News

ತಿಮ್ಮಪ್ಪನ ಭಕ್ತರಿಗೆ ಅಲರ್ಟ್, ಫೆಬ್ರವರಿ ಮಾಹೆಯಲ್ಲಿ ಆ ಮೂರು ದಿನ ದರ್ಶನ ಹಾಗೂ ಸೇವೆಗಳಿರಲ್ಲ….!

ಭಾರತ ದೇಶದ ಅತ್ಯಂತ ಶ್ರೀಮಂತ ಹಾಗೂ ಖ್ಯಾತಿ ಪಡೆದುಕೊಂಡ ದೇವಾಲಯಗಳ ಸಾಲಿನಲ್ಲಿ ಆಂಧ್ರಪ್ರದೇಶದ ತಿರುಪತಿ ಸಹ ಒಂದಾಗಿದೆ. ಪ್ರತಿನಿತ್ಯ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಇದೀಗ ಫೆಬ್ರವರಿ ಮಾಹೆಯಲ್ಲಿ ಮೂರು ದಿನಗಳ ಕಾಲ ದರ್ಶನ ಹಾಗೂ ಸೇವೆಗಳಿರುವುದಿಲ್ಲ. ಅದಕ್ಕೆ ಕಾರಣ ಸಹ ಇಲ್ಲಿದೆ ನೋಡಿ

ಫೆಬ್ರವರಿ ಮಾಹೆಯಲ್ಲಿ ರಥಸಪ್ತಮಿ ಆಚರಣೆಯಲ್ಲಿದ್ದು, ಅದರ ಅಂಗವಾಗಿ ತಿರುಮಲದಲ್ಲಿ ದರ್ಶನ ಸೇರಿದಂತೆ ಸೇವೆಗಳಿಗೆ ಬ್ರೇಕ್ ನೀಡಿದೆ. ರಥಸಪ್ತಮಿಯಂದು ವಿಐಪಿ ಬ್ರೇಕ್ ದರ್ಶನ ಹೊರತುಪಡಿಸಿ ಅಂಗವಿಕಲರು, ವಯೋವೃದ್ದರು ಹಾಗೂ ಚಂತಿ ಮಕ್ಕಳ ಪೋಷಕರಿಗೆ ವಿಶೇಷ ದರ್ಶನ ಇರುವುದಿಲ್ಲ. ಆದ ದಿನದ ಸೇವೆಗಳನ್ನು ಸಹ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ರಥಸಪ್ತಮಿಯಂದು ಬರುವಂತಹ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ರಥಸಪ್ತಮಿಯಂದು ತಿಮ್ಮಪ್ಪ ಏಳು ವಾಹನಗಳ ಮೇಲೆ ಕಾಣಿಸಿಕೊಳ್ಳುತ್ತಾರೆ. ಈ ಮಂಗಳಕರವಾದ ದಿನದಂದು ಶ್ರೀದೇವಿ, ಭೂದದೇವಿ ಹಾಗೂ ಮಲಯಪ್ಪ ಸ್ವಾಮಿಯನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ಭೇಟಿ ನೀಡುತ್ತಾರೆ.

ಈ ಕಾರಣದಿಂದ ಭಕ್ತರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಟಿಟಿಡಿ ರಥಸಪ್ತಮಿಯಂದು ಸರ್ವದರ್ಶನಂ ಟೈಂ ಸ್ಲಾಟ್ ಟೋಕನ್ ಗಳು ಹಾಗೂ ಅರ್ಜಿತ್ ಸೇವೆಗಳು, ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ. ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣೋತ್ಸವ, ಅರ್ಜಿತ ಬ್ರಹ್ಮೋತ್ಸವ, ಊಂಜಾಲ್ ಸೇವೆ, ಸಹಸ್ರ ದೀಪಾಲಂಕಾರ ಮೊದಲಾದ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಟಿಟಿಡಿ ಹಂಚಿಕೊಂಡಿದೆ. ಇನ್ನೂ ರಥಸಪ್ತಮಿಯಂದು ಶ್ರೀವಾರಿ ವಾಹನ ಸೇವೆಯನ್ನು ಎಲ್ಲರೂ ನೋಡುವಂತೆ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿಯಲ್ಲಿ ನೇರಪ್ರಸಾರ ಸಹ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Most Popular

To Top