Film News

ನಾಗಚೈತನ್ಯರಂತಹ ವ್ಯಕ್ತಿಯನ್ನು ಪ್ರತಿಯೊಬ್ಬ ಹುಡುಗಿ ಬಯಸುತ್ತಾಳೆ ಎಂದ ನಟಿ ದಕ್ಷಾ ನಗಾರ್ಕರ್…!

ನಟಿ ದಕ್ಷಾ ನಗಾರ್ಕರ್‍ ಹೋರಾ ಹೋರಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಆಕೆ ಮಾಸ್ ಮಹಾರಾಜ ರವಿತೇಜ ಅಭಿನಯದ ರಾವಣಾಸುರ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ಏ.7 ರಂದು ತೆರೆಗೆ ಬರಲಿದೆ. ಈ ಹಿಂದೆ ರವಿತೇಜ ಅಭಿನಯದ ಧಮಾಕ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಆಗಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ.

ಸದ್ಯ ರಾವಣಾಸುರ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿದೆ. ಈ ಪ್ರಮೋಷನ್ ನಿಮಿತ್ತ ನಟಿ ದಕ್ಷಾ ನಗಾರ್ಕರ್‍ ಸಹ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ನಾಗರ್ಜುನ ಹಾಗೂ ನಾಗಚೈತನ್ಯ ನಟಿಸಿದ ಬಂಗರರಾಜು ಸಿನೆಮಾದಲ್ಲಿ ಹಾಡೊಂದರಲ್ಲಿ ಕುಣಿದಿದ್ದರು. ಜೊತೆಗೆ ಬಂಗಾರರಾಜು ಸಿನೆಮಾದ ಈವೆಂಟ್ ನಲ್ಲಿ ನಾಗಚೈತನ್ಯಗೆ ಕಣ್ಣುಗಳ ಮೂಲಕ ಸಜ್ಞೆ ಮಾಡಿದ್ದು ಅಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈ ಕಾರಣದಿಂದ ಅವರಿಬ್ಬರ ನಡುವೆ ರಿಲೇಷನ್ ಶಿಪ್ ಇದೇ ಎಂಬ ಸುದ್ದಿಗಳು ಕೇಳಿಬಂದವು. ಇದೀಗ ದಕ್ಷಾ ನಾಗಚೈತನ್ಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ದಕ್ಷಾ ನಾಗಚೈತನ್ಯ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾಗಚೈತನ್ಯ ತುಂಬಾ ಸಿಂಪಲ್ ಆಗಿರುತ್ತಾರೆ. ಅವರಿಗೆ ಮಹಿಳೆಯರ ಮೇಲೆ ತುಂಬಾ ಗೌರವವಿದೆ. ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇನ್ನೂ ಬಂಗರರಾಜು ಸಿನೆಮಾದ ಶೂಟಿಂಗ್ ಸಮಯದಲ್ಲಿ ಒಂದು ದೃಶ್ಯದಲ್ಲಿ ನನ್ನನ್ನು ತಬ್ಬಿಕೊಂಡು ಕಿಸ್ ಮಾಡುವ ಸನ್ನಿವೇಶ ಇರುತ್ತದೆ. ಅದರಲ್ಲಿ ನಾಗಚೈತನ್ಯ ತುಂಬಾನೆ ಕಿರಿಕಿರಿ ಅನುಭವಿಸುತ್ತಿದ್ದರು. ಇನ್ನೂ ಅದು ಮಾಡಲೇ ಬೇಕಾದ್ದರಿಂದ ಆ ದೃಶ್ಯದ ಶೂಟಿಂಗ್ ಮುಗಿದ ಬಳಿಕ ಬಂದು ಕ್ಷಮೆ ಕೇಳುತ್ತಿದ್ದರು. ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ದಕ್ಷಾ ಹೇಳಿದ್ದಾರೆ. ಸದ್ಯ ದಕ್ಷಾ ನೀಡಿರುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಚೈತು ಯಂಗ್ ಬ್ಯೂಟಿ ಶೋಬಿತಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ರೂಮರ್‍ ಗಳು ಕೇಳಿಬರುತ್ತಿವೆ. ಈ ಬಗ್ಗೆ ಅನೇಕ ಬಾರಿ ಚೈತನ್ಯ ಟೀಂ ಹಾಗೂ ಶೋಭಿತಾ ಸಹ ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದರೂ ರೂಮರ್‍ ಗಳು ಮಾತ್ರ ನಿಂತಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಲಂಡನ್ ನ ರೆಸ್ಟೊರೆಂಟ್ ಒಂದರಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಡಿನ್ನರ್‍ ಗಾಗಿ ಬಂದಂತಹ ಪೊಟೋ ಒಂದು ವೈರಲ್ ಆಗಿತ್ತು.

Most Popular

To Top