ರಾಮ್ ಚರಣ್ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ ಮಾಡಲ್, ಆತನಿಗೆ ಮದುವೆಯಾಗಿದೆ ಅಂತಾ ಸುಮ್ನೆ ಬಿಟ್ಟೆ ಎಂದ ನಟಿ….!

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆಗಿರುವ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಆತ ಎಂದರೇ ಕೇವಲ ಸಾಮಾನ್ಯ ಅಭಿಮಾನಿಗಳಿಗೆ ಮಾತ್ರವಲ್ಲದೇ ಸಿನಿರಂಗ ಸ್ಟಾರ್‍ ಗಳೂ ಸಹ ತುಂಬಾನೆ ಅಭಿಮಾನಿಸುತ್ತಾರೆ. ಇದೀಗ ಮಾಡಲ್ ಕಂ ನಟಿಯೊಬ್ಬರು ರಾಮ್ ಚರಣ್ ರವರ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ಆತನಿಗೆ ಮದುವೆಯಾಗಿದೆ ಅಂತಾ ಸುಮ್ಮನೆ ಬಿಟ್ಟುಬಿಟ್ಟೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಎಂದರೇ ಸಾಮಾನ್ಯರಿಗೆ ಮಾತ್ರವಲ್ಲದೇ ಸೆಲೆಬ್ರೆಟಿಗಳಿಗೂ ಸಹ ತುಂಬಾನೆ ಇಷ್ಟ ಎನ್ನಬಹುದು. ಆತನನ್ನು ಅಭಿಮಾನಿಸುವಂತಹ ಸೆಲೆಬ್ರೆಟಿಗಳಲ್ಲಿ ಮಾಡಲ್ ಕಂ ನಟಿ ಜ್ಞಾನೇಶ್ವರಿ ಸಹ ಒಬ್ಬರಾಗಿದ್ದಾರೆ. ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ಈಕೆ ನಟಿಯಾಗಿ ಸಾಗುತ್ತಿದ್ದಾರೆ. ಪೆಳ್ಳಿ ಚೂಪುಲು ಎಂಬ ತೆಲುಗು ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಸಣ್ಣ ಪುಟ್ಟ ಸಿನೆಮಾಗಳಲ್ಲಿ ನಟಿಯಾಗಿ ಕ್ರೇಜ್ ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಮಂತ್ ಆಫ್ ಮಧು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಸದ್ಯ ಸ್ಟ್ರೀಮಿಂಗ್ ಆಗುತ್ತಿರುವ ನಾಗಚೈತನ್ಯ ಅಭಿನಯದ ಧೂತ ಎಂಬ ವೆಬ್ ಸಿರೀಸ್ ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಇನ್ನೂ ಧೂತ ಸಿರೀಸ್ ನ ಪ್ರಮೋಷನ್ ನಿಮಿತ್ತ ಸಂದರ್ಶನವೊಂದರಲ್ಲಿ ನಟಿ ಜ್ಞಾನೇಶ್ವರಿ ಕೆಲವೊಂದು ಸಂಚಲನಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದರು. ಈ ವೇಳೆ ಆಕೆಗೆ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಎಂದರೇ ಎಷ್ಟು ಇಷ್ಟ ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ಹಿಂದೆ ಸಹ ಜ್ಞಾನೇಶ್ವರಿ ತಾನು ಬಾಲ್ಯದಿಂದಲೇ ರಾಮ್ ಚರಣ್ ರವರಿಗೆ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದರು, ಆತನ ಪೊಟೋಗಳನ್ನು ಕಟ್ ಮಾಡಿಕೊಂಡು ತನ್ನ ಪುಸ್ತಕದಲ್ಲಿ ಅಂಟಿಸಿಕೊಂಡಿದ್ದೆ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಆಕೆ ರಾಮ್ ಚರಣ್ ಬಗ್ಗೆ ಮಾತನಾಡಿದ್ದಾರೆ. ನನ್ನ ಬಾಲ್ಯದಲ್ಲಿ ಚರಣ್ ರವರ ಪೊಟೋಗಳನ್ನು ಅಂಟಿಸಿಕೊಂಡಿದ್ದ ಪುಸ್ತಕ ಹಾಗೇ ಇದೆ. ಈ ಬಾರಿ ಸಂದರ್ಶನದಲ್ಲಿ ಆ ಪುಸ್ತಕವನ್ನು ತೋರಿಸುತ್ತೇನೆ ಎಂದಿದ್ದಾರೆ.

ಇನ್ನೂ ಚರಣ್ ನಿಮ್ಮ ಮುಂದೆ ಎದುರಾದರೇ ಆತನನ್ನು ಏನು ಕೇಳುತ್ತೀರಿ ಎಂದು ಆಂಕರ್‍ ಕೇಳಿದ್ದರೇ ಅದಕ್ಕೆ ಜ್ಞಾನೇಶ್ವರಿ ಉತ್ತರಿಸುತ್ತಾ, ಹತ್ತು ವರ್ಷದ ಹಿಂದೆ ಚರಣ್ ಸಿಕ್ಕಿದ್ದರೇ ನನ್ನ ಮದುವೆಯಾಗುತ್ತೀರಾ ಎಂದು ಕೇಳುತ್ತಿದ್ದೆ. ಈಗ ನಿಮ್ಮೊಂದಿಗೆ ಕೆಲಸ ಮಾಡಬೇಕೆಂಬ ಆಸೆಯಿದೆ ಎಂದು ಮಾತ್ರ ಕೇಳುತ್ತೇನೆ ಎಂದಿದ್ದಾರೆ. ಇನ್ನೂ ಜ್ಞಾನೇಶ್ವರಿ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.