಟು ಹಾಡು ಆಸ್ಕಾರ್‍ ಅವಾರ್ಡ್ ಪಡೆದುಕೊಂಡಿದೆ. ಇದೀಗ ಭಾರತದ ಗೌರವ ಎಂದು ಅನೇಕರು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡಿಗೆ ಕೇವಲ ಚಿಕ್ಕಮಕ್ಕಳು ಮಾತ್ರವಲ್ಲದೇ ಹಿರಿಯರೂ ಸಹ ಕುಣಿದಿದ್ದಾರೆ. ಅದರಲ್ಲೂ ಆಸ್ಕಾರ್‍ ಅವಾರ್ಡ್ ಬಂದ ಮೇಲಂತೂ ಈ ಹಾಡು ಗ್ಲೋಬಲ್ ಲೆವೆಲ್ ನಲ್ಲಿ ಖ್ಯಾತಿ ಸಹ ಪಡೆದುಕೊಂಡಿದೆ. ಜೊತೆಗೆ ವಿರಾಟ್ ಕೊಹ್ಲಿ ಸಹ ಗ್ರೌಂಡ್ ನಲ್ಲಿ ಈ ಹಾದಿಗೆ ಸ್ಟೆಪ್ಸ್ ಹಾಕಿದ್ದರು. ಇದೀಗ ಬಾಲಿವುಡ್ ಸ್ಟಾರ್‍ ನಟಿ ಕರಿನಾ ಕಪೂರ್‍ ಸಹ ಈ ಹಾಡಿನ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಟಾಲಿವುಡ್ ಸ್ಟಾರ್‍ ಡೈರೆಕ್ಟರ್‍ ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ RRR ಸಿನೆಮಾ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರಿ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದ ನಾಟು ನಾಟು ಹಾಡು ಆಸ್ಕಾರ್‍ ಅವಾರ್ಡ್ ಪಡೆದುಕೊಂಡಿದೆ. ಈ ಹಿಂದೆ ಚಿಕ್ಕಮಕ್ಕಳು ಊಟ ಮಾಡದೇ ಇದ್ದರೇ ಚಂದ್ರನ ಬಗ್ಗೆ ಹಾಡನ್ನು ಹೇಳುತ್ತಾ ತಿನ್ನಿಸುತ್ತಿದ್ದ ಸಂದರ್ಭಗಳಿವೆ. ಇದೀಗ ಸಿನೆಮಾದ ಹಾಡುಗಳನ್ನು ಹೇಳುವ ಮೂಲಕ ಮಕ್ಕಳಿಗೆ ಊಟ ಮಾಡಿಸಲಾಗುತ್ತಿದೆ. ನಾಟು ನಾಟು ಹಾಡನ್ನು ಹಾಕಿ ಮಕ್ಕಳಿಗೆ ಊಟ ಮಾಡಿಸುವ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ. ಈ ಹಾಡನ್ನು ಹಾಕದೇ ಇದ್ದರೇ ಮಗು ಊಟ ಸಹ ಮಾಡುವುದಿಲ್ಲವಂತೆ. ಈ ಘಟನೆ ನಡೆಯುವುದು ಬೇರೆ ಎಲ್ಲೂ ಅಲ್ಲ. ಬಾಲಿವುಡ್ ಸ್ಟಾರ್‍ ನಟಿ ಕರಿನಾ ಕಪೂರ್‍ ಮನೆಯಲ್ಲಿ ಎಂದರೇ ನಿಮಗೆ ಆಶ್ಚರ್ಯ ಎನ್ನಿಸಬಹುದು. ಆದರೆ ಇದು ಸತ್ಯ.

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ಎರಡು ವರ್ಷದ ಮಗ ಜಂಹಗೀರ್‍ ನಾಟು ನಾಟು ಹಾಡನ್ನು ತುಂಬಾ ಮೆಚ್ಚಿಕೊಂಡಿದ್ದಾನೆ. ದಿನಕ್ಕೆ ಎಷ್ಟು ಬಾರಿಯಾದರೂ ಈ ಹಾಡುಗಳನ್ನು ಹಾಕಿದರೇ ಬೇಸರವಿಲ್ಲದೇ ಕೇಳುತ್ತಾನಂತೆ. ಈ ಹಾಡನ್ನು ಇಡಲಿಲ್ಲ ಎಂದರೇ  ಆತ ಊಟ ಸಹ ಮಾಡುವುದಿಲ್ಲವಂತೆ. ಅಷ್ಟೊಂದು ಈ ಹಾಡು ಜಹಂಗೀರ್‍ ನನ್ನು ಫಿದಾ ಮಾಡಿದೆ. ಇನ್ನೂ ಈ ಹಾಡಿನ ಬಗ್ಗೆ ಕೆಲವೊಂದು ವಿಚಾರಗಳನ್ನು ಕರೀನಾ ಕಪೂರ್‍ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮಗನಿಗೆ ಆ ಹಾಡು ಎಂದರೇ ಎಷ್ಟು ಇಷ್ಟ. ಆ ಹಾಡು ಹಾಕದೇ ಇದ್ದರೇ ಆತ ಊಟ ಸಹ ಮಾಡುವುದಿಲ್ಲ ಎಂದು ಆಕೆ ಹೇಳಿದ್ದಾರೆ.

ಅಷ್ಟೆಅಲ್ಲದೇ ಕರೀನಾ ಕಪೂರ್‍ ಪುತ್ರ ಜಹಂಗೀರ್‍ ಈ ಹಾಡನ್ನು ಹಿಂದಿ ಭಾಷೆಯಲ್ಲಿ ಕೇಳುವುದಿಲ್ಲವಂತೆ ತೆಲುಗಿನಲ್ಲೇ ಆ ಹಾಡನ್ನು ಕೇಳಲು ಇಷ್ಟಪಡುತ್ತಾನಂತೆ. ಬೇರೆ ಭಾಷೆಯಲ್ಲಿ ಆ ಹಾಡನ್ನಿಟ್ಟರೇ ಅಳುತ್ತಾನಂತೆ. ಇನ್ನೂ ರಾಮ್ ಚರಣ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಸ್ಟೆಪ್ಸ್ ಸಹ ಆತನಿಗೆ ತುಂಬಾ ಇಷ್ಟವಾಗಿದೆಯಂತೆ. ಇನ್ನೂ ಸದ್ಯ ಕರೀನಾ ಕಪೂರ್‍ ಹಂಚಿಕೊಂಡ ಈ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

Most Popular

To Top