Film News

ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಗುಡ್ ಅಂಡ್ ಬ್ಯಾಡ್ ನ್ಯೂಸ್, ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ, ಕಾರಣ ಅದೇನಾ?

ಮಹಾನಟಿ ಫೇಂನ ಕೀರ್ತಿ ಸುರೇಶ್ ಸದ್ಯ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡಲಿದ್ದಾರಂತೆ. ಅದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಜೊತೆಗೆ ಬ್ಯಾಡ್ ನ್ಯೂಸ್ ಎಂದೂ ಸಹ ಹೇಳಲಾಗುತ್ತಿದೆ. ಆ ಕಾರಣದಿಂದಲೇ ಆಕೆ ಸಿನೆಮಾಗಳಿಂದ ಬ್ರೇಕ್ ಸಹ ತೆಗೆದುಕೊಳ್ಳಲಿದ್ದಾರಂತೆ. ಸದ್ಯ ಇಂತಹ ಸುದ್ದಿಯೊಂದು ಎಲ್ಲಾ ಕಡೆ ಹರಿದಾಡುತ್ತಿದೆ. ಅಷ್ಟಕ್ಕೂ ಆ ಸುದ್ದಿ ಏನು ಎಂಬ ವಿಚಾರಕ್ಕೆ ಬಂದರೇ.

ಬಹುಬೇಡಿಕೆ ನಟಿ ಕೀರ್ತಿ ಸುರೇಶ್ ರವರ ಸಿನಿ ಕೆರಿಯರ್‍ ಒಳ್ಳೆಯ ಹಾದಿಯಲ್ಲಿ ಸಾಗುತ್ತಿದೆ. ಸರ್ಕಾರುವಾರಿ ಪಾಠ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡ ಈಕೆ ಈ ಸಿನೆಮಾದಲ್ಲಿ ನೆಗಟೀವ್ ಶೇಡ್ಸ್ ಜೊತೆಗೆ ಮೊದಲ ಬಾರಿಗೆ ಗ್ಲಾಮರಸ್ ಆಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪೆದ್ದನ್ನ ಸಿನೆಮಾದಲ್ಲಿ ರಜನಿಕಾಂತ್ ರವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಚಿರು ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾನಿ ಅಭಿನಯದ ದಸರಾ ಸಿನೆಮಾದಲ್ಲೂ ಸಹ ಆಕೆ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಇದೇ ಮಾ.30 ರಂದು ತೆರೆಗೆ ಬರಲಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಇದೀಗ ಕೀರ್ತಿ ಸುರೇಶ್  ರವರಿಗೆ ಸಂಬಂಧಿಸಿದ ಸುದ್ದಿಯೊಂದು ಕೇಳಿಬರುತ್ತಿದೆ.

ಕೆಲವು ದಿನಗಳಿಂದ ನಟಿ ಕೀರ್ತಿ ಸುರೇಶ್ ಗುಡ್ ನ್ಯೂಸ್ ಹೇಳಲಿದ್ದಾರೆಂಬ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರಂತೆ. ಈಗಾಗಲೇ ಅನೇಕ ಬಾರಿ ಕೀರ್ತಿ ಸುರೇಶ್ ಗೆ ಸಂಬಂಧಿಸಿದಂತೆ ಮದುವೆಯ ವಿಚಾರ ಕೇಳಿಬರುತ್ತಲೇ ಇದೆ. ಆದರೆ ಈ ಬಾರಿ ಆಕೆಯ ಮದುವೆ ಪಕ್ಕಾ ಎಂದು ಹೇಳಲಾಗುತ್ತಿದೆ. ಸದ್ಯ ಕೀರ್ತಿ ಸುರೇಶ್ ಕೈಯಲ್ಲಿ ಆರು ಸಿನೆಮಾಗಳಿವೆ. ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಬೇಗ ಮುಗಗಿಸಿ ಎಂದು ಚಿತ್ರತಂಡಕ್ಕೆ ಕೀರ್ತಿ ಮನವಿ ಮಾಡಿದ್ದಾರಂತೆ. ಉಳಿದ ಪ್ರಾಜೆಕ್ಟ್ ಗಳನ್ನೂ ಸಹ ಆದಷ್ಟು ಶೀಘ್ರವಾಗಿ ಮುಗಿಸಬೇಕೆಂದು ಮನವಿ ಮಾಡುತ್ತಿದ್ದಾರಂತೆ. ಜೊತೆಗೆ ಹೊಸ ಸಿನೆಮಾಗಳನ್ನು ಸಹ ಒಪ್ಪಿಕೊಳ್ಳುತ್ತಿಲ್ಲವಂತೆ. ಈ ಕಾರಣದಿಂದ ಈ ವರ್ಷ ಆಕೆಯ ಮದುವೆ ಫಿಕ್ಸ್ ಎಂಬ ಮಾತುಗಳು ಕೇಳಿಬರುತ್ತಿವೆ.

ನಟಿ ಕೀರ್ತಿ ಸುರೇಶ್ ತನ್ನ ಚಿಕ್ಕಂದಿನ ಸ್ನೇಹಿತನನ್ನೇ ಮದುವೆಯಾಗಲಿದ್ದಾರಂತೆ. ಸದ್ಯ 30 ವರ್ಷ ವಯಸ್ಸಾಗಿರುವ ಕೀರ್ತಿ ಸುರೇಶ್ ಮದುವೆಯಾಗಿ ಫ್ಯಾಮಿಲಿ ಲೈಫ್ ಶುರು ಮಾಡಬೇಕೆಂದು ಕೀರ್ತಿ ಪ್ಲಾನ್ ಸಹ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಸುದ್ದಿ ಬರಲಿದೆ ಎನ್ನಲಾಗುತ್ತಿದೆ. ಕೀರ್ತಿ ಸುರೇಶ್ ಮದುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಜೊತೆಗೆ ಬ್ಯಾಡ್ ನ್ಯೂಸ್ ಸಹ ಎನ್ನಲಾಗುತ್ತಿದೆ.

Most Popular

To Top