Film News

ದುಬೈನಲ್ಲಿ ಹುಲಿಯೊಂದಿಗೆ ಕಾಣಿಸಿಕೊಂಡ ದರ್ಶನ್, ವೈರಲ್ ಆದ ವಿಡಿಯೋ, ಪೊಟೋ……!

ಸ್ಯಾಂಡಲ್ ವುಡ್ ಸ್ಟಾರ್‍ ನಟ ದರ್ಶನ್ ಕನ್ನಡ ಸಿನಿರಂಗದಲ್ಲಿ ದೊಡ್ಡ ಫೇಂ ಇರುವ ನಟರಾಗಿದ್ದಾರೆ. ಇನ್ನೂ ಅನೇಕ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ದರ್ಶನ್ ಕಾಟೇರಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ. ಸದ್ಯ ಈ ಸಿನೆಮಾದ ಪ್ರದರ್ಶನಕ್ಕಾಗಿ ದರ್ಶನ್ ದುಬೈಗೆ ಹೋಗಿದ್ದರು. ಅಲ್ಲಿ ಸ್ನೇಹಿತರೊಂದಿಗೆ ದುಬೈನಲ್ಲಿ ಸುತ್ತಾಡುತ್ತಿದ್ದಾರೆ. ದುಬೈನಲ್ಲಿ ಹುಲಿಯೊಂದಿಗೆ ದರ್ಶನ್ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ದುಬೈನಲ್ಲೂ ಸಹ ಕಾಟೇರಾ ಸಿನೆಮಾ ಒಳ್ಳೆಯ ಪ್ರದರ್ಶನ ಕಂಡಿದೆ. ಅಲ್ಲಿನ ಸಿನಿ ಪ್ರೇಕ್ಷಕರು ದರ್ಶನ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಬೈ ಕನ್ನಡಿಗರು ದರ್ಶನ್ ಗೆ ಹೊಸ ಬಿರುದನ್ನು ಸಹ ಕೊಟ್ಟಿದ್ದಾರೆ. ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದುಬೈ ಕನ್ನಡಿಗರು ಕರುನಾಡ ಅಧಿಪತಿ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ದುಬೈನಲ್ಲೂ ಸಹ ಕಾಟೇರಾ ಸಿನೆಮಾ ಹೌಸ್ ಪುಲ್ ಆಗಿದೆ. ಈ ವೇಳೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ತರುಣ್ ಸುಧೀರ್‍ ಹಾಗೂ ಚಿತ್ರತಂಡ ದುಬೈನಲ್ಲಿ ಅಭಿಮಾನಿಗಳ ಜೊತೆ ಸಿನೆಮಾ ನೊಡಿ ಸಂಭ್ರಮಿಸಿದ್ದಾರೆ.

ಇನ್ನೂ ದುಬೈನಲ್ಲಿರುವ ದರ್ಶನ್ ಅಲ್ಲಿನ ಸುಂದರ ತಾಣಗಳಲ್ಲಿ ವಿಹರಿಸುತ್ತಾ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ದರ್ಶನ್ ಪ್ರಾಣಿಪ್ರಿಯರು. ಅವರಿಗೆ ಪ್ರಾಣಿಗಳ ಮೇಲೆ ತುಂಬಾನೆ ಪ್ರೀತಿಯಿದೆ. ದುಬೈನಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಹುಲಿ ಸೇರಿದಂತೆ ವಿವಿಧ ಪ್ರಾಣಿಗಳೊಂದಿಗೆ ಸಮಯ ಕಳೆದಿದ್ದಾರೆ. ಅವುಗಳನ್ನು ಮುಟ್ಟಿ ಪ್ರೀತಿಯನ್ನು ಸಾರಿದ್ದಾರೆ. ವಿಶೇಷವಾಗಿ ಹುಲಿಯನ್ನು ಹತ್ತಿರದಿಂದ ನೋಡಿ ಅದರೊಂದಿಗೆ ಪೊಟೋ ಸಹ ತೆಗೆಸಿಕೊಂಡಿದ್ದಾರೆ. ಜೊತೆಗೆ ಚಿಂಪಾಜಿಯೊಂದಿಗೆ ಕಾಲ ಕಳೆದಿದ್ದಾರೆ. ಅದನ್ನು ಸಹ ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೆಬ್ಬಾವನ್ನು ಸಹ ಕೊರಳಿಗೆ ಹಾಕಿಕೊಂಡು ಸಂತಸ ಪಟ್ಟಿದ್ದಾರೆ. ಈ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಇನ್ನೂ ಇತ್ತೀಚಿಗಷ್ಟೆ ಕಾಟೇರಾ ಸಿನೆಮಾದ ಸಕ್ಸಸ್ ಪಾರ್ಟಿಯನ್ನು ಜೆಟ್ ಲಾಗ್ ಪಬ್ ನಲ್ಲಿ ಸಂಭ್ರಮಿಸಿದ್ದರು. ಅವಧಿ ಮೀರಿ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ದರ್ಶನ್, ಅಭಿಷೇಕ್ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ. ನೊಟೀಸ್ ನೀಡಿ ಎರಡು ದಿನಗಳು ಕಳೆದಿದ್ದು, ಇನ್ನೂ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ದುಬೈನಿಂದ ಬಂದ ಬಳಿಕ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top