ತಮ್ಮ ಮದುವೆ ಪೊಟೋಗಳನ್ನು ಡಿಲೀಟ್ ಮಾಡಿದ ಮೆಗಾ ಅಳಿಯ ಚೈತನ್ಯ, ನಿಹಾರಿಕಾ ಹಾಗೂ ಚೈತನ್ಯ ಬೇರೆಯಾಗಲಿದ್ದಾರಾ?

ಮೆಗಾ ಕುಟುಂಬದ ನಾಗಬಾಬು ರವರ ಪುತ್ರಿ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಗಡ್ಡ ರವರ ವಿವಾಹ ರಾಜಸ್ಥಾನದ ಉದಯಪುರ್‍ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಕಳೆದ ಮೂರು ವರ್ಷಗಳ ಹಿಂದೆ ನೆರವೇರಿತ್ತು. ಅಲ್ಲಿಂದ ಅನ್ಯೋನ್ಯವಾಗಿ ನಡೆಯುತ್ತಿದ್ದ ಅವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದ್ದು, ಅವರಿಬ್ಬರೂ ಬೇರೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಇದಕ್ಕೆ ಪುಷ್ಟೀ ನೀಡುವಂತೆ ಚೈತನ್ಯ ಮದುವೆ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಮೂರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುವ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ರವರ ನಡುವೆ ವಿಬೇದಗಳು ಉಂಟಾಗಿದೆ ಎಂಬ ಸುದ್ದಿಯೊಂದು ಇದೀಗ ಹಾಟ್ ಟಾಪಿಕ್ ಆಗಿದೆ. ಸೋಷಿಯಲ್ ಮಿಡಿಯಾದಲ್ಲಿ ಇಬ್ಬರೂ ಸಹ ಅನ್ ಫಾಲೋ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಚೈತನ್ಯ ತನ್ನ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ ಮದುವೆ ಪೊಟೋಗಳನ್ನೂ ಸಹ ಡಿಲೀಟ್ ಮಾಡಿದ್ದಾರೆ. ನಿಹಾರಿಕಾ ಇರುವಂತಹ ಒಂದು ಪೊಟೋವನ್ನು ಸಹ ಚೈತನ್ಯ ತನ್ನ ಇನ್ಸ್ಟಾ ಖಾತೆಯಲ್ಲಿ ಉಳಿಸಿಕೊಂಡಿಲ್ಲ. ಇದರಿಂದ ಅವರಿಬ್ಬರ ನಡುವೆ ವಿಬೇದಗಳು ಶುರುವಾಗಿದೆ. ಅವರಿಬ್ಬರ ವೈವಾಹಿಕ ಜೀವನ ಸರಿಯಾಗಿ ಸಾಗುತ್ತಿಲ್ಲ. ಈ ಕಾರಣದಿಂದಲೇ ಅವರಿಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಅನ್ ಫಾಲೋ ಮಾಡಿಕೊಂಡಿದ್ದಾರೆ. ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂಬ ಕಥನಗಳು ಶುರುವಾಗಿದೆ.

ಇನ್ನೂ ಸೆಲೆಬ್ರೆಟಿಗಳು ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಿಂದ ಅನ್ ಫಾಲೋ ಆಗುವುದು, ಪೊಟೋಗಳನ್ನು ಡಿಲೀಟ್ ಮಾಡುವುದು ಬೇರೆಯಾಗುವುದಕ್ಕೂ ಮುಂಚೆ ಮಾಡುವ ಮೊದಲ ಕೆಲಸ ಎಂದು ಅನೇಕರ ಭಾವನೆಯಾಗಿದೆ. ಈ ಹಾದಿಯಲ್ಲೇ ನಿಹಾರಿಕಾ ಹಾಗೂ ಚೈತನ್ಯ ಸಹ ಅದೇ ರೀತಿಯ ಕೆಲಸ ಮಾಡಿದ್ದು ಅವರ ನಡುವೆ ಎಲ್ಲವೂ ಸರಿಯಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಇನ್ನೂ ಚೈತನ್ಯ ಮಾತ್ರ ನಿಹಾರಿಕಾ ಜೊತೆಗಿರುವ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇನ್ನೂ ನಿಹಾರಿಕಾ ಮಾತ್ರ ಯಾವುದೇ ಪೊಟೋಗಳನ್ನು ಡಿಲೀಟ್ ಮಾಡಿಲ್ಲ. ಇನ್ನೂ ಈ ಜೋಡಿಯ ನಡುವೆ ವಿಬೇದಗಳು ಸೃಷ್ಟಿಯಾಗಿರುವ ಬಗ್ಗೆ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇನಷ್ಟೆ ತಿಳಿದು ಬರಬೇಕಿದೆ. ಈ ಬಗ್ಗೆ ಅವರು ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ 2020 ರ ಡಿಸೆಂಬರ್‍ 9 ರಂದು ರಾಜಸ್ಥಾನದ ಉದಯಪುರ ದಲ್ಲಿ ಅವರ ವಿವಾಹ ತುಂಬಾ ಗ್ರಾಂಡ್ ಆಗಿ ನೆರವೇರಿತು. ಇನ್ನೂ ಆಂಕರಿಂಗ್ ಮೂಲಕ ತೆರೆಗೆ ನಿಹಾರಿಕಾ ಪರಿಚಯವಾದರು. ಬಳಿಕ ಹಿರೋಯಿನ್ ಆಗಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಆ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಪಿಂಕ್ ಎಲಿಫೆಂಟಾ ಎಂಬ ಪ್ರೊಡಕ್ಷನ್ ಪ್ರಾರಂಭಿಸಿ ನಿರ್ಮಾಪಕಿಯಾಗಿದ್ದಾರೆ. ಸದ್ಯ ನಿಹಾರಿಕಾ ಹಾಗೂ ಚೈತನ್ಯ ಬೇರೆಯಾಗುತ್ತಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.