Film News

ನಾನು ಸತ್ತಿಲ್ಲ ಎಂದು ವಿಡಿಯೋ ಹರಿಬಿಟ್ಟ ಪೂನಂ, ಪಬ್ಲಿಸಿಟಿಗಾಗಿ ಇಷ್ಟೊಂಡು ಕೀಳುಮಟ್ಟಕ್ಕೆ ಇಳಿಬೇಕಾ ಎಂದು ತರಾಟೆಗೆ ತೆಗೆದುಕೊಂಡ ನೆಟ್ಟಿಗರು….!

ನಿನ್ನೆಯಷ್ಟೆ ಬಾಲಿವುಡ್ ಬೋಲ್ಡ್ ಬ್ಯೂಟಿ ಪೂನಂ ಪಾಂಡೆ ಕ್ಯಾನ್ಸರ್ ಕಾರಣದಿಂದ ಮೃತಪಟ್ಟಿದ್ದಾರೆ, ಗರ್ಭಕಂಠ ಕ್ಯಾನ್ಸರ್ ಕಾರಣದಿಂದ ಆಕೆ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಆಕೆಯ ಅಧಿಕೃತ ಇನ್ಸ್ಟಾ ಪೇಜ್ ನಲ್ಲಿ ಆಕೆಯ ಟೀಂ ಹಂಚಿಕೊಂಡಿತ್ತು. ಇದೀಗ ಆಕೆ ನಾನು ಸತ್ತಿಲ್ಲ. ಬದುಕಿದ್ದೇನೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿ ಮಾಡಿದ್ದಾಗಿ ಆಕೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ನೋಡಿದ ಅನೇಕರು ಆಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪಬ್ಲಿಸಿಟಿಗಾಗಿ ಅಷ್ಟೊಂದು ಕೀಳುಮಟ್ಟಕ್ಕೆ ಇಳಿಯಬೇಕಾ, ಆಕೆಯ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಹ ಕೇಳಿಬರುತ್ತಿದೆ.

ನಟಿ ಪೂನಂ ಪಾಂಡೆಗೆ ಇನ್ನೂ 32 ವಯಸ್ಸು, ಚಿಕ್ಕ ವಯಸ್ಸಿನಲ್ಲೇ ಆಕೆ ಗರ್ಭಕಂಠ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾಗಿ ಸುದ್ದಿ ಹೊರಬರುತ್ತಿದ್ದಂತೆ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದರು. ಅನೇಕರು ಸಂತಾಪ ಸಹ ಸೂಚಿಸಿದರು. ಆಕೆ ಈ ಪೋಸ್ಟ್ ಹಂಚಿಕೊಂಡ ಸಮಯದಲ್ಲೇ ಅನೇಕರು ಇದು ಒಂದು ಫೇಕ್ ಪೋಸ್ಟ್ ಎಂದೂ ಸಹ ಅಂದಾಜಿಸಿದ್ದರು. ಏಕೆಂದರೇ ಈ ಹಿಂದೆ ಸಹ ಪೂನಂ ಇದೇ ಮಾದರಿಯಲ್ಲಿ ಫೇಕ್ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಆಕೆ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎನ್ನಲಾಗುತ್ತಿದೆ. ತನ್ನ ಇನ್ಸ್ಟಾ ಖಾತೆಯಲ್ಲಿ ಗರ್ಭಕಂಠ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾಗಿ ಆಕೆಯ ಟೀಂ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿತ್ತು. ಜೊತೆಗೆ ಆಕೆಯ ಅಂತ್ಯಸಂಸ್ಕಾರ ಸಹ ಆಕೆಯ ತವರಿನಲ್ಲೇ ನಡೆಯಲಿದೆ ಎಂದೂ ಸಹ ಹೇಳಲಾಗಿತ್ತು.

ಇದೀಗ ಆಕೆ ಮತ್ತೆರಡು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋಗಳ ಮೂಲಕ ತಾನೂ ಸತ್ತಿಲ್ಲ ಬದುಕಿದ್ದೇನೆ ಎಂದು ದೃಢಪಡಿಸಿದ್ದಾರೆ. ಪೂನಂ ಸಾವಿನ ಸುದ್ದಿಯ ಜೊತೆಗೆ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ತುಂಬಾನೆ ಚರ್ಚೆಯಾಗಿತ್ತು. ತಾನು ಹಂಚಿಕೊಂಡ ವಿಡಿಯೋದಲ್ಲಿ ತಾನು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆ ರೀತಿಯ ಪೋಸ್ಟ್ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಪೂನಂ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ದೇಶವನ್ನೆ ಸತ್ತಿದ್ದೇನೆ ಎಂದು ನಂಬಿಸಿ ಡ್ರಾಮಾ ಮಾಡಿದ್ದೀರಾ, ಜಾಗೃತಿ ಮೂಡಿಸಲು ಈ ರೀತಿಯಲ್ಲಿ ಮಾಡಬೇಕೇ, ಅಥವಾ ಪಬ್ಲಿಸಿಟಿಗಾಗಿ ಈ ಚೀಪ್ ಟ್ರಿಕ್ಸ್ ಬಳಸುವುದೇ ಎಂದು ಅನೇಕರು ಆಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪೂನಂ ಸಹ ರಿಯಾಕ್ಟ್ ಆಗಿದ್ದು, ನೀವು ಎಷ್ಟಾದರೂ ಬೈದುಕೊಳ್ಳಿ ಎಂದು, ಅಂತಹ ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

Most Popular

To Top