Film News

ಗುಂಟೂರು ಖಾರಂ ಸಿನೆಮಾದ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಸಿತಾರಾ, ಶ್ರೀಲೀಲಾ ರನ್ನೆ ಮೀರಿಸಿದ ಮಹೇಶ್ ಪುತ್ರಿ….!

ಟಾಲಿವುಡ್ ಸ್ಟಾರ್‍ ನಟ ಪ್ರಿನ್ಸ್ ಮಹೇಶ್ ಬಾಬು ರವರ ಪುತ್ರಿ ಸಿತಾರಾ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಸಿತಾರಾ ಗೆ ದೊಡ್ಡದಾದ ಅಭಿಮಾನಿ ಬಳಗವೇ ಸೋಷಿಯಲ್ ಮಿಡಿಯಾದಲ್ಲಿದೆ. ಆಕೆಯ ಪೋಸ್ಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿರುತ್ತವೆ. ಇದೀಗ ತನ್ನ ತಂದೆಯ ಗುಂಟೂರು ಖಾರಂ ಸಿನೆಮಾದ ದಮ್ ಮಸಾಲಾ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು, ಈ ಹಾಡಿನಲ್ಲಿ ಕುಣಿದ ಶ್ರೀಲೀಲಾರನ್ನೆ ಮೀರಿಸಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಟಾಲಿವುಡ್ ಸ್ಟಾರ್‍ ಪ್ರಿನ್ಸ್ ಮಹೇಶ್ ಬಾಬು ರವರ ಪುತ್ರಿ ಸಿತಾರಾ ಸಿನೆಮಾಗಳಲ್ಲಿ ಎಂಟ್ರಿ ಕೊಡಲು ಸಿದ್ದವಾಗುತ್ತಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಸಹ ಆಕೆ ನಟಿಯಾಗುವ ಕನಸು ಕಾಣುತ್ತಿದ್ದಾಗಿ ಹೇಳಿಕೊಂಡಿದ್ದರು. ತನ್ನ ತಂದೆಯ ಸರ್ಕಾರುವಾರಿ ಪಾಠ ಸಿನೆಮಾದ ಪೆನ್ನಿ ಎಂಬ ಹಾಡಿನಲ್ಲಿ ಆಕೆ ಕಾಣಿಸಿಕೊಂಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಸಿತಾರಾ ಆಗಾಗ ಕೆಲವೊಂದು ಹಾಡುಗಳಿಗೆ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ. ಕ್ಲಾಸಿಕಲ್, ವೆಸ್ಟ್ರನ್ ಹೀಗೆ ಎಲ್ಲವನ್ನೂ ಮಿಕ್ಸ್ ಮಾಡಿ ವಿಡಿಯೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಸಿನೆಮಾದ ದಮ್ ಮಸಾಲಾ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಗುಂಟೂರು ಖಾರಂ ಸಿನೆಮಾದಲ್ಲಿ ನಟಿ ಶ್ರೀಲೀಲಾ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಆಕೆಯೊಂದಿಗೆ ನೃತ್ಯ ಮಾಡಲು ನನಗೂ ಸಹ ಕಷ್ಟವಾಗಿತ್ತು ಎಂದು ನಟ ಮಹೇಶ್ ಬಾಬು ಸಹ ಹೇಳಿದ್ದರು. ಇದೀಗ ಸಿತಾರಾ ದಮ್ ಮಸಾಲಾ ಹಾಡಿಗೆ ಸ್ಟೆಪ್ಸ್ ಹಾಕಿದ್ದು, ಶ್ರೀಲೀಲಾರನ್ನು ಮೀರಿಸುವಂತಿದೆ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಈ ಮಾದರಿಯಲ್ಲಿ ಸ್ಟೆಪ್ಸ್ ಹಾಕಿದರೇ ಒಂದು ವೇಳೆ ಸಿನೆಮಾಗಳಲ್ಲಿ ನಟಿಯಾದರೇ ಶ್ರೀಲೀಲಾ ರನ್ನು ಪಕ್ಕಾ ಬೀಟ್ ಮಾಡುತ್ತಾರೆ ಎಂದು ಆಕೆಯ ಫಾಲೋವರ್ಸ್ ಅಭಿಪ್ರಾಯಪಡುತ್ತಿದ್ದಾರೆ. ಸದ್ಯ ಸಿತಾರಾ ದಮ್ ಮಸಲಾ ಹಾಡಿಗೆ ಸ್ಟೆಪ್ಸ್ ಹಾಕಿದ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವ ಸಿತಾರ ಫಾಲೋವರ್ಸ್ ಸೇರಿದಂತೆ ಮಹೇಶ್ ಬಾಬು ಫ್ಯಾನ್ಸ್ ಸಹ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Most Popular

To Top